ಕರ್ನಾಟಕ ಬಜೆಟ್

ರಾಜ್ಯ ಬಜೆಟ್ 2019; ಮೀನುಗಾರಿಕೆಗೆ ಪ್ರಮುಖ ಆದ್ಯತೆ, 'ರೈತ ಕಣಜ' ಯೋಜನೆ ಘೋಷಣೆ

Srinivasamurthy VN
ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಇಂದು ಮಂಡನೆ ಮಾಡಿದ ರಾಜ್ಯ ಬಜೆಟ್ 2019ರಲ್ಲಿ ಮೀನುಗಾರಿಕೆಗೂ ಆದ್ಯತೆ ನೀಡಲಾಗಿದ್ದು, ಮೀನುಗಾರರಿಗಾಗಿ 'ರೈತ ಕಣಜ' ಯೋಜನೆ ಘೋಷಣೆ ಮಾಡಲಾಗಿದೆ.
ಅಂತೆಯೇ ಮೀನುಗಾರಿಕೆ ದೋಣಿಗಳಿಗೆ ಇಸ್ರೋ ಅಧಿಕೃತಗೊಳಿಸಿರುವ ಡಿ.ಎ.ಟಿ. ಉಪಕರಣ ಅಳವಡಿಸಿಕೊಳ್ಳಲು ಶೇ.50 ರಷ್ಟು ಸಹಾಯಧನ ಮತ್ತು 3 ಕೋಟಿ ರೂ. ಅನುದಾನ, ಒಳನಾಡು ಮತ್ತು ಹಿನ್ನೀರು ಜಲ ಸಂಪನ್ಮೂಲದಲ್ಲಿ ಸಿಗಡಿ ಮತ್ತು ಮೀನು ಕೃಷಿಗೆ ಪ್ರೋತ್ಸಾಹ ನೀಡಲವಾಗುವುದು ಎಂದು ಕುಮಾರಸ್ವಾಮಿ ಹೇಳಿದರು. ಅಂತೆಯೇ 400 ಘಟಕಗಳಿಗೆ ಸಹಾಯಧನ ನೀಡಲು 2 ಕೋಟಿ ರೂ. ಅನುದಾನವನ್ನೂ ಮೀಸಲಿಡುವುದಾಗಿ ಸಿಎಂ ಹೇಳಿದರು.
ಒಳನಾಡಿನ ಕೆರೆಗಳಲ್ಲಿನ ಮೀನುಗಾರಿಕೆ ಗುತ್ತಿಗೆಗಳನ್ನು ಸಂಘ ಸಂಸ್ಥೆಗಳ ಬದಲು ಸ್ಥಳೀಯ ಮೀನುಗಾರರಿಗೆ ಮೀಸಲಿಡುವ ಕುರಿತು ಪರಿಶೀಲನೆ ಮಾಡಲಾಗುತ್ತದೆ. ಮತ್ಸ್ಯಾಶ್ರಯ ಯೋಜನೆ ಮುಂದುವರಿಕೆ; ಪ್ರಗತಿಯಲ್ಲಿರುವ 2,500 ಮನೆಗಳನ್ನು ಪೂರ್ಣಗೊಳಿಸಲು ಕ್ರಮ. ಉಡುಪಿ ಜಿಲ್ಲೆಯ ಮಲ್ಪೆ ಕಡಲು ತೀರದ ಮೀನುಗಾರಿಕೆ ಚಟುವಟಿಕೆಗಳ ಅಭಿವೃದ್ಧಿಗೆ ಜೆಟ್ಟಿ ನಿರ್ಮಾಣ, ತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಇತರೆ ನೈರ್ಮಲ್ಯ ಸೌಕರ್ಯಗಳ ಅಭಿವೃದ್ಧಿಗೆ 15 ಕೋಟಿ ರೂ. ಅನುದಾನ. ರಾಜ್ಯದಲ್ಲಿ ಡೀಸೆಲ್ ಮತ್ತು ಸೀಮೆಎಣ್ಣೆ ಪಾಸ್‍ಬುಕ್ ಪಡೆದಿರುವ ದೋಣಿಗಳಿಗೆ ಡೀಸೆಲ್ ಮತ್ತು ಸೀಮೆಎಣ್ಣೆ ಸಬ್ಸಿಡಿ ನೀಡಲು 148.5 ಕೋಟಿ ರೂ. ಅನುದಾನ ನೀಡಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಅರ್ಕಾವತಿ ದಕ್ಷಿಣ ಪಿನಾಕಿನಿ ನದಿಗಳಲ್ಲಿ ಮತ್ತೆ ನೀರು ಹರಿಸುವ ಯೋಜನೆ. ನೀರು ಕೊಯ್ಲು ಮಾಡುವ ಕಾರ್ಯಕ್ರಮ. ಕರಾವಳಿ ಹಾಗೂ ಮಲೆನಾಡಿನ ಜನರಿಗೆ ಭತ್ತ ಬೆಳೆಯಲು ಉತ್ತೇಜನ ನೀಡಲು  ‘ಕರಾವಳಿ ಪ್ಯಾಕೇಜ್’ ಯೋಜನೆ ಘೋಷಿಸಲಾಗಿದ್ದು, 5 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.  ಈ ಸಂಬಂಧ ರೈತರ ಖಾತೆಗೆ ಪ್ರತಿ ಹೆಕ್ಟೇರ್ ಗೆ 7,500 ರೂ. ನೇರ ವರ್ಗಾವಣೆಯಾಗಲಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
SCROLL FOR NEXT