ಬೆಂಗಳೂರು: ಶ್ರೀದೇವಿ ವಿದ್ಯಾಸಂಸ್ಥೆಯು 2011-12ನೇ ಸಾಲಿನ ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದು, ಬಿಇ ಎಂ.ಟೆಕ್, ಎಂಸಿಎ, ವಿಭಾಗದ ಶೇ.100 ವಿದ್ಯಾರ್ಥಿಗಳು ಉದ್ಯೋಗ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್‌ಫೋಸಿಸ್, ಐಬಿಎಂ, ಟಿಸಿಎಸ್, ಟೆಕ್ ಮಹೀಂದ್ರಾ, ಬಿರ್ಲಾ ಸಾಫ್ಟ್, ಸಿಡಿಸಿ ಸಾಫ್ಟ್‌ವೇರ್, ಎಕ್ಸ್‌ಚೇಂಜಿಂಗ್, ಸಿಂಟಲೆಕ್ಟ್, ಫ್ಲೆಕ್ಸಿ ರಿಸೋರ್ಸ್, ಗ್ಲೋಬಲ್ ಈ-ಸಾಫ್ಟ್ ಸಿಸ್ಟಮ್ಸ್, ಸ್ಪಾನ್ ಇನ್ಫೋಟೆಕ್, ಫೋನಿಕ್ಸ್, ಮೇರಿಟೈಮ್, ಐ-ಸಾಫ್ಟ್ ಟೆಕ್ನಾಲಜೀಸ್, ಟೆಕ್‌ಜಿನಿ, ಎಚ್‌ಪಿ, ಅಕಾರ್ಡ್ ಸಿಸ್ಟಮ್, ಎಚ್‌ಸಿಎಲ್, ಐಸಿಐಸಿಐ ಬ್ಯಾಂಕ್, ಸಿಸ್ಟಮ್ ಟೆಕ್ನಾಲಜೀಸ್ ಲಿಮಿಟೆಡ್, ಝೆಪ್ಲಿನ್ ಮೊಬೈಲ್ಸ್, ಚಾಯ್ಸ್ ಇನ್‌ಫಾರ್ಮೆಶನ್ ನೆಟ್‌ವರ್ಕ್ ಟೆಕ್ನಾಲಜಿ ಪ್ರೈ ಲಿ. ಮತ್ತು ಇತರೆ ಖ್ಯಾತ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗವನ್ನು ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ವಿದ್ಯಾಸಂಸ್ಥೆಯು ನಿರ್ವಹಣಾ ಕೋಟಾದಡಿ ಬಿ.ಇ, ಎಂಬಿಎ, ಲ್ಯಾಟರಲ್ ಬಿ.ಇ ಕೋರ್ಸ್‌ಗಳಿಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಿದೆ. ಅಲ್ಲದೇ, ಸಂಸ್ಥೆಯಲ್ಲಿ ಬಿ.ಎಚ್.ಎಸ್, ಬಿಎಸ್ಸಿ, ಐಡಿ, ಬಿಎಸ್ಸಿ ಎಫ್‌ಡಿ, ಎಂ.ಎಸ್.ಡಬ್ಲ್ಯೂ, ಬಿಪಿಟಿ, ಎಂಪಿಟಿ, ಬಿ.ಫಾರ್ಮ, ಎಂ.ಫಾರ್ಮ, ಫಾರ್ಮ.ಡಿ, ಬಿಎಸ್ಸಿ ಹಾಗೂ ಎಂಎಸ್ಸಿ, ನರ್ಸಿಂಗ್ ಬಿಸಿಎ, ಬಿಬಿಎಂ ಮತ್ತು ಬಿಕಾಂ ಮುಂತಾದ ಕೋರ್ಸ್‌ಗಳನ್ನು ಒದಗಿಸುತ್ತಿದೆ. ಹಾಗೂ ಶ್ರೀದೇವಿ ಎಜುಕೇಷನ್ ಟ್ರಸ್ಟ್‌ನ ನಿರ್ವಹಣೆಯಲ್ಲಿರುವ ಕಾಲೇಜುಗಳಲ್ಲಿ 5000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಸ್ಥಳಾವಕಾಶ ಕಲ್ಪಿಸಲಾಗಿದೆ.
ಪಾನ್‌ನಿಂದ ವಿಶೇಷ ಶಾಲಾ ಬೆಂಚ್
'ಪಾನ್' ಎಂಬ ಕಂಪನಿ ಶಾಲಾ ಮಕ್ಕಳಿಗಾಗಿ ವಿಶೇಷ ರೀತಿಯ ಬೆಂಚ್(ಕುರ್ಚಿ)ಗಳನ್ನು ತಯಾರಿಸಿದೆ. ಏನಿದರ ವಿಶೇಷ ಅಂತೀರಾ? ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಎತ್ತರಕ್ಕೇರಿಸಬಹುದು ಅಥವಾ ಗಿಡ್ಡ ಮಾಡಿಕೊಳ್ಳಬಹುದು. 2ನೇ ತರಗತಿಯಿಂದ 10ನೇ ತರಗತಿ ವ್ಯಾಸಂಗ ಮಾಡುವ ಎಲ್ಲಾ ಮಕ್ಕಳಿಗೂ ಅನುಕೂಲವಾಗಿಲಿ ಎಂಬುದು ಈ ಬೆಂಚ್ ತಯಾರಿಸಿರುವ ಉದ್ದೇಶ. ಶಾಲೆಗಳಲ್ಲಿ ಬೆಂಚ್‌ಗಳು ಎತ್ತರೆ ಇದ್ದರೆ ಚಿಕ್ಕ ಮಕ್ಕಳಿಗೆ ಅದರ ಮೇಲೇರಿ ಕೂರಲು ಕಷ್ಟ. ಚಿಕ್ಕದಿದ್ದರೆ ದೊಡ್ಡ ಮಕ್ಕಳಿಗೆ ಗಿಡ್ಡವಾಗುತ್ತದೆ. ಇಂತಹ ಸಮಸ್ಯೆಯನ್ನು ನಿಮ್ಮ ಶಾಲಾ ಮಕ್ಕಳು ಎದುರಿಸುತ್ತಿದ್ದರೆ ಚಿಂತೆ ಬೇಡ. ನೀವೂ ಈ ಬೆಂಚ್‌ಗಳನ್ನು ಖರೀದಿಸಿ ನಿಮ್ಮ ಮಕ್ಕಳಿಗೆ ಅನುಕೂಲ ಮಾಡಿಕೊಡಬಹುದು. ಹಾಗಿದ್ದರೆ ನೀವು www.panfurniture.com ಸಂಪರ್ಕಿಸಿ.
ಜ್ಯೋತಿಯಿಂದ 54ಕ್ಕೂ ಹೆಚ್ಚು ರುಬ್ಬುವ ಯಂತ್ರ
ಗೃಹೋಪಯೋಗಿ ವಸ್ತುಗಳು ಉತ್ತಮ ಗುಣಮಟ್ಟ ಹೊಂದಿರಬೇಕು ಎಂಬುದು ಪ್ರತಿ ಗೃಹಿಣಿಯ ಮಾತು. ಅಂತಹ ಉತ್ತಮ ಗುಣಮಟ್ಟದ ಗೃಹೋಪಯೋಗಿ ವಸ್ತುಗಳನ್ನು ಒದಗಿಸುವಲ್ಲಿ 'ಜ್ಯೋತಿ' ಕಂಪನಿ ಮುಂದಿದೆ. ಸುನಿಲ್ ಬನ್ಸಾಲ್ ಅವರು ರುಬ್ಬುವ ಯಂತ್ರ ತಯಾರಿಸುವ ಮೂಲಕ 'ಜ್ಯೋತಿ' ಎಂಬ ಕಂಪನಿಯನ್ನು ಆರಂಭಿಸಿದರು. ಈಗ ಇದು ಹೆಮ್ಮರವಾಗಿ ಬೆಳೆದಿದ್ದು, ಕುಕ್ಕರ್, ಮಿಕ್ಸಿ, ವಿವಿಧ ಬಗೆಯ ಗ್ರೈಂಡರ್, ಎಲೆಕ್ಟ್ರಾನಿಕ್ ವಸ್ತುಗಳು ಲಭ್ಯ. ಇಲ್ಲಿ ಸುಮಾರು 54ಕ್ಕೂ ಹೆಚ್ಚು ಬಗೆಯ ರುಬ್ಬುವ ಯಂತ್ರಗಳು ಸಿಗುತ್ತವೆ. ಅದೇ ರೀತಿ ಅಗತ್ಯ ಗೃಹೋಪಯೋಗಿ ವಸ್ತುಗಳು ಸಿಗುತ್ತವೆ. ಇದರ ಮುಖ್ಯ ಕಚೇರಿ ಚೆನ್ನೈನ ಎರುಕಾಂಚರಿ ಎಂಬಲ್ಲಿದೆ.
ಜೂನಿಯರ್ ಆರ್‌ಜೆ ಹಂಟ್ ವಿಜೇತರ ಘೋಷಣೆ
ಕರ್ನಾಟಕದ ಮುಂಚೂಣಿ ಕನ್ನಡ ರೇಡಿಯೋ ಸ್ಟೇಷನ್ 92.7 ಬಿಗ್‌ಎಫ್‌ಎಂ, ಬಿಗ್ ಜೂನಿಯರ್ ಆರ್‌ಜೆ ಹಂಟ್ ವಿಜೇತರನ್ನು ಘೋಷಿಸಿದೆ. ಇದು ಮೊದಲ ವಿಭಿನ್ನ ರೀತಿಯ ರೇಡಿಯೋ ಆಧಾರಿತ ರಿಯಾಲಿಟಿ ಶೋ ಆಗಿದ್ದು, ಆರ್ಕಿಡ್ ಇಂಟರ್‌ನ್ಯಾಷನಲ್ ಸ್ಕೂಲ್ ಸಹಯೋಗದೊಂದಿಗೆ ನಡೆದ ಈ ಶೋ 5- 12 ವರ್ಷದೊಳಗಿನ ಯುವ ಪ್ರತಿಭೆಗಳನ್ನು ಅನ್ವೇಷಿಸುವ ಗುರಿ ಹೊಂದಿತ್ತು.
ಹಲವಾರು ಸುತ್ತುಗಳ ನಂತರ 11ವರ್ಷದ ಸ್ಕಂದ ಮತ್ತು 9ವರ್ಷದ ಸೃಜನ ವಿಜೇತರಾಗಿ ಹೊರಹೊಮ್ಮಿದರು. ಭಾನುವಾರ ನಡೆದ ಕಾರ್ಯಕ್ರಮವನ್ನು ಈ ಇಬ್ಬರು ಆರ್‌ಜೆಗಳು ನಡೆಸಿಕೊಟ್ಟರು. ನೂರಾರು ಜನರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಡಿಷನ್‌ಗೆ 15 ಮಕ್ಕಳನ್ನು ಶಾರ್ಟ್‌ಲಿಸ್ಟ್ ಮಾಡಿ ಅಂತಿಮ ಸುತ್ತಿಗೆ 5 ಜನರನ್ನು ಆಯ್ಕೆಗೊಳಿಸಲಾಗಿತ್ತು. ವೋಟಿಂಗ್ ಮತ್ತು ಇಬ್ಬರು ತಜ್ಞರನ್ನು ಆಧರಿಸಿ 2 ಮಕ್ಕಳನ್ನು ಬಿಗ್ ಜೂನಿಯರ್ ಆರ್‌ಜೆಯನ್ನಾಗಿ ಆಯ್ಕೆ ಮಾಡಲಾಯಿತು. ಈ ಇಬ್ಬರು ತಮ್ಮದೇ ಸ್ವಂತ ಶೋವನ್ನು ಭಾನುವಾರ ನಡೆಸಿಕೊಟ್ಟರು. ಹೆಚ್ಚಿನ ಮಾಹಿತಿಗೆ: www.reliancebroadcast.com ತಾಣ ನೋಡಿ.
ಕಾರ್ಪ್ ಸರಳ್ ಪ್ಲಸ್ ಯೋಜನೆ ಜಾರಿ
ಕಾರ್ಪೊರೇಷನ್ ಬ್ಯಾಂಕ್ 'ಕಾರ್ಪ್ ಸರಳ್ ಪ್ಲಸ್' ಎಂಬ ಹೊಸ ಸರಳ ಉಳಿತಾಯ ಯೋಜನೆ ಜಾರಿಗೊಳಿಸಿದೆ. ಬಿಹಾರದ ಕಾನೂನು, ಯೋಜನಾ ಮತ್ತು ಅಭಿವೃದ್ಧಿ ಸಚಿವ ನರೇಂದ್ರ ನಾರಾಯಣ್ ಯಾದವ್ ಪಾಟ್ನಾದಲ್ಲಿ ಇತ್ತೀಚೆಗೆ ಯೋಜನೆಗೆ ಚಾಲನೆ ನೀಡಿದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್, ಬಿಹಾರ್ ಪ್ಲೇಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಮೃತ್ಯುಂಜಯ ತಿವಾರಿ, ಕಾರ್ಪ್ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಮ ಮೂರ್ತಿ, ಪಾಟ್ನಾ ವಲಯ ಮುಖ್ಯಸ್ಥ ಶಿವರಾಜ್ ಮಿಶ್ರಾ ಹಾಜರಿದ್ದರು.
ಹಿಂದಿ ಅನುಷ್ಠಾನದಲ್ಲಿ ಕಾರ್ಪ್ ಬ್ಯಾಂಕ್‌ಗೆ ರಾಷ್ಟ್ರೀಯ ಪ್ರಶಸ್ತಿ
ಕಾರ್ಪೊರೇಶನ್ ಬ್ಯಾಂಕ್ ರಾಜಭಾಷೆ ಹಿಂದಿ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದ್ದು, ಈ ಬಾರಿ ಕೇಂದ್ರ ಗೃಹ ಮಂತ್ರಾಲಯ ಬ್ಯಾಂಕ್‌ಗೆ 'ರಾಜಭಾಷೆ ವಿಶಿಷ್ಟ ಸಮ್ಮಾನ್' ಪ್ರಶಸ್ತಿ ನೀಡಿ ಗೌರವಿಸಿದೆ. ಈ ಹಿಂದೆಯೂ ಮೂರು ಬಾರಿ ಇಂದಿರಾಗಾಂಧಿ ರಾಜಭಾಷೆ ಪುರಸ್ಕಾರ ಪಡೆದಿದೆ. ಬ್ಯಾಂಕ್ ತನ್ನ ಕಚೇರಿ ಮತ್ತು ಟಾಲಿಕ್ ಕಚೇರಿಗಳಲ್ಲಿ ರಾಜಭಾಷೆ ಹಿಂದಿಗೆ ಮಾನ್ಯತೆ ನೀಡುವುದರ ಜತೆಗೆ ಜನ ಸಾಮಾನ್ಯರನ್ನು ಹಿಂದಿ ಜತೆ ಜೋಡಿಸಲು ಹೊಸ ಕಾರ್ಯಕ್ರಮಗಳನ್ನು ಆಯೋಜಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಕಾರ್ಪ್ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬ್ಯಾಂಕ್ ವೆಬ್‌ಸೈಟ್ ದ್ವಿಭಾಷೆಯಲ್ಲಿದ್ದು, ಹಿಂದಿಯಲ್ಲಿ ಕೆಲಸ ಮಾಡಲು ಆನ್‌ಲೈನ್ ಡಿಕ್ಷನರಿ ಸೌಲಭ್ಯ ಇದೆ. ಸಿಬ್ಬಂದಿಗೆ ಹಿಂದಿ ಪ್ರಶಿಕ್ಷಣ ಕಾರ್ಯಾಗಾರ ಮತ್ತು ಬೆರಳಚ್ಚುಗಾರರಿಗೆ ಯುನಿಕೋಡ್ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದರು.
ಐಒಬಿ ಡಿಜಿಎಂ ಆಗಿ ಅನಿಲ್
ಇಂಡಿಯನ್ ಒವರ್‌ಸಿಸ್ ಬ್ಯಾಂಕ್(ಐಒಬಿ)ನ ಹಿರಿಯ ರೀಜನಲ್ ಮ್ಯಾನೇಜರ್ ಕೆ. ಅನಿಲ್ ಅವರು ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ ಪಡೆದಿದ್ದಾರೆ. ತುಮಕೂರಿನ ಪೋಲೇನಹಳ್ಳಿಯಲ್ಲಿ 1958ರಲ್ಲಿ ಜನಿಸಿದ ಅನಿಲ್, ಬೆಂಗಳೂರು ಕೃಷಿ ವಿವಿಯಲ್ಲಿ ಎಂಎಫ್‌ಎಸ್ಸಿ ಪದವಿ ಪಡೆದು ಭಾರತೀಯ ಕೃಷಿ ಸಂಶೋಧನಾ ಕೌನ್ಸಿಲ್‌ನಿಂದ ಸ್ಕಾಲರ್‌ಶಿಪ್ ಪಡೆದರು. 1984ರಲ್ಲಿ ಐಒಬಿಗೆ ಕೃಷಿ ಅಧಿಕಾರಿಯಾಗಿ ಸೇರ್ಪಡೆಯಾದರು. ಬೆಂಗಳೂರಿನಲ್ಲಿ ಶಾಖೆ ಮ್ಯಾನೇಜರ್ ಆಗಿದ್ದಾಗ 3 ಬಾರಿ ಅಖಿಲ ಭಾರತ ಉತ್ತಮ ಮೆಟ್ರೋಪಾಲಿಟನ್ ಶಾಖೆ ಪ್ರಶಸ್ತಿ ಗಳಿಸಿದ್ದರು. ವಿಮಾ ವಹಿವಾಟು ಅಭಿವೃದ್ಧಿ ಕುರಿತಂತೆ ಎಲ್‌ಐಸಿ ಇಂಡಿಯಾದಿಂದ ಸಿಂಗಾಪುರ, ಮಾರಿಷಸ್ ಮತ್ತು ಇಂಗ್ಲೆಂಡ್‌ಗೆ ತೆರಳಿದ್ದರು. ಇವರ ನೇತೃತ್ವದಲ್ಲಿ ಈ ಬ್ಯಾಂಕ್ 2 ಬಾರಿ ಅಖಿಲ ಭಾರತ ಮಟ್ಟದಲ್ಲಿ ಉತ್ತಮ ಪ್ರಾಂತ್ಯ ಎಂದು ಪ್ರಥಮ ಪ್ರಶಸ್ತಿ ಪಡೆದುಕೊಂಡಿತ್ತು. ಎಲ್‌ಐಸಿ ವಹಿವಾಟಿನಲ್ಲಿ ಅಖಿಲ ಭಾರತ ಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ ಪಡೆದಿದ್ದರು. ಇದಕ್ಕೂ ಮೊದಲು ಇವರು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಸಂಶೋಧನಾ ಅಸೋಸಿಯೇಟ್ ಆಗಿ, ಬೆಂಗಳೂರಿನ ಕೃಷಿ ವಿಜ್ಞಾನ ವಿವಿ ಮತ್ತು ಮೀನುಗಾರಿಕಾ ಇಲಾಖೆಯಲ್ಲಿ ಅಧೀಕ್ಷಕರಾಗಿದ್ದರು.
6ನೇ ಗೋ ಗ್ರೀನ್ ಮಾಸಾಚರಣೆ
ಏಷಿಯಾದ ಪ್ರಮುಖ ವ್ಯಾಪಾರಿ ಸ್ಥಳಾವಕಾಶ ಒದಗಿಸುವ ಅಸೆಂಡಾನ್ ತನ್ನ 6ನೇ ಗೋ ಗ್ರೀನ್ ಮಾಸವನ್ನು ಐಟಿಪಿಬಿಯಲ್ಲಿ ಆಚರಿಸಲಿದೆ. ತಿಂಗಳಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ಮನೋರಂಜನೆ, ಮೋಜುಗಳು ಬೆರೆತು, ಪಾರ್ಕ್‌ನಲ್ಲಿ ಉದ್ಯೋಗ ಮಾಡುತ್ತಿರುವ ಸುಮಾರು 30,000 ವೃತ್ತಿಪರರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಚಟುವಟಿಕೆಗಳಲ್ಲಿ ಹಸಿರು ಕಲೆ ವಸ್ತುಪ್ರದರ್ಶನ, ಹಸಿರು ಕಲ್ಪನೆ ಸ್ಪರ್ಧೆ, ಪರಿಸರ ಆಂದೋಲನ, ಪರಿಸರ ಬಜಾರ್, ಹಸಿರು ಸಂಗೀತ ಮೇಳ ಇವುಗಳನ್ನು ಒಳಗೊಂಡ ಹಲವಾರು ಹಸಿರಿನತ್ತ ಸಾಗುವ ಉಪಕ್ರಮಗಳನ್ನು ಆಯೋಜಿಸಲಾಗಿದೆ. ಮೇಳವು ಇಂಟರ್‌ನ್ಯಾಷನಲ್ ಟೆಕ್ ಪಾರ್ಕ್‌ನಲ್ಲಿ ಆಯೋಜನೆಗೊಂಡಿದೆ.