ಕೇಂದ್ರ ಬಜೆಟ್

2023 ಕೇಂದ್ರ ಬಜೆಟ್ ನಲ್ಲಿ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗಕ್ಕೆ ಪರಿಹಾರ ಇಲ್ಲ- ಕಾಂಗ್ರೆಸ್ ಟೀಕೆ

Nagaraja AB

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2023ರ ಕೇಂದ್ರ ಬಜೆಟ್ ನಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ ಮತ್ತು ನಿರುದ್ಯೋಗಕ್ಕೆ ಪರಿಹಾರ ಒದಗಿಸಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.

ಬಜೆಟ್ ನಂತರ ಸಂಸತ್ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕ ಗೌರವ್ ಗೌರವ್ ಗೊಗೊಯ್, ದೊಡ್ಡ ಉದ್ಯಮಿಗಳಿಗೆ ಮಾತ್ರ ಬಜೆಟ್ ನಿಂದ ಅನುಕೂಲವಾಗಲಿದೆ ಎಂದರು. 

ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ಪರಿಗಣಿಸಿ ರೂ 7 ಲಕ್ಷದವರೆಗಿನ ತೆರಿಗೆ ರಿಯಾಯಿತಿಯು ಅತ್ಯಲ್ಪವಾಗಿದೆ, ಇದು ಮಧ್ಯಮ ವರ್ಗದವರಿಗೆ ಸಾಕಾಗುವುದಿಲ್ಲ ಎಂದು ಅವರು ತಿಳಿಸಿದರು. 

ಕೇಂದ್ರ ಬಜೆಟ್ ನಲ್ಲಿ ಕೆಲವು ವಿಷಯಗಳಿಗೆ ಆದರೆ, ಮನ್ರೇಗಾ, ಬಡ ಗ್ರಾಮೀಣ ಕಾರ್ಮಿಕರು, ಉದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎಂದು ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.  ಮತ್ತೊಂದೆಡೆ ತೆರಿಗೆ ಕಡಿತವನ್ನು ಸ್ವಾಗತಿಸುವುದಾಗಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದರು.
 

SCROLL FOR NEXT