ಕೇಂದ್ರ ಬಜೆಟ್

ಕೇಂದ್ರ ಬಜೆಟ್ 2023: ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹಣಕಾಸು ಸಚಿವರ 5 ಮುಖ್ಯ ಘೋಷಣೆಗಳು

Sumana Upadhyaya

ನವದೆಹಲಿ: ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ -2023ರಲ್ಲಿ ತೆರಿಗೆ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ಹೇಳಿರುವ ಪ್ರಮುಖಾಂಶಗಳು ಹೀಗಿವೆ.

ತಾಮ್ರದ ತುಣುಕಿನ ಮೇಲೆ 2.5 ಶೇಕಡಾ ರಿಯಾಯಿತಿಯ ಮೂಲ ಕಸ್ಟಮ್ಸ್ ಸುಂಕವನ್ನು ಮುಂದುವರಿಸಲು ಸರ್ಕಾರ ನಿರ್ಧಾರ, ಸಿಗರೇಟ್ ಮೇಲಿನ ತೆರಿಗೆ ಶೇ.16ರಷ್ಟು ಏರಿಕೆಯಾಗಿದೆ.

ಸಂಯೋಜಿತ ರಬ್ಬರ್ ಮೇಲಿನ ಮೂಲ ಆಮದು ಸುಂಕವನ್ನು 10 ಶೇಕಡಾದಿಂದ 25 ಶೇಕಡಾಕ್ಕೆ ಹೆಚ್ಚಿಸಲಾಗಿದೆ
ಅಡುಗೆಮನೆಯ ಎಲೆಕ್ಟ್ರಿಕ್ ಚಿಮಣಿಯ ಮೇಲಿನ ಕಸ್ಟಮ್ಸ್ ಸುಂಕವು ಶೇಕಡಾ 15ರಿಂದ ಶೇಕಡಾ 75ಕ್ಕೆ ಏರಿಕೆ
ಚಿನ್ನದ ಕಡ್ಡಿಗಳಿಂದ ತಯಾರಿಸಿದ ವಸ್ತುಗಳ ಮೇಲೆ ಮೂಲ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲಾಗಿದೆ
ಟಿವಿ ಪ್ಯಾನಲ್‌ಗಳ ತೆರೆದ ಕೋಶಗಳ ಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 2.5 ಕ್ಕೆ ಇಳಿಸಲಾಗಿದೆ.

ಇನ್ನು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹಣಕಾಸು ಸಚಿವರು ಘೋಷಿಸಿರುವ 5 ಅಂಶಗಳು ಹೀಗಿವೆ: 

1) ವಿನಾಯ್ತಿ: 7 ಲಕ್ಷದವರೆಗೆ ಆದಾಯ ತೆರಿಗೆ ವಿನಾಯ್ತಿ ನೀಡುವ ಬಗ್ಗೆ ಪ್ರಸ್ತಾಪಿಸಿದರು.

2) ಟ್ಯಾಕ್ಸ್​ ಸ್ಲ್ಯಾಬ್​ಗಳು: ಹೊಸ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್​ ಸ್ಲ್ಯಾಬ್​ಗಳನ್ನು (ತೆರಿಗೆ ಹಂತಗಳು) 5ಕ್ಕೆ ಮಿತಗೊಳಿಸಲಾಗಿದೆ. 3 ಲಕ್ಷದಿಂದ ತೆರಿಗೆ ಹಂತ ಆರಂಭವಾಗಲಿದೆ.

3) ಸ್ಟಾಂಡರ್ಡ್​ ಡಿಡಕ್ಷನ್: 15.5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಆದಾಯವನ್ನು ವೇತನದಿಂದ ಪಡೆಯುವವರಿಗೆ 52,500 ಸ್ಟಾಂಡರ್ಡ್​ ಡಿಡಕ್ಷನ್ ಸೌಲಭ್ಯ ಸಿಗಲಿದೆ.

4) ಗರಿಷ್ಠ ತೆರಿಗೆ: ಈವರೆಗೆ ಗರಿಷ್ಠ ತೆರಿಗೆಯ ಮೇಲೆ ಶೇ 37ರಷ್ಟು ಸರ್​ಚಾರ್ಜ್ ವಿಧಿಸಲಾಗುತ್ತಿತ್ತು. ಈ ಪ್ರಮಾಣವನ್ನು ಹೊಸ ತೆರಿಗೆ ನೀತಿಯಡಿ ಶೇ 25ಕ್ಕೆ ಇಳಿಸಲಾಗಿದೆ. ಈ ಬೆಳವಣಿಗೆಯೊಂದಿಗೆ ದೇಶದಲ್ಲಿರುವ ಗರಿಷ್ಠ ತೆರಿಗೆ ದರವು ಶೇ 39ಕ್ಕೆ ಮಿತಗೊಳ್ಳಲಿದೆ.

5) ಲೀವ್ ಎನ್​ಕ್ಯಾಶ್​ಮೆಂಟ್ (ರಜೆ ನಗದೀಕರಣ): ನಿವೃತ್ತರಾದಾಗ ಸಿಗುವ ರಜೆ ನಗದೀಕರಣ (ಲೀವ್ ಎನ್​ಕ್ಯಾಶ್​ಮೆಂಟ್) ಸೌಲಭ್ಯದ ಮೇಲೆ ಈವರೆಗೆ 3 ಲಕ್ಷಕ್ಕೆ ಮಾತ್ರ ತೆರಿಗೆ ವಿನಾಯ್ತಿ ಇತ್ತು. ಈ ಮೊತ್ತವನ್ನು  25 ಲಕ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

SCROLL FOR NEXT