ವಾಣಿಜ್ಯ

ಲಾಭದ ಜತೆಗೆ ಸ್ಥಿರತೆ

ಫಂಡ್ ಮ್ಯಾನೇಜರ್ ಮುಂದಿನ ಬಹುದೊಡ್ಡ ಸವಾಲು ಯಾವುದು?
ವಿಮಾ ಕ್ಷೇತ್ರದಲ್ಲಿ ಫಂಡ್ ಮ್ಯಾನೇಜರ್‌ಗಳು ಪ್ರತಿದಿನ ಅಂಕಿ ಅಂಶಗಳನ್ನು ವಿಶ್ಲೇಷಿಸುವುದಿಲ್ಲ. ಆದರೆ ಮ್ಯುಚುವಲ್ ಫಂಡ್‌ನಲ್ಲಿ ಪ್ರತಿದಿನ ಎನ್‌ಎವಿ (ನೆಟ್ ಅಸೆಟ್ ವಾಲ್ಯೂ) ಮೂಲಕ ಫಂಡ್‌ಗಳನ್ನು ಅಳೆಯಲಾಗುತ್ತದೆ. ಫಂಡ್‌ಗಳು 3, 5, 7 ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಕೇವಲ ಒಂದು ವರ್ಷ ಸರಾಸರಿ ಮಟ್ಟಕ್ಕಿಂತ ಕಡಿಮೆ ಲಾಭ ಬಂದರೆ ಹೂಡಿಕೆದಾರರು ಫಂಡ್‌ಗಳಿಂದ ಹೊರಬರಲು ಮುಂದಾಗುತ್ತಾರೆ. ಮಾರುಕಟ್ಟೆ ಕುಸಿತ ಸಂದರ್ಭದಲ್ಲಿ ಹೂಡಿಕೆದಾರರನ್ನು ಕಾಪಾಡುವ ಜತೆಗೆ ಹೆಚ್ಚಿನ ಲಾಭ ಬರುವಂತೆ ಗ್ರಾಹಕರು ಅಪೇಕ್ಷಿಸುತ್ತಾರೆ. ಮಾರುಕಟ್ಟೆ ಕುಸಿತದ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ತೋರಿ, ಮಾರುಕಟ್ಟೆ ಏರುಗತಿಯಲ್ಲಿರುವಾಗ ಲಾಭ ಗಳಿಸದಿದ್ದರೆ ಹೂಡಿಕೆ ಹಿಂತೆಗೆತ ಆರಂಭವಾಗುತ್ತದೆ. ಮಾರುಕಟ್ಟೆ ಕುಸಿತ ಸಂದರ್ಭದಲ್ಲಿ ಗ್ರಾಹಕರನ್ನು ಕಾಪಾಡುವುದಕ್ಕಿಂತ ಮಾರುಕಟ್ಟೆ ಏರಿಕೆ ಸಂದರ್ಭದಲ್ಲಿ ಹೆಚ್ಚಿನ ಲಾಭ ತರುವುದು ಮುಖ್ಯ. 2011ರಲ್ಲಿ ಕುಸಿದ ಮಾರುಕಟ್ಟೆ 2012ರಲ್ಲಿ ಚೇತರಿಕೆ ಕಂಡಿದ್ದೇ ಇದಕ್ಕೆ ಕಾರಣ.
 
ಈಗಿನ ಮಾರುಕಟ್ಟೆ 'ಬುಲ್‌ಮಾರ್ಕೆಟ್‌'ನತ್ತ ಸಾಗುತ್ತಿದೆಯೆ?
ಭಾರತೀಯ ಈಕ್ವಿಟಿ ಮಾರುಕಟ್ಟೆಯ ಇತಿಹಾಸ ಚಿಕ್ಕದು. ಹಾಗಾಗಿ ಅಂಕಿ- ಅಂಶಗಳ ಆಧಾರಕ್ಕಿಂತ ನಮ್ಮ ಸ್ವಂತ ಅಭಿಪ್ರಾಯ ವ್ಯಕ್ತಪಡಿಸಬೇಕಾಗುತ್ತದೆ. ಭಾರತದ ಈಕ್ವಿಟಿ ಮಾರುಕಟ್ಟೆ ಆರಂಭವಾಗಿ 30 ವರ್ಷ ಕಳೆದಿದ್ದರೂ 1991ಕ್ಕಿಂತ ಹಿಂದಿನ ಅಂಕಿ-ಅಂಶಗಳು ನಮ್ಮಲ್ಲಿಲ್ಲ. 1994-95ರಲ್ಲಿ ನಿಫ್ಟಿ ಆರಂಭವಾಯಿತು. ಭಾರತದ ಮಾರುಕಟ್ಟೆಯಲ್ಲಿ 2003ರಿಂದ 2008ರ ವರೆಗೆ ಬುಲ್ ಮಾರ್ಕೆಟ್ ಕಂಡುಬಂದಿದೆ. ಬುಲ್ ಮಾರ್ಕೆಟ್‌ಗೆ ಅಗತ್ಯವಿರುವ ಪ್ರಮುಖ ಅಂಶಗಳೆಂದರೆ ಬಡ್ಡಿ ದರದಲ್ಲಿನ ಹೆಚ್ಚಳ, ಹಣದುಬ್ಬರದ ಪ್ರಮಾಣ ಕಡಿಮೆ ಇರುವುದು, ವಿದೇಶಿ ಮಿನಿಮಯದಲ್ಲಿ ಕೊರತೆ ಬದಲಾಗಿ ಲಾಭ ಇರಬೇಕು.
 
4 ವರ್ಷಗಳ ಅವಧಿಯಲ್ಲಿ ಲಾಭಾಂಶ ಹೆಚ್ಚಳ ಪ್ರಮಾಣ ಶೇ. 25ಕ್ಕಿಂತ ಅಧಿಕವಾಗಿರುವುದು ಬುಲ್‌ಮಾರ್ಕೆಟ್‌ನ ಪ್ರಮುಖ ಅಂಶವೇ?
ಬುಲ್‌ಮಾರ್ಕೆಟ್‌ನಲ್ಲಿ ಬಹುತೇಕ ಎಲ್ಲ ಶೇರುಗಳ ಮೌಲ್ಯದಲ್ಲಿ ಹೆಚ್ಚಳ ಕಂಡುಬರುತ್ತದೆ. 'ರ್ಯಾಲಿ' ಯಲ್ಲಿ ಕೆಲವೇ ಕೆಲ ಶೇರುಗಳ ಮೌಲ್ಯ ಮಾತ್ರ ಹೆಚ್ಚಳವಾಗುತ್ತದೆ. ರ್ಯಾಲಿ ಹೆಚ್ಚೆಂದರೆ 12-15 ತಿಂಗಳ ಕಾಲ ಚಾಲ್ತಿಯಲ್ಲಿರಬಹುದು. ಆದರೆ ಬುಲ್ ಮಾರ್ಕೆಟ್ ಸುಮಾರು 2-3 ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ.  

ಈ ವರ್ಷದ ಕೊನೆಯಲ್ಲಿ ನಿಫ್ಟಿ 7000 ಗಡಿ ದಾಟಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರಲ್ಲ?
ಯಾವ ಕಂಪನಿ ಶೇರು ಉತ್ತಮ ಎಂದು ಆಲೋಚಿಸುವ ಬದಲು ಯಾವಾಗ ಶೇರುಗಳನ್ನು ಖರೀದಿಸಬೇಕು ಎಂಬ ಬಗ್ಗೆಯೇ ಹೆಚ್ಚಿನ ಚರ್ಚೆ ನಡೆಯುತ್ತಿರುತ್ತದೆ. 2002-03ರಲ್ಲಿ 4 ತಿಂಗಳು ಹೊರತುಪಡಿಸಿದರೆ 10 ವರ್ಷಗಳಲ್ಲಿ ಈಕ್ವಿಟಿ ಮಾರುಕಟ್ಟೆ ಋಣಾತ್ಮಕವಾಗಿ ವರ್ತಿಸಿದ್ದು ( ರೋಲಿಂಗ್ ಬೇಸಿಸ್) ಕಡಿಮೆ. ಇದರ ಅರ್ಥ ಲಾಭದ ಪ್ರಮಾಣ ಹೂಡಿಕೆಯ ಅವಧಿಯನ್ನು ಅವಲಂಬಿಸಿರುತ್ತದೆ. ಮ್ಯುಚುವಲ್‌ಫಂಡ್ ಬಗ್ಗೆ ಹೇಳುವುದಾದರೆ 3 ವರ್ಷದ ಅವಧಿಯಲ್ಲಿ ಲಾಭ ಬರುವ ಸಾಧ್ಯತೆ ಶೇ. 50ಕ್ಕಿಂತ ಕಡಿಮೆ ಇರುತ್ತದೆ. 5 ವರ್ಷದ ಅವಧಿಯಲ್ಲಾದರೆ ಲಾಭ ಬರುವ ಸಾಧ್ಯತೆ ಶೇ. 50ಕ್ಕಿಂತ ಹೆಚ್ಚಿರುತ್ತದೆ ಹಾಗೂ 7 ವರ್ಷದ ಅವಧಿಯಲ್ಲಿ ಲಾಭ ಬರುವ ಸಾಧ್ಯತೆ ಶೇ. 65ಕ್ಕಿಂತ ಅಧಿಕ. ಪರಿಣಿತ ಫಂಡ್ ಮ್ಯಾನೇಜರ್‌ಗಳಿಂದ ಇವು ಸಾಧ್ಯ.

ಮುಂದಿನ ವರ್ಷದಲ್ಲಿ ಆರ್ಥಿಕ ಪ್ರಗತಿ ಹೇಗಿರಬಹುದು?
ಆರ್ಥಿಕ ಸುಧಾರಣೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಹಿನ್ನೆಲೆಯಲ್ಲಿ  ಪ್ರಗತಿ ಸಾಧ್ಯತೆ ಇದೆ. 2008-09ರ ಆರ್ಥಿಕ ಮಹಾ ಕುಸಿತದ ಬಳಿಕ ಕಂಡುಬಂದ ಚೇತರಿಕೆ ರೀತಿಯಲ್ಲೇ ಮುಂದಿನ ದಿನಗಳಲ್ಲಿ ಆರ್ಥಿಕ ಪ್ರಗತಿ ಕಂಡುಬರಬಹುದು. ಈ ವರ್ಷ ಜಿಡಿಪಿ ಶೇ. 5.8ರಿಂದ ಶೇ. 6 ದಾಖಲಾಗಿದೆ. ಮುಂದಿನ ವರ್ಷ ಜಿಡಿಪಿ ಶೇ. 6.5ರಿಂದ ಶೇ. 7 ತಲುಪಿದರೆ ಆರ್ಥಿಕ ಸ್ಥಿತಿಯಲ್ಲಿ ತ್ವರಿತ ಪ್ರಗತಿ ಕಂಡುಬರಬಹುದು.

 ಕಾರ್ಪೊರೇಟ್ ಅರ್ನಿಂಗ್ ಸರ್ಕಲ್‌ನಲ್ಲಿ ನಾವು ಈಗ ಎಲ್ಲಿದ್ದೇವೆ?
ಮಾರುಕಟ್ಟೆಯ ಏರಿಕೆಗೆ ತಕ್ಕಂತೆ ಹಣದ ಹರಿವು ಕಂಡುಬರುತ್ತಿಲ್ಲ. ಮುಂದಿನ 5 ವರ್ಷದ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಲಾಭಾಂಶ ವೃದ್ಧಿ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಮಧ್ಯಮ ಹಾಗೂ ದೀರ್ಘಾವಧಿ ಮಾರುಕಟ್ಟೆ ಉತ್ತಮವಾಗಿಯೇ ಕಂಡುಬರುತ್ತಿದೆ. ಅತಿ ಸಣ್ಣ ಅವಧಿಯ ಹೂಡಿಕೆಯಲ್ಲಿ ಎಚ್ಚರಿಕೆ ಅಗತ್ಯ.

ಗ್ರೋಥ್‌ಫಂಡ್‌ನಲ್ಲಿ ಎಫ್‌ಎಂಜಿಸಿ (ಫಾಸ್ಟ್ ಮೂವಿಂಗ್ ಕಂನ್‌ಸ್ಯೂಮರ್ ಗೂಡ್ಸ್) ಶೇರುಗಳ ಮೇಲೆ ಯುಟಿಐ ಏಕೆ ಹೆಚ್ಚಿನ ಹೂಡಿಕೆ ಮಾಡಿದೆ?
ಎಫ್‌ಎಂಜಿಸಿ ಶೇರುಗಳ ಮೇಲಿನ ಹೂಡಿಕೆಯನ್ನು ಈಗ ಸ್ಪಲ್ಪ ಕಡಿಮೆ ಮಾಡಿದ್ದೇವೆ. ಎಫ್‌ಎಂಜಿಸಿ ಶೇರುಗಳು ಈಗಾಗಲೇ ಸಾಕಷ್ಟು ಏರಿಕೆ ಕಂಡಿದ್ದು, ಸ್ಪಲ್ಪ ಇಳಿಕೆಯಾಗುವ ನಿರೀಕ್ಷೆ ಇದೆ. 5 ವರ್ಷಗಳಲ್ಲಿ ಕೆಲ ಶೇರುಗಳು ಶೇ. 150ರಷ್ಟು ಲಾಭ ನೀಡಿವೆ. ಭಾರತ ಆರ್ಥಿಕ ಸ್ಥಿತಿಯಲ್ಲಿ ಜಿಡಿಪಿಯ ಶೇ. 65 ಪ್ರಮಾಣ ಇದೇ ಕ್ಷೇತ್ರದಿಂದ ಬರುತ್ತದೆ. ಎಫ್‌ಎಂಜಿಸಿ ಕ್ಷೇತ್ರ ಮುಂದೆಯೂ ಮಹತ್ವದ ಪಾತ್ರ ವಹಿಸಲಿದೆ. ಆದರೆ ಸಧ್ಯಕ್ಕೆ ನಾವು  ಎಫ್‌ಎಂಜಿಸಿ ಶೇರುಗಳ ಮೇಲೆ ಹೂಡಿಕೆ ಕಡಿಮೆ ಮಾಡಿದ್ದೇವೆ.

ಬೇರೆ ಯಾವ ಕ್ಷೇತ್ರಗಳಲ್ಲಿ ಉತ್ತಮ ಲಾಭಗಳಿಸಬಹುದು?

ಬ್ಯಾಂಕ್‌ಗಳ ಬಡ್ಡಿ ದರ ಕಡಿತದ ಮೇಲೆ ಈಗ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಬಡ್ಡಿ ದರದಲ್ಲಿ ಕಡಿತವಾದರೆ ಆರ್ಥಿಕ ಚಟುವಟಿಕೆ ಚುರುಕುಗೊಳ್ಳುತ್ತದೆ. ಹೂಡಿಕೆ, ಆಸ್ತಿ ವ್ಯವಹಾರದಲ್ಲಿ ಪ್ರಗತಿ ಕಂಡುಬರುತ್ತದೆ. ಇಂಥ ಸಂದರ್ಭದಲ್ಲಿ ಸಿಮೆಂಟ್ ಕಂಪನಿಗಳು ಉತ್ತಮ ಲಾಭಹೊಂದುವ ಸಾಧ್ಯತೆ ಇದೆ. ಒಳ್ಳೆಯ ಸಿಮೆಂಟ್ ಕಂಪನಿ ಮೇಲೆ ದೀರ್ಘಾವಧಿಗಾಗಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು.
(ಲೇಖಕರು ಯುಟಿಐ ಅಪಾರ್ಚುನಿಟೀಸ್ ಫಂಡ್ ಹಾಗೂ ಈಕ್ವಿಟಿ ಫಂಡ್ ಮುಖ್ಯಸ್ಥರು)

-ಅನೂಪ್ ಭಾಸ್ಕರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!