ಕರ್ನಾಟಕ ಬಜೆಟ್

ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ರೇಷ್ಮೆ ವಲಯದ ಅಭಿವೃದ್ಧಿಗೆ ಹಲವು ಯೋಜನೆ

Shilpa D
ಬೆಂಗಳೂರು: ಕೃಷಿಯ ಜೊತೆಗೆ ರೇಷ್ಮೆ ಕೃಷಿ ವಿಸ್ತರಣಾ ಕಾರ್ಯಕ್ರಮಕ್ಕೆ ರಾಜ್ಯ ಸಮ್ಮಿಶ್ರ ಸರ್ಕಾರ ಹಲವು ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ರೇಷ್ಮೆ ಕೃಷಿ ಸಂಶೋಧನೆಗೆ 2 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ  ರೇಷ್ಮೆ ಮಾರಾಟ ಬಲ ಪಡಿಸಲು 10 ಕೋಟಿ ರುಪಾಯಿ ಅನುದಾನ ಒದಗಿಸುವುದಾಗಿ ಹೇಳಿದ್ದಾರೆ.  ಸಂತೆಮರಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಗೊಳಿಸಿ ಯುವಕರಿಗೆ ತರಬೇತಿ ನೀಡಲು ಅನುಕೂಲವಾಗುವಂತೆ 2ಕೋಟಿ ರು ಅನುದಾನ ನೀಡಲು ನಿರ್ಧರಿಸಲಾಗಿದೆ. 
ಇದಲ್ಲದೆ ಚಾಮರಾಜ ನಗರ ರೇಷ್ಮೆ ಕಾರ್ಖಾನೆಯ ಪುನಶ್ಚೇತನಕ್ಕೆ 5 ಕೋಟಿ ರೂ.ನೆರವು ಒದಗಿಸುವುದಾಗಿ ಪ್ರಕಟಿಸಿದ್ದಾರೆ.
SCROLL FOR NEXT