ಕೇಂದ್ರ ಬಜೆಟ್

ಕೇಂದ್ರ ಬಜೆಟ್ 2020: ಎಸ್.ಸಿ-ಒಬಿಸಿ ಅಭಿವೃದ್ಧಿಗೆ 85 ಸಾವಿರ ಕೋಟಿ, ಎಸ್.ಟಿ ಸಮುದಾಯ ಕಲ್ಯಾಣಕ್ಕೆ 53,700 ಕೋ.ರೂ

Sumana Upadhyaya

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿರುವ ಕೇಂದ್ರ ಬಜೆಟ್-2020ರಲ್ಲಿ ಪರಿಶಿಷ್ಟ ಜಾತಿ ಇತರ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 85 ಸಾವಿರ ಕೋಟಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ 53 ಸಾವಿರದ 700 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.


ಎಸ್,ಸಿ ಮತ್ತು ಎಸ್.ಟಿ ವರ್ಗದವರ ಅಭಿವೃದ್ಧಿಗೆ 2020-21ಕ್ಕೆ 85 ಸಾವಿರ ಕೋಟಿ ಮೀಸಲಿಡಲಾಗಿದೆ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 53 ಸಾವಿರದ 700 ಕೋಟಿ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.


ಆಕಾಂಕ್ಷೆಯ ಭಾರತ ಅಂದರೆ ಗುಣಮಟ್ಟದ ಬದುಕಿಗೆ ಆದ್ಯತೆ, ಪ್ರತಿಯೊಂದು ವರ್ಗಗಳ ಆರ್ಥಿಕ ಅಭಿವೃದ್ದಿ, ಸಮಾಜದ ಮಾನವೀಯತೆ ಮತ್ತು ಸಹಾನುಭೂತಿಯ ಏಳಿಗೆಗೆ ಒತ್ತು ಕೊಡುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ಎರಡನೇ ಅಂಶ ಆರ್ಥಿಕ ಬೆಳವಣಿಗೆ ಮತ್ತು ಮೂರನೇ ಅಂಶ ಸಾಮಾಜಿಕ ಕಾಳಜಿ, ಕಳಕಳಿಯ ಆಧಾರದ ಮೇಲೆ ಈ ಬಾರಿಯ ಬಜೆಟ್ ಸಿದ್ಧ ಪಡಿಸಲಾಗಿದೆ ಎಂದೂ ನಿರ್ಮಲಾ ಸೀತಾರಾಮನ್ ಹೇಳಿದರು. 

SCROLL FOR NEXT