ಬಜೆಟ್ 2020

ರಾಜ್ಯ ಬಜೆಟ್ ಮಂಡನೆ ಇತಿಹಾಸ: ಮಾಜಿ ಸಿಎಂ ರಾಮಕೃಷ್ಣ ಹೆಗಡೆಗೆ ಮೊದಲ ಸ್ಥಾನ!

Srinivas Rao BV

ಬೆಂಗಳೂರು: ಕಳೆದ 1956ರಿಂದ ಇಲ್ಲಿಯ ವರೆಗೆ ಮಧ್ಯಂತರ ಬಜೆಟ್ ಮಂಡನೆ ಸೇರಿದಂತೆ ರಾಜ್ಯದಲ್ಲಿ ಈ ವರೆಗೆ ಒಟ್ಟು 65 ಬಜೆಟ್ ಗಳನ್ನು ಮಂಡಿಸಲಾಗಿದೆ. 
  
ರಾಜ್ಯದಲ್ಲಿ ಅತೀ ಹೆಚ್ಚು ಬಜೆಟ್ ಮಂಡನೆ ಮಾಡಿದ ಅಪರೂಪದ ಕೀರ್ತಿ ಮತ್ತು ಹೆಗ್ಗಳಿಕೆಗೆ ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಭಾಜನರಾಗಿದ್ದಾರೆ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ವಿಷಯ ಪರಿಣಿತರಾಗಿದ್ದ ಅವರು, ಈವರೆಗೆ 13 ಬಜೆಟ್ ಗಳನ್ನು ಮಂಡಿಸಿ ದಾಖಲೆ ನಿರ್ಮಿಸಿದ್ದಾರೆ. ಅವರ ರಾಜಕೀಯ ಶಿಷ್ಯ ಎಂದೇ ಗುರುತಿಸಿಕೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 13 ಬಜೆಟ್ಟ ಗಳನ್ನು ಮಂಡಿಸಿ ಗುರುವಿನ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಿದ್ದರಾಮಯ್ಯ ಹಣಕಾಸು ಮತ್ತು ಉಪಮುಖ್ಯಮಂತ್ರಿಯಾಗಿ ಏಳು ಬಜೆಟ್, ಮುಖ್ಯಮಂತ್ರಿಯಾಗಿ 6 ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. 
  
ರಾಜ್ಯದ ರಾಜ್ಯಪಾಲರಾಗಿರುವ ವಜೂಬಾಯಿ ವಾಲಾ ಅವರು ಗುಜರಾತ್ ರಾಜ್ಯದ ಹಣಕಾಸು ಸಚಿವರಾಗಿ 18 ಬಜೆಟ್ ಮಂಡಿಸಿದ್ದಾರೆ.

ಏಳು ತಿಂಗಳು… ಏಳನೇ ಬಜೆಟ್ ಮಂಡನೆ…. !!!
  
ಕಳೆದ ಜುಲೈನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ 7 ತಿಂಗಳ ಅವಧಿ ಪೂರೈಸಿದ್ದಾರೆ. ಕಾಕತಾಳೀಯವೋ ಏನೋ ಎಂಬಂತೆ ಇಂದು ಏಳನೇ ಬಜೆಟ್ ಮಂಡಿಸಿದ್ದಾರೆ. ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತು, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅವರು ಇಂದು ಏಳನೇ ಬಜೆಟ್ ಮಂಡನೆ ಮಾಡಿದ್ದಾರೆ.
  
ಇನ್ನೊಂದು ವಿಶೇಷ ಎಂದರೆ ಹಳೆಯ ಮೈಸೂರು ಭಾಗದಿಂದ ಬಜೆಟ್ ಮಂಡನೆ ಮಾಡಿದ ರಾಜಕೀಯ ನಾಯಕರ ಪೈಕಿ ಯಡಿಯೂರಪ್ಪ ಅವರು 32ನೇ ಹಣಕಾಸು ಸಚಿವರಾಗಿದ್ದಾರೆ.
  
ಎಸ್.ಎಂ ಕೃಷ್ಣ, ಮರಿಯಪ್ಪ, ಎಚ್.ಡಿ ದೇವೇಗೌಡ, ಬಿ.ಡಿ ಜತ್ತಿ,ನಿಜಲಿಂಗಪ್ಪ, ಮೊದಲಾದವರು ಸೇರಿದಂತೆ ಹಳೆಯ ಮೈಸೂರು ಭಾಗಕ್ಕೆ ಸೇರಿದ ನಾಯಕರಾಗಿದ್ದಾರೆ. ಕಳೆದ ಜುಲೈ 26 ರಂದು ಬಿಎಸ್ ಯಡಿಯೂರಪ್ಪ 4ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಮೊಟ್ಟ ಮೊದಲ ಕೃಷಿ ಬಜೆಟ್ ಮಂಡನೆ ಮಾಡಿದ ಕೀರ್ತಿ ಮತ್ತು ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

SCROLL FOR NEXT