ಗೋಡಂಬಿ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಕಳೆದ ಕೆಲ ದಿನಗಳಿಂದ ಮಾರುಕಟ್ಟೆಯಲ್ಲಿ ವಿಶೇಷವಾಗಿ ರಾಷ್ಟ್ರ ರಾಜಧಾನಿ ನವದೆಹಲಿ ಮಾರುಕಟ್ಟೆಯಲ್ಲಿ ಅದಕ್ಕೆ ಹೆಚ್ಚಿನ ಬೆಲೆ ಸಿಗುತ್ತಿಲ್ಲ. ಚಿಲ್ಲರೆ ಮಾರಾಟಗಾರರಿಂದ ಮತ್ತು ಸ್ಟಾಕ್ ಮಾಡಿ ಇರಿಸಿಕೊಂಡ ಕಾರಣದಿಂದಲೋ ಏನೋ ಮಾರುಕಟ್ಟೆಯಲ್ಲಿ ರು. 5ರಷ್ಟು ಬೆಲೆ ತಗ್ಗಿದೆ. ವಿದೇಶಗಳಿಂದಲೂ ಹೇರಳವಾಗಿ ಗೇರುಬೀಜ ಆಮದು ಆಗುತ್ತಿರುವುದೂ ಬೆಲೆ ತಗ್ಗಲು ಒಂದು ಕಾರಣ ಎಂದು ಹೇಳಲಾಗುತ್ತಿದೆ.