ಕೇಂದ್ರ ಬಜೆಟ್

ಸೂಟ್ ಕೇಸ್ ಬದಲಿಗೆ ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿದ ಬಜೆಟ್ ಪ್ರತಿ: ಏನಿದರ ವಿಶೇಷ?

ಈ ಬಾರಿಯ ಕೇಂದ್ರ ವಿತ್ತೀಯ ಬಜೆಟ್ ನಲ್ಲಿ ಒಂದು ವಿಶೇಷತೆಯಿದೆ. ಸಾಮಾನ್ಯವಾಗಿ ವಿತ್ತೀಯ ಬಜೆಟ್ ಮಂಡಿಸುವಾಗ ಕೇಂದ್ರ ಹಣಕಾಸು...

ನವದೆಹಲಿ: ಈ ಬಾರಿಯ ಕೇಂದ್ರ ವಿತ್ತೀಯ ಬಜೆಟ್ ನಲ್ಲಿ ಕೆಲವು ವಿಶೇಷತೆಯಿದೆ. 
ಸಾಮಾನ್ಯವಾಗಿ ವಿತ್ತೀಯ ಬಜೆಟ್ ಮಂಡಿಸುವಾಗ ಕೇಂದ್ರ ಹಣಕಾಸು ಸಚಿವರು ಸೂಟ್ ಕೇಸ್ ನಲ್ಲಿ ಬಜೆಟ್ ಪ್ರತಿಯನ್ನು ಸಂಸತ್ತಿಗೆ ಹೊತ್ತು ತರುತ್ತಾರೆ. ಆದರೆ ಈ ಬಾರಿ ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್ ಕೆಂಪು ಬಟ್ಟೆಯಲ್ಲಿ ಬಜೆಟ್ ಪ್ರತಿಯನ್ನು ಸುತ್ತಿ ಸಂಸತ್ತಿಗೆ ಆಗಮಿಸುತ್ತಿದ್ದಾರೆ. 
ಇದು ಭಾರತದ ಆರ್ಥಿಕ, ಸಾಂಪ್ರದಾಯಿಕ ಲೆಕ್ಕಪತ್ರ ಆಗಿರುವುದರಿಂದ ಸಾಂಪ್ರದಾಯಿಕ ಶೈಲಿಯಲ್ಲೇ ಸಂಸತ್​ಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸೂಟ್​ಕೇಸ್​ಗೆ ಮುಕ್ತಿ ನೀಡಲಾಗಿದೆ. ಬಜೆಟ್​ ಮಂಡನೆಯಲ್ಲೂ ಭಾರತೀಯ ಸಂಸ್ಕೃತಿಗೆ ಆದ್ಯತೆ ನೀಡಲಾಗಿದೆ. ಪಾಶ್ಚಾತ್ಯ ಚಿಂತನೆಯ ದಾಸ್ಯದಿಂದ ನಾವು ಹೊರಬಂದಿದ್ದೇವೆ ಎಂಬುದರ ಸಂಕೇತವಿದು ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಮಾಹಿತಿ ನೀಡಿದ್ದಾರೆ.
ಯಾವುದೇ ಶುಭ ಸಮಾರಂಭಗಳಿಗೆ ಚರ್ಮದಿಂದ ಮಾಡಿದ ಬ್ಯಾಗ್​ ಅಥವಾ ಸೂಟ್​ಕೇಸ್​ ಕೊಂಡೊಯ್ಯುವುದು ಅಶುಭ ಎಂಬುದು ಸಚಿವೆ ನಿರ್ಮಲಾ ಸೀತಾರಾಮನ್​ ಅವರ ನಂಬಿಕೆ. ಹೀಗಾಗಿ, ಸಂಸತ್​ನಲ್ಲಿ ಬಜೆಟ್​ ಮಂಡನೆ ಮಾಡಲು ಸಚಿವರು ಚರ್ಮದ ಬ್ಯಾಗ್​ ಬದಲಾಗಿ ಬಟ್ಟೆಯಿಂದ ಸುತ್ತಲ್ಪಟ್ಟ ಲೆಕ್ಕಪತ್ರ ಪುಸ್ತಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸಬೇಕು ಎಂದು ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಬಜೆಟ್​ ಮಂಡನೆಗೂ ಮುನ್ನ ರಿಬ್ಬನ್​ ಕಟ್ ಮಾಡುವ ಬದಲು ಕೆಂಪು ರಿಬ್ಬನ್​ಗಳನ್ನು ಕಟ್ಟುವ ಮೂಲಕ ನಿರ್ಮಲಾ ಸೀತಾರಾಮನ್​ ಹೊಸ ಹೆಜ್ಜೆಯಿಟ್ಟಿದ್ದಾರೆ. ರಿಬ್ಬನ್​ ಕಟ್ ಮಾಡುವುದು ಶುಭದ ಸಂಕೇತವಲ್ಲ ಎಂದು ಅವುಗಳನ್ನು ಜೋಡಿಸುವ ಮೂಲಕ ಬಜೆಟ್​ ಮಂಡನೆಗೆ ಆಗಮಿಸಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರು ಹಣಕಾಸು ಖಾತೆ ವಹಿಸಿಕೊಂಡಿದ್ದ ಸಂದರ್ಭದಲ್ಲಿ ಆರ್ಥಿಕ ಬಜೆಟ್ ನ್ನು ಮಂಡಿಸಿದ್ದರು. ಅವರ ನಂತರ ಪೂರ್ಣ ಪ್ರಮಾಣದಲ್ಲಿ ಬಜೆಟ್ ಮಂಡಿಸುತ್ತಿರುವ ಮಹಿಳೆ ನಿರ್ಮಲಾ ಸೀತಾರಾಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ 2019-20ನೇ ಸಾಲಿನ ವಿತ್ತೀಯ ಬಜೆಟ್ ನ್ನು ಅರ್ಥ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. 90ರಿಂದ 120 ನಿಮಿಷಗಳ ಅವಧಿಯ ಬಜೆಟ್ ನ್ನು ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದು ಸ್ವಾತಂತ್ರ್ಯ ನಂತರ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಮಂಡನೆಯಾಗುತ್ತಿರುವ 89ನೇ ಕೇಂದ್ರೀಯ ಬಜೆಟ್ ಇದಾಗಿದೆ. 

ಕೇಂದ್ರ ಸರ್ಕಾರದ ಆರ್ಥಿಕ ಹೇಳಿಕೆಗಳು, ಹಿಂದಿನ ವರ್ಷದ ಆದಾಯ ಮತ್ತು ವೆಚ್ಚದ ವಿವರ, ಮುಂದಿನ ವರ್ಷದ ಸರ್ಕಾರದ ಅಂದಾಜು ವೆಚ್ಚ ಮತ್ತು ಯೋಜನೆಗಳ ಪ್ರಕಟಣೆಗಳನ್ನು ಆರ್ಥಿಕ ಬಜೆಟ್ ಒಳಗೊಂಡಿರುತ್ತದೆ. ಕೇಂದ್ರ ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಕೂಡ ಮಂಡನೆಯಾಗುತ್ತಿದೆ.

Finance Minister Nirmala Sitharaman, MoS Finance Anurag Thakur, Finance Secretary S C Garg, Chief Economic Advisor Krishnamurthy Subramanian and other officials outside Finance Ministry. #Budget2019 to be presented at 11 am in Lok Sabha today pic.twitter.com/oCyrMSNg7N

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT