ಕೇಂದ್ರ ಬಜೆಟ್

ಆರ್ಥಿಕತೆ ಬಲಿಷ್ಠವಾಗಿದೆ, ಹಣದುಬ್ಬರ ನಿಯಂತ್ರಣದಲ್ಲಿದೆ:ವಿತ್ತ ಸಚಿವೆ 

Sumana Upadhyaya

ನವದೆಹಲಿ: ಶನಿವಾರ ಲೋಕಸಭೆಯಲ್ಲಿ 2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ನಾಗರಿಕರಲ್ಲಿ ಆದಾಯ ಮತ್ತು ಖರೀದಿ ಶಕ್ತಿಯನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.


ದೇಶದ ಅರ್ಥವ್ಯವಸ್ಥೆ ಕುಸಿಯುತ್ತಿದೆ, ಹಣದುಬ್ಬರದಿಂದ ವಸ್ತುಗಳ ಬೆಲೆ ದುಬಾರಿಯಾಗುತ್ತಿದೆ ಎಂಬ ಟೀಕೆಗಳಿಗೆ ಇಂದು ಬಜೆಟ್ ಮಂಡನೆ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಆರ್ಥಿಕತೆಯ ಮೂಲಭೂತ ಅಂಶಗಳು ಬಲಿಷ್ಠವಾಗಿದ್ದು ಹಣದುಬ್ಬರ ನಿಯಂತ್ರಣದಲ್ಲಿದೆ. ಬ್ಯಾಂಕುಗಳು ಬಾಕಿ ಸಾಲಗಳನ್ನು ವಶಪಡಿಸಿಕೊಂಡಿವೆ, ಸಾಲ ವಸೂಲಾಗದೆ ಉಳಿಕೆಯಾಗಿಲ್ಲ ಎಂದರು.


2014ರಿಂದ 2019ರವರೆಗೆ ಕೇಂದ್ರ ಸರ್ಕಾರ ಆಡಳಿತದಲ್ಲಿ ಮಾದರಿ ಬದಲಾವಣೆಗಳನ್ನು ತಂದಿದೆ. ಸರಕು ಮತ್ತು ಸೇವಾ ತೆರಿಗೆ ಐತಿಹಾಸಿಕ ರಚನಾತ್ಮಕ ಸುಧಾರಣೆಯಾಗಿದ್ದು ಅದು ದೇಶವನ್ನು ಆರ್ಥಿಕವಾಗಿ ಒಗ್ಗೂಡಿಸಿದೆ ಎಂದರು. 

SCROLL FOR NEXT