ಕೇಂದ್ರ ಬಜೆಟ್

ಕೇಂದ್ರ ಬಜೆಟ್-2023-24: ಬಾಹ್ಯಾಕಾಶಕ್ಕೆ 12,544 ಕೋಟಿ ರೂಪಾಯಿ ಅನುದಾನ ಘೋಷಣೆ

Srinivas Rao BV

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಾಹ್ಯಾಕಾಶ ಕ್ಷೇತ್ರಕ್ಕೆ 12,544 ಕೋಟಿ ರೂಪಾಯಿಗಳನ್ನು ಅನುದಾನ ನೀಡಿದ್ದಾರೆ. 

ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಾನವ ಸಹಿತ ಬಾಹ್ಯಾಕಾಶಯಾನ ಯೋಜನೆ ಕೈಗೊಂಡಿದು, ಮುಂದಿನ ವರ್ಷ ಪರೀಕ್ಷಾರ್ಥ ಉಡಾವಣೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಚಂದ್ರನ ಅಧ್ಯಯನಕ್ಕೆ ನೌಕೆ ಉಡಾವಣೆ ಹಾಗೂ ಇನ್ನಿತರ ಗ್ರಹಗಳ ಅಧ್ಯಯನದ ಯೋಜನೆಗಳನ್ನು ಹೊಂದಿದೆ.

ಬಾಹ್ಯಾಕಾಶಕ್ಕೆ ನೀಡಲಾಗಿರುವ ಅನುದಾನದ ಪೈಕಿ ಸಿಂಹ ಪಾಲು ಅಂದರೆ 11,669.41 ಕೋಟಿ ರೂಪಾಯಿ ಮೊತ್ತ ಕೇಂದ್ರ ವಲಯದ ಯೋಜನೆಗಳಿಗೆ ಅಥವಾ ಮಾನವಸಹಿತ ಬಾಹ್ಯಾಕಾಶ ಯೋಜನೆಯಂತಹ ಯೋಜನೆಗಳಿಗೆ ನೀಡಲಾಗಿದೆ. 

ಸರ್ಕಾರದ ಏಕಗವಾಕ್ಷಿ ಸಂಸ್ಥೆಯಾಗಿರುವ ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್& ಅಥೊರೈಸೇಷನ್ ಕೇಂದ್ರ (ಐಎನ್- ಸ್ಪೇಸ್) ಗೆ ಖಾಸಗಿ ಸೆಕ್ಟರ್ ನೊಂದಿಗೆ ವ್ಯವಹರಿಸುವುದಕ್ಕಾಗಿ 95 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಪರಿಷ್ಕೃತ ಅಂದಾಜಿನಲ್ಲಿ ಇದು 21 ಕೋಟಿ ರೂಪಾಯಿಯಾಗಿತ್ತು.

SCROLL FOR NEXT