ಕೇಂದ್ರ ಬಜೆಟ್

ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಡಿಜಿಟಲ್ ಗ್ರಾಮಗಳ ನಿರ್ಮಾಣ: ಗೋಯಲ್

Lingaraj Badiger
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ‘ಡಿಜಿಟಲ್ ಇಂಡಿಯಾ’ ಯೋಜನೆಯನ್ನು ವಿತ್ತ ಸಚಿವ ಪಿಯೂಷ್ ಗೋಯಲ್ ಅವರು ಗ್ರಾಮಗಳಿಗೂ ವಿಸ್ತರಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಡಿಜಿಟಿಲ್ ಗ್ರಾಮ ನಿರ್ಮಿಸುವುದಾಗಿ ಶುಕ್ರವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಮೋದಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ ಗೋಯಲ್,  ಸರ್ಕಾರ ಮುಂದಿನ 5 ವರ್ಷದೊಳಗೆ ಒಂದು ಲಕ್ಷ ಡಿಜಿಟಿಲ್ ಗ್ರಾಮಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿದೆ. ಈ ಯೋಜನೆಯಲ್ಲಿ ಕಾಮನ್​ ಸೆಂಟರ್​ ಸರ್ವೀಸ್​ (CSCs) ಮೂಲಕ ಗ್ರಾಮದಲ್ಲಿ ಮೂಲಸೌಕರ್ಯಗಳನ್ನು ಒದಗಿಸುವ ಗುರಿ ಹೊಂದಿದ್ದೇವೆ ಎಂದರು.
ಮೊಬೈಲ್​ ಡೇಟಾದ ಸೇವೆಯಲ್ಲಿ ಗಣನೀಯ ಪ್ರಗತಿ ಕಂಡಿದೆ. ನಮ್ಮ ದೇಶದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಡೇಟಾ ಸಿಗುತ್ತಿದೆ. ಈ ಸೇವೆಯನ್ನ ಮತ್ತಷ್ಟು ಹೆಚ್ಚಿಸುವ ಗುರಿಯನ್ನ ಇಟ್ಟುಕೊಂಡಿದ್ದೇವೆ ಎಂದು ಗೋಯಲ್ ಹೇಳಿದರು. 
ಮೊಬೈಲ್​ ಹಾಗೂ ಮೊಬೈಲ್​ ಬಿಡಿ ಭಾಗಗಳನ್ನ ತಯಾರಿಸುವ ಕಂಪನಿಗಳ ಸಂಖ್ಯೆ 2 ರಿಂದ 268ಕ್ಕೆ  ಏರಿಕೆಯಾಗಿದೆ ಎಂದು ಇದೇ ವೇಳೆ ವಿತ್ತ ಸಚಿವರು ತಿಳಿಸಿದರು.
SCROLL FOR NEXT