ರಾಜ್ಯ ಬಜೆಟ್

ಕಿವಿ ಮೇಲೆ ಹೂವು ಇಟ್ಟುಕೊಳ್ಳುವ ಮಾತು: ಸಿಎಂ ವಿರುದ್ಧ ಕೆರಳಿದ ಕಾಂಗ್ರೆಸ್; ಬಜೆಟ್ ಭಾಷಣ ಆರಂಭದಲ್ಲಿಯೇ ಸದನದಲ್ಲಿ ಗದ್ದಲ-ಕೋಲಾಹಲ

Sumana Upadhyaya

ಬೆಂಗಳೂರು: 2023ನೇ ಸಾಲಿನ ಬಜೆಟ್ ಆರಂಭದಲ್ಲಿಯೇ ಆಡಳಿತ ಪಕ್ಷ ಮತ್ತು ವಿಪಕ್ಷಗಳ ಮಧ್ಯೆ ಆರೋಪ-ಪ್ರತ್ಯಾರೋಪ, ಗದ್ದಲಕ್ಕೆ ಸದನ ಸಾಕ್ಷಿಯಾಯಿತು

ಬಜೆಟ್ ಪ್ರತಿಯನ್ನು ಓದಲು ಆರಂಭಿಸಿದಾಗ ಮುಖ್ಯಮಂತ್ರಿ ಬೊಮ್ಮಾಯಿಯವರು, ವಿಪಕ್ಷಗಳು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಕಿವಿ ಮೇಲೆ ಹೂವು ಯಾಕಿಟ್ಟು ಕೊಳ್ಳುತ್ತೀರಾ, ಅದ್ರೂ ಅವರು ಇಟ್ಟುಕೊಳ್ಳುತ್ತಿದ್ದಾರೆ-ಇಷ್ಟು ದಿನ ಜನರ ಮೇಲೆ ಅವರು ಹೂವು ಇಡುತ್ತಿದ್ದರು, ಇನ್ನು ಮುಂದೆ ಜನರು ಅವರ ಮೇಲೆ ಹೂವು ಇಡುತ್ತಾರೆ ಎಂದರು.

ಇದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಕೆರಳಿಸಿತು. ನೀವು ಕೊಟ್ಟ 600 ಭರವಸೆಗಳಲ್ಲಿ 50ಕ್ಕೂ ಈಡೇರಿಸಲಿಲ್ಲ. ಈಗ ನಮಗೆ ಕಿವಿ ಮೇಲೆ ಹೂವಿಟ್ಟುಕೊಳ್ಳುವ ಪಾಠ ಮಾಡಲು ಬರುತ್ತೀರಾ ಎಂದು ಆಕ್ರೋಶಭರಿತರಾಗಿ ಮಾತನಾಡಿದರು.

ಆಗ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಗದ್ದಲ, ಕೋಲಾಹಲವನ್ನು ಸಹಜ ಸ್ಥಿತಿಗೆ ತರಲು ಸಾಕುಸಾಕಾಯಿತು. ಕೊನೆಗೆ ಮುಖ್ಯಮಂತ್ರಿಗಳಿಗೆ ಬಜೆಟ್ ಭಾಷಣ ಮಾಡಲು ಸೂಚನೆ ನೀಡಿದರು. ಅದರ ಪ್ರಕಾರ ಮುಖ್ಯಮಂತ್ರಿಗಳು ಓದಲು ಆರಂಭಿಸಿದರು.

SCROLL FOR NEXT