ಕೇಂದ್ರ ಬಜೆಟ್

40 ಸಾವಿರ ರೂ.ಗಳಲ್ಲಿ ವಹಿವಾಟು ಆರಂಭಿಸಿದ ಮುಂಬೈ ಷೇರು ಮಾರುಕಟ್ಟೆ, ನಿಫ್ಟಿ 12 ಸಾವಿರಕ್ಕೆ ಏರಿಕೆ

Sumana Upadhyaya
ಮುಂಬೈ: ಕೇಂದ್ರ ವಿತ್ತೀಯ ಬಜೆಟ್ ಶುಕ್ರವಾರ ಮಂಡನೆಯಾಗುತ್ತಿದ್ದು ಇದಕ್ಕೂ ಮುನ್ನ ಮುಂಬೈ ಷೇರು ಮಾರುಕಟ್ಟೆ ಆರಂಭಿಕ ವಹಿವಾಟು 114.67 ಅಂಕ ಏರಿಕೆ ಕಂಡು 40 ಸಾವಿರದ 023 ರಲ್ಲಿ ವಹಿವಾಟು ಆರಂಭಿಸಿತು. 
ನಿಫ್ಟಿ ಸಹ 12 ಸಾವಿರಕ್ಕೆ ಏರಿಕೆಯಾಗಿದೆ.
ಇಂದು ಬಜೆಟ್ ನಲ್ಲಿ ಪ್ರಸ್ತಾವನೆಯಾಗುವ ವಿಚಾರಗಳು, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸಂಬಂಧಿ ಘೋಷಣೆಗಳತ್ತ, ಉತ್ಪಾದನೆ ವಲಯಗಳಿಗೆ ಘೋಷಣೆ ಇತ್ಯಾದಿಗಳಿದೆ ಷೇರು ವಿನಿಮಯ ಮಾರುಕಟ್ಟೆ ಹೂಡಿಕೆದಾರರು ಮತ್ತು ಉದ್ಯಮಿಗಳು ಸೂಕ್ಷ್ಮ ಗಮನ ಇರಿಸಿದ್ದಾರೆ ಎನ್ನುತ್ತಾರೆ ಎಂಕೆ ವೆಲ್ತ್ ಮ್ಯಾನೇಜ್ ಮೆಂಟ್ ನ ಸಂಶೋಧನೆ ವಿಭಾಗ ಮುಖ್ಯಸ್ಥ ಕೆ ಜೋಸೆಫ್ ಥಾಮಸ್.
SCROLL FOR NEXT