ಕರ್ನಾಟಕ ಬಜೆಟ್ 2020: 2,33,134 ಕೋಟಿ ರೂ ಗಾತ್ರದ ಬಜೆಟ್, ಇಲಾಖಾವಾರು ಅನುದಾನ ಮಾಹಿತಿ
ಸಿಎಂ ಬಿಎಸ್ ಯಡಿಯೂರಪ್ಪ ಅವರು 2,37,893 ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದು, ಪ್ರತೀ ಇಲಾಖೆಗೆ ಸಿಕ್ಕ ಅನುದಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು 2,37,893 ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದು, ಪ್ರತೀ ಇಲಾಖೆಗೆ ಸಿಕ್ಕ ಅನುದಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಜೆಟ್ ನ ಒಟ್ಟು ಗಾತ್ರ 2,37,893 ಕೋಟಿ ರೂ ಆಗಿದ್ದು, 2020–21ನೇ ಸಾಲಿನಲ್ಲಿ ಒಟ್ಟು ₹ 2,33,134 ಕೋಟಿ ಜಮೆಗಳನ್ನು ನಿರೀಕ್ಷಿಸಲಾಗಿದೆ. ಅಂತೆಯೇ 2,37,893 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದ್ದು, ಆದಾಯಕ್ಕೂ ವೆಚ್ಚಕ್ಕೂ 4759 ಅಂತರವಿದೆ.
ಇಲಾಖಾವಾರು ಅನುದಾನ ಮಾಹಿತಿ
1.ಶಿಕ್ಷಣ ಇಲಾಖೆ- 29,768 ಕೋಟಿ - ಶೇ. 11
2.ನಗರಾಭಿವೃದ್ಧಿ ಇಲಾಖೆ- 27,952 ಕೋಟಿ - ಶೇ. 10
3.ಜಲಸಂಪನ್ಮೂಲ ಇಲಾಖೆ- 21,308 ಕೋಟಿ - ಶೇ. 8
4.ಇಂಧನ ಇಲಾಖೆ- 17, 290 ಕೋಟಿ - ಶೇ. 7
5.ಗ್ರಾಮೀಣಾಭಿವೃದ್ಧಿ ಇಲಾಖೆ- 15.595 ಕೋಟಿ - ಶೇ. 6
6.ಕಂದಾಯ ಇಲಾಖೆ- 11, 860 ಕೋಟಿ - ಶೇ. 4
7.ಲೋಕೋಪಯೋಗಿ ಇಲಾಖೆ- 11, 463 ಕೋಟಿ - ಶೇ. 4
8.ಆರೋಗ್ಯ ಇಲಾಖೆ- 10, 122 ಕೋಟಿ - ಶೇ. 4
9.ಸಾರಿಗೆ, ಒಳಾಡಳಿತ ಇಲಾಖೆ- 10, 108 ಕೋಟಿ - ಶೇ. 4
10.ಸಮಾಜ ಕಲ್ಯಾಣ ಇಲಾಖೆ- 9,444 ಕೋಟಿ - ಶೇ. 4
11.ಕೃಷಿ & ತೋಟಗಾರಿಕೆ ಇಲಾಖೆ- 7,889 ಕೋಟಿ - ಶೇ. 3
12.ಮಹಿಳೆ & ಮಕ್ಕಳ ಕಲ್ಯಾಣ ಇಲಾಖೆ- 4,650 ಕೋಟಿ - ಶೇ. 2
13.ವಸತಿ ಇಲಾಖೆ- 2,971 ಕೋಟಿ - ಶೇ. 1
14.ಆಹಾರ ಇಲಾಖೆ- 2,668 ಕೋಟಿ - ಶೇ. 1
15.ಇತರೆ ಇಲಾಖೆ- 84,023 ಕೋಟಿ - ಶೇ. 31
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.