ಕೇಂದ್ರ ಬಜೆಟ್

ಮಂಡನೆಗೂ ಮುನ್ನವೇ ಮಾಧ್ಯಮಗಳಿಗೆ ಬಜೆಟ್ ಅಂಶಗಳು ಸೋರಿಕೆ: ಕಾಂಗ್ರೆಸ್ ಗಂಭೀರ ಆರೋಪ

Srinivasamurthy VN
ನವದೆಹಲಿ: 2019ರ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕೇಂದ್ರ ವಿತ್ತ ಸಚಿವ ಪಿಯೂಷ್ ಗೋಯಲ್ ಅವರು ಮಂಡಿಸಲಿರುವ ಬಜೆಟ್ ಪ್ರಮುಖ ಅಂಶಗಳು ಮಾಧ್ಯಮಗಳಿಗೆ ಸೋರಿಕೆಯಾಗಿವೆ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿವೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮನೀಶ್ ತಿವಾರಿ ಅವರು ಟ್ವಿಟರ್ ನಲ್ಲಿ ಆರೋಪ ಮಾಡಿದ್ದು, ಸಂಸತ್ ನಲ್ಲಿ ಮಂಡನೆಗೂ ಮುನ್ನವೇ ಬಜೆಟ್ ಪ್ರಮುಖಾಂಶಗಳು ಮಾಧ್ಯಮಗಳಿಗೆ ಸೋರಿಕೆಯಾಗಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಸೋರಿಕೆಯಾದ ಅಂಶಗಳನ್ನೂ ಮನೀಶ್ ತಿವಾರಿ ಅವರು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಮನೀಷ್ ತಿವಾರಿ ಅಪ್ಲೋಡ್ ಮಾಡಿರುವ ಅಂಶಗಳ ಪೈಕಿ ಆದಾಯ ತೆರಿಗೆ ಮಿತಿ ಹೆಚ್ಚಳ, ಗೃಹಸಾಲ ಬಡ್ಡಿದರ ಇಳಿಕೆ, ಸ್ಯಾಂಡರ್ಡ್ ಡಿಡಕ್ಷನ್ ಮಿತಿ 40 ಸಾವಿರದಿಂದ 50 ಸಾವಿರೂ ಗಳಿಗೆ ಏರಿಕೆ ಸೇರಿದಂತೆ ಬಜೆಟ್ ಹಲವು ಅಂಶಗಳು ಮಾಧ್ಯಮಗಳಿಗೆ ಸೋರಿಕೆಯಾಗಿವೆ ಎಂದು ಆರೋಪಿಸಿದ್ದಾರೆ.
ಇದಲ್ಲದೆ ಸಮಯಕ್ಕೆ ಸರಿಯಾಗಿ ಲೋನ್ ಪಾವಿತಿಸುತ್ತಿರುವ ರೈತರ ಸುಮಾರು 2 ಲಕ್ಷ ರೂ ವರೆಗಿನ ಸಾಲಗಳನ್ನೂ ಮನ್ನಾ ಮಾಡುವ ಕುರಿತೂ ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿದೆ. ಇಂತಹ ಗಂಭೀರ ಅಂಶಗಳು ಮಾಧ್ಯಮಗಳಿಗೆ ಸೋರಿಕೆಯಾಗಿವೆ ಎಂದು ತಿವಾರಿ ಆರೋಪಿಸಿದ್ದಾರೆ. 
SCROLL FOR NEXT