ಕೇಂದ್ರ ಬಜೆಟ್

ಬಜೆಟ್ 2019: ರೈತರಿಗೆ ನೇರ ನಗದು ವರ್ಗಾವಣೆ ಯೋಜನೆಯಿಂದ ಮಹತ್ವದ ಪರಿಣಾಮ- ನಬಾರ್ಡ್

Nagaraja AB
ನವದೆಹಲಿ: 2019-20 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಹರಿಸಿರುವುದನ್ನು  ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸ್ವಾಗತಿಸಿದೆ.
ಬಜೆಟ್ ನಲ್ಲಿ ಪ್ರಸ್ತಾವಿತ ಯೋಜನೆಗಳಿಂದ ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದು ನಬಾರ್ಡ್ ಮುಖ್ಯಸ್ಥ ಹೆಚ್ ಕೆ ಬನ್ವಾಲಾ ಹೇಳಿದ್ದಾರೆ.
ರೈತರ ಖಾತೆಗೆ ಪ್ರತಿ ವರ್ಷ 6 ಸಾವಿರ ರೂ. ನೇರ ನಗದು ವರ್ಗಾವಣೆಯಾಗುವುದರಿಂದ  ಬೀಜ, ರಸಗೊಬ್ಬರ ಮತ್ತಿತರ ಕೃಷಿ ಪರಿಕರ ಖರೀದಿಸಲು ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಫಲಾನುಭವಿಗಳನ್ನು  ಗುರುತಿಸುವುದು ಸರ್ಕಾರಕ್ಕೆ ಕಷ್ಟವಾಗುವುದಿಲ್ಲ. ಈ ಯೋಜನೆ ಅನುಷ್ಠಾನಕ್ಕೆ ಸಂಪೂರ್ಣ ಹಣವನ್ನು  ಕೇಂದ್ರ ಸರ್ಕಾರವೇ  ಭರಿಸಲಿದೆ ಎಂದು ಬನ್ವಾಲಾ ಹೇಳಿದ್ದಾರೆ.
SCROLL FOR NEXT