ಕರ್ನಾಟಕ ಬಜೆಟ್ 2021: ಯಾವ ಇಲಾಖೆಗೆ ಎಷ್ಟು ಅನುದಾನ?
ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2021-2022 ಸಾಲಿನ ರಾಜ್ಯ ಬಜೆಟ್ 2021 ಮಂಡನೆ ಮಾಡಿದ್ದು, ಆರೋಗ್ಯ, ನೀರಾವರಿ, ಗ್ರಾಮೀಣಾಭಿವೃದ್ಧಿಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.
ಬೆಂಗಳೂರು: ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2021-2022 ಸಾಲಿನ ರಾಜ್ಯ ಬಜೆಟ್ 2021 ಮಂಡನೆ ಮಾಡಿದ್ದು, ಆರೋಗ್ಯ, ನೀರಾವರಿ, ಗ್ರಾಮೀಣಾಭಿವೃದ್ಧಿಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.
ವಲಯವಾರು ವಿಂಗಡಣೆ ಮಾಡಿ ಯಡಿಯೂರಪ್ಪ ಅವರು ಬಜೆಟ್ ಮಂಡನೆ ಮಾಡಿದ್ದು, ಯಾವ ವಲಯಕ್ಕೆ ಎಷ್ಟು ಅನುದಾನ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ...
- ಶಿಕ್ಷಣ ವಲಯ: ರೂ.29,688 ಕೋಟಿ ಅನುದಾನ
- ನಗರಾಭಿವೃದ್ಧಿ ಕ್ಷೇತ್ರ: ರೂ.27,386 ಕೋಟಿ ಅನುದಾನ
- ಜಲ ಸಂಪನ್ಮೂಲ ಕ್ಷೇತ್ರ: ರೂ.21,181 ಕೋಟಿ ಹಣ
- ಇಂಧನ ಇಲಾಖೆ: ರೂ.16,515 ಕೋಟಿ
- ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್: ರೂ.16,036 ಕೋಟಿ
- ಕಂದಾಯ ಇಲಾಖೆ ವ್ಯಾಪ್ತಿ: ರೂ.12,384 ಕೋಟಿ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ: ರೂ.11,908 ಕೋಟಿ
- ಒಳಾಡಳಿತ ಮತ್ತು ಸಾರಿಗೆ ಕ್ಷೇತ್ರ: ರೂ.10,330 ಕೋಟಿ
- ಲೋಕೋಪಯೋಗಿ ಇಲಾಖೆ: ರೂ.10,256 ಕೋಟಿ
- ಸಮಾಜ ಕಲ್ಯಾಣ ಇಲಾಖೆ: ರೂ.8,864 ಕೋಟಿ
- ಕೃಷಿ ಮತ್ತು ತೋಟಗಾರಿಕೆ ಇಲಾಖೆ: ರೂ.7,297 ಕೋಟಿ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ: ರೂ.4,531 ಕೋಟಿ
- ವಸತಿ ಇಲಾಖೆ ಯೋಜನೆ: ರೂ.2,990 ಕೋಟಿ
- ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ: ರೂ.2,374 ಕೋಟಿ
- ಇತರೆ ಇಲಾಖೆಗಳ ಯೋಜನೆ: ರೂ.94,416 ಕೋಟಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.