ಹಂಗಾಮಿ ಹಣಕಾಸು ಸಚಿನ ಪಿಯೂಶ್ ಗೋಯಲ್ 
ಕೇಂದ್ರ ಬಜೆಟ್

ಲೋಕಾ' ಸಮರಕ್ಕೆ ಕ್ಷಣಗಣನೆ: ಜನಸ್ನೇಹಿ ಬಜೆಟ್ ನೀಡುತ್ತಾ ಮೋದಿ ಸರ್ಕಾರ?

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಮಧ್ಯಂತರ ಕೇಂದ್ರ ಬಜೆಟ್ 2019 ಮಂಡನೆಯಾಗುತ್ತಿದ್ದು, ಮತದಾರರ ಸೆಳೆಯಲು ಜನಪ್ರಿಯ ಘೋಷಣೆಗಳನ್ನು ಘೋಷಣೆ ಮಾಡುವ ಮೋದಿ ಸರ್ಕಾರ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುವ ಸಾಧ್ಯತೆ ಇದೆ.

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಮಧ್ಯಂತರ ಕೇಂದ್ರ ಬಜೆಟ್ 2019 ಮಂಡನೆಯಾಗುತ್ತಿದ್ದು, ಮತದಾರರ ಸೆಳೆಯಲು ಜನಪ್ರಿಯ ಘೋಷಣೆಗಳನ್ನು ಘೋಷಣೆ ಮಾಡುವ ಮೋದಿ ಸರ್ಕಾರ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುವ ಸಾಧ್ಯತೆ ಇದೆ.
ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದು, ಬಜೆಟ್‌ನಲ್ಲಿ ಹಲವಾರು ‘ಜನಪ್ರಿಯ’ ಕೊಡುಗೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಮಂಡನೆಯಾಗಲಿರುವ ಮೋದಿ ಸರ್ಕಾರದ ಪ್ರಸಕ್ತ ಅವಧಿಯ ಕೊನೆಯ ಬಜೆಟ್ ಇದಾಗಿದ್ದು, ಮತದಾರರನ್ನು ಸೆಳೆಯುವ ತಂತ್ರವಾಗಿಯೂ ಬಳಕೆಯಾಗುವುದು ಖಚಿತವಾಗಿದೆ. 
ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿರುವುದಕ್ಕೆ ಕೃಷಿಕರ ಸಮಸ್ಯೆ ಮತ್ತು ಉದ್ಯೋಗ ನಷ್ಟವೇ ಪ್ರಮುಖ ಕಾರಣವೆಂಬ ವಿಶ್ಲೇಷಣೆಗಳು ಕೇಳಿಬಂದಿರುವುದರಿಂದ ಈ ವಲಯಗಳಿಗೆ ಹೆಚ್ಚಿನ ಗಮನ ನೀಡುವ ಸಾಧ್ಯತೆಗಳಿವೆ. ಅಂತೆಯೇ ರೈತರು, ಮಧ್ಯಮ ವರ್ಗ, ಉದ್ದಿಮೆದಾರರು ಸೇರಿದಂತೆ ಎಲ್ಲ ಪ್ರಮುಖ ವಲಯಗಳಿಗೂ ಅಚ್ಚರಿಯ ಕೊಡುಗೆಗಳನ್ನು ನೀಡಬಹುದು ಎಂಬ ನಿರೀಕ್ಷೆ ಇದೆ. ಇನ್ನು ಈ ಹಿಂದೆ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಒತ್ತಿ ಹೇಳುವ ಮೂಲಕ ಬಜೆಟ್ ನ ದೃಷ್ಟಿಕೋನದ ಸುಳಿವು ನೀಡಿದ್ದರು.
ಇದೇ ಕಾರಣಕ್ಕೆ ಇಂದು ಮಂಡನೆಯಾಗುವ ಬಜೆಟ್ ಕೃಷಿ ಕೇಂದ್ರಿತ ಯೋಜನೆಗಳೇ ಪ್ರಮುಖವಾಗುವ ಸಾಧ್ಯತೆ ಇದೆ.  ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಅನಾರೋಗ್ಯದ ನಿಮಿತ್ತ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಹಂಗಾಮಿ ಹಣಕಾಸು ಸಚಿವರಾಗಿರುವ ಪಿಯೂಶ್ ಗೋಯಲ್ ಅವರು ಬಜೆಟ್ ಮಂಡಿಸಲಿದ್ದಾರೆ. ಇದು ಪೂರ್ಣ ಬಜೆಟ್ ಅಲ್ಲ, ಲೇಖಾನುದಾನವೂ ಅಲ್ಲ, ಮಧ್ಯಂತರ ಬಜೆಟ್ ಎಂದು ಸರ್ಕಾರ ಈ ಹಿಂದೆಯೇ ಸ್ಪಷ್ಟನೆ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ