ವಿತ್ತಲೋಕ ದ ಸುತ್ತಮುತ್ತ
ಇಂದಿರಾನಗರದ ಹೈಸ್ಟ್ರೀಟ್ನಲ್ಲಿ ನ್ಯೂಸ್ ಕೆಫೆ ಆರಂಭವಾಗಿದೆ. ಕಾಕ್ಟೇಲ್ ಬಾರ್ ಕಮ್ ರೆಸ್ಟೋರೆಂಟ್ ಇದಾಗಿದ್ದು, ಇಲ್ಲಿ ಸ್ವಾದಿಷ್ಟ ಖಾದ್ಯಗಳು ಮತ್ತು ಉತ್ಸಾಹದಾಯಕ ಕಾಕ್ಟೇಲ್ಗಳು ತನ್ನ ಅಭಿಮಾನಿಗಳನ್ನು ಹೈ ಸ್ಪಿರಿಟ್ನಲ್ಲಿಡುವಂತೆ ಮಾಡಿವೆ. ಗ್ರಾಹಕರು ಸಿಗ್ನೇಚರ್ ಕಾಕ್ಟೇಲ್ಗಳಿಂದ ತಮಗೆ ಇಷ್ಟವಾಗುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಇವುಗಳು ಮ್ಯಾಂಗೋ ಚಿಲ್ಲಿ ಮಾರ್ಟಿನಿ, ಗಿಗಲ್ ಜ್ಯೂಸ್, ಪೀಚ್ ಕ್ಯಾಪ್ರಿಯೋಸ್ಕಾನಿಂದ ಡೆಸ್ಪರೇಟ್ ಹೌಸ್ವೈಫ್, ಕಾಫಿರ್ ಲೈಮ್ ಮಾರ್ಟಿನಿ, ಸೈಡ್ ಕಾರ್, ಕ್ರಾನ್ ಜಿಂಜರ್, ಜಿಂಜರ್ ಮಾಜಿಟೋ ಹಾಗೂ ವಾಟರ್ಮೆಲನ್ ಮತ್ತು ಹನಿ ಮಾರ್ಟಿನಿವರೆಗೆ ವಿವಿಧ ಬಗೆಗಳಿವೆ. ಅತ್ಯುತ್ತಮ ಘಟಕಗಳು ಹಾಗೂ ಅತ್ಯುತ್ತಮ ಆಲ್ಕೋಹಾಲ್ನಿಂದ ತಯಾರಿಸಿರುವ ಈ ಕಾಕ್ಟೇಲ್ಗಳು ತಂಪು ರಾತ್ರಿಗೆ ಅತ್ಯುತ್ತಮ ಪರಿಹಾರಗಳೆನಿಸಿವೆ. ಸಂಜೆ ಗಾನಸಿರಿಯೊಂದಿಗೆ ರಸಭರಿತ ಊಟ ಸವಿಯುವುದು ಕೆಫೆಯ ವಿಶಿಷ್ಟತೆಯಲ್ಲೊಂದು.
ರಾಮ್ಕೋ ಎಚ್ಸಿಎಂ ಆನ್ ಕ್ಲೌಡ್ಸ್ ಬಿಡುಗಡೆ
ಇಆರ್ಪಿಯನ್ನು ಕ್ಲೌಡ್, ಟ್ಯಾಬ್ಲೆಟ್ಗಳಲ್ಲಿ ಹಾಗೂ ಸ್ಮಾರ್ಟ್ ಫೋನ್ಗಳಲ್ಲಿ ಹೊರತರುವಲ್ಲಿ ಗಮನ ಕೇಂದ್ರಿಕರಿಸಿರುವ ರಾಮ್ಕೋ ಸಿಸ್ಟಮ್ಸ್ ಸಾಫ್ಟ್ವೇರ್ ಪ್ರಾಡಕ್ಟ್ ಕಂಪನಿ ತನ್ನ ಸಮಗ್ರ ಎಚ್ಆರ್ ಮತ್ತು ಪ್ರತಿಭಾ ನಿರ್ವಹಣೆ ಪರಿಹಾರವಾಗಿರುವ ರಾಮ್ಕೋ ಎಚ್ಸಿಎಂ ಆನ್ ಕ್ಲೌಡ್ಸ್ ಜಾಗತಿಕ ಬಿಡುಗಡೆಯನ್ನು ಪ್ರಕಟಿಸಿದೆ. ಈ ಬಿಡುಗಡೆಯು ರಾಮ್ಕೋನ ಇನ್ ಮೆಮರಿ ಎಂಜಿನ್ ಮಿನ್ನಾಲ್ನ ಹೊರತರುವಿಕೆಯನ್ನು ಕೂಡ ಪ್ರಕಟಿಸಿದ್ದು, ಇದು ಪ್ರೊಸೆಸಿಂಗ್ ವೇಗವನ್ನು 100 ಬಾರಿಯವರೆಗೂ ಸುಧಾರಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ರಾಮ್ಕೋ ಸಿಸ್ಟಮ್ಸ್ ಸಿಇಒ ವೀರೇಂದ್ರ ಅಗರವಾಲ್, ಎಲ್ಲ ಸಂಸ್ಥೆಗಳು ಇದನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಎಂಟರ್ಪ್ರೈಸ್ ಕ್ಲೌಡ್ ಮಾರುಕಟ್ಟೆ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ತಂತ್ರಜ್ಞಾನದಲ್ಲಿ ನಮ್ಮ ಬಂಡವಾಳ ಹೂಡಿಕೆ ಮತ್ತು ಚಲನಶೀಲತೆಯನ್ನು ಜನರೇಷನ್-ವೈ ಬಳಕೆದಾರ ಇಂಟರ್ಫೇಸ್, ಪಾತ್ರ ಆಧಾರಿತ ಕಾರ್ಯಸ್ಥಳಗಳನ್ನು ಮತ್ತು ಇನ್ ಮೆಮೊರಿ ಎಂಜಿನ್ಅನ್ನು ಕ್ಲೌಡ್ ಆಧರಿತ ಆಫರಿಂಗ್ನಲ್ಲಿ ತರುವಲ್ಲಿ ನಮ್ಮ ಗಮನ ಜಾಗತಿಕವಾಗಿ ಹೊಂದಲು ಸಹಕಾರಿಯಾಗಿದೆ ಎಂದರು.
ಕೆಟಿಎಂ ಡ್ಯೂಕ್ 390 ಸಿಸಿ ಬೈಕ್ ಮಾರುಕಟ್ಟೆಗೆ
ಬಜಾಬ್ ಆಟೋ ಲಿಮಿಟೆಡ್ ನೂತನ ಕೆಟಿಎಂ ಡ್ಯೂಕ್ 390 ಸಿಸಿ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನ ಬೈಕ್ ಹ್ಯಾಡಲಿಂಗ್ ಪ್ರಬಲವಾದ ಟೈರ್ನಿಂದ ಗ್ರಾಹಕರನ್ನು ಇದು ಆಕರ್ಷಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. 390ಸಿಸಿ ಎಂಜಿನ್ ಸಾಮ್ಯರ್ಥಹೊಂದಿರುವ ಬೈಕ್ ದೇಶದಲ್ಲೇ ಮೊದಲ ಮಧ್ಯಮ ಗಾತ್ರದ ಕ್ರೀಡಾ ವಾಹನವಾಗಿದೆ. ಈ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬಜಾಜ್ ಸಂಸ್ಥೆ ಉಪಾಧ್ಯಕ್ಷ ಅಮಿತ್ ನಂದಿ ಅವರು ಮಾತನಾಡಿ, ಈ ವಾಹನ ಅತ್ಯುತ್ತಮ ಎಂಜಿನ್ ಸಾಮರ್ಥ್ಯ ಹೊಂದಿದ್ದು, ಹೆಚ್ಚು ತೂಕ ಇಲ್ಲದೆ ಸ್ಟೈಲಿಷ್ ಆಗಿ ಕಾಣಲಿದೆ ಎಂದು ಹೇಳಿದರು.
ಡ್ಯೂಕ್ಬೈಕ್ ದೆಹಲಿ ಶೋರೂಮ್ ಬೆಲೆ 1.80 ಲಕ್ಷವಾಗಿದೆ. ಆರು ಗ್ರೇರ್ಗಳು, 300 ಎಂಎಂ ಡಿಸ್ಕ್ ಬ್ರೇಕ್ ಜತೆಗೆ ಪಾಟ್ ಬ್ರೇಕಿಂಗ್ ವ್ಯವಸ್ಥೆಸಹ ಇದರಲ್ಲಿದೆ. ವಾಹನ ತೂಕ 145 ಕೆ.ಜಿ.
ಫ್ರೆಡೆನ್ಬರ್ಗ್ ಸಮೂಹಕ್ಕೆ 1,114 ಕೋಟಿ ವಹಿವಾಟು
ಅಂತಾರಾಷ್ಟ್ರೀಯವಾಗಿ ಸಕ್ರಿಯವಾಗಿರುವ, ಫ್ರೆಡನ್ಬರ್ಗ್ ಕುಟುಂಬ ಉದ್ಯಮ ಭಾರತದಲ್ಲಿ 2012ರಲ್ಲಿ ಮತ್ತೊಂದು ಅತ್ಯುಚ್ಛ ಬೆಳವಣಿಗೆ ದಾಖಲಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದಾಗ ಸಂಸ್ಥೆಯ ಮಾರಾಟವು ಶೇ. 17ರಷ್ಟು ಅಂದರೆ 1,114 ಕೋಟಿಗೆ ಹೆಚ್ಚಿದೆ. ಈ ರೀತಿಯ ಧನಾತ್ಮಕ ಉದ್ಯಮ ಬೆಳವಣಿಗೆಯಿಂದ ಭಾರತದಲ್ಲಿ ನಮ್ಮ ಸಂಸ್ಥೆಗಳು, ಫ್ರೆಡೆನ್ಬರ್ಗ್ ಸಮೂಹದ ಯಶಸ್ಸಿಗೆ ಪ್ರಮುಖ ಪಾಲನ್ನು ನೀಡಿವೆ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆ ಪರಿಸ್ಥಿತಿಯಲ್ಲಿಯೂ, ಯಶಸ್ವಿಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿವೆ ಎಂದು ಭಾರತದ ಪ್ರತಿನಿಧಿ ಮತ್ತು ಫ್ರೆಡೆನ್ಬರ್ಗ್ ಕೆಮಿಕಲ್ ಸ್ಪೆಶಾಲಿಟೀಸ್ನ ಮುಖ ಆರ್ಥಿಕ ಅಧಿಕಾರಿ ಡಾ. ಜೊರ್ಗ್ ಮಾಥಿಯಾಸ್ ಗ್ರಾಬ್ಮನ್ ತಿಳಿಸಿದ್ದಾರೆ. ನಗರದಲ್ಲಿ ನೂತನ ಪ್ರಾಂತೀಯ ಕೇಂದ್ರವನ್ನು ತೆರೆಯುವುದರ ಮೂಲಕ ಫ್ರೆಡೆನ್ಬರ್ಗ್ ಸಮೂಹ ಬೆಂಗಳೂರಿನ ಪ್ರಾಮುಖ್ಯತೆಯನ್ನು ಅರಿತುಕೊಂಡಿದೆ ಮತ್ತು ಇದು ಭಾರತದಲ್ಲಿ ಫ್ರೆಡೆನ್ಬರ್ಗ್ ಸಮೂಹದ ಅಭಿವೃದ್ಧಿಗೆ ಸಹಕಾರ ನೀಡುವುದನ್ನು ಮುಂದುವರೆಸುತ್ತದೆ. ಅಲ್ಲದೆ, ಲೋಹರಹಿತ ವಿಸ್ತರಣಾ ಜೋಡಣೆಗಳಿಗಾಗಿ ಚೆನ್ನೈನಲ್ಲಿ ಈಗಲ್ಬರ್ಗ್ಮನ್ ಉತ್ಪಾದನಾ ಘಟಕದಲ್ಲಿ, 6ಕೋಟಿಗಳ ಬಂಡವಾಳ ಹೂಡಿಕೆ ನಿರ್ಧಾರದೊಡನೆ, ಸಮೂಹವು ಈ ಪ್ರಾಂತ್ಯದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಾಗಿದೆ ಎಂದು ಹೇಳಿದರು.
ಬಾರ್ನ್ ಲರ್ನಿಂಗ್ ಪೌಷ್ಟಿಕ ತೋಟಗಳ ಸೃಷ್ಟಿ
ಅಪೌಷ್ಟಿಕತೆ ವಿರುದ್ಧ ಹೋರಾಡಲು, ಬೆಂಗಳೂರಿನ ಸಂಯುಕ್ತ ಮಾರ್ಗ ಮಕ್ಕಳ ಪೌಷ್ಟಿಕತೆಯ ಅವಶ್ಯಕತೆಯನ್ನು ಅರಿತುಕೊಳ್ಳಲು ಮತ್ತು ಮಹತ್ವವನ್ನು ತಿಳಿಸಲು ಬಾರ್ನ್ ಲರ್ನಿಂಗ್ ಪೌಷ್ಟಿಕ ತೋಟಗಳ ಸೃಷ್ಟಿ ಕಾರ್ಯಕ್ರಮ ಆಯೋಜಿಸಿತ್ತು. ಖ್ಯಾತ ತಜ್ಞ ಡಾ.ಕೆ.ಸಿ. ರಘು ಪೌಷ್ಟಿಕತೆಯ ಮಹತ್ವ ಮತ್ತು ಪ್ರಾಮುಖ್ಯತೆಯ ಬಗ್ಗೆ ಅನೇಕ ಒಳನೋಟಗಳನ್ನು ಹಂಚಿಕೊಂಡರು. ಪೌಷ್ಟಿಕತೆಯನ್ನು ಸುಲಭವಾಗಿ ಸ್ಥಳೀಯವಾಗಿಯೇ ಪಡೆಯಬಹುದು ಮತ್ತು ಅದು ದುಬಾರಿಯಾಗಿರಬೇಕಾಗಿಲ್ಲ ಎಂದರು. ಇಂದಿನ ಮಕ್ಕಳು ಅವರ ತಾತ ಅಜ್ಜಿಯರು ಕೇಳಿಲ್ಲದ ಹೆಸರಿನ ಆಹಾರವನ್ನೇ ಆಶಿಸುತ್ತಾರೆ. ಅದೇ ಈಗಿನ ಅಪೌಷ್ಟಿಕತೆ ಮತ್ತು ದೇಶದ ಅಭಿವೃದ್ಧಿಗೆ ತಡೆಯಾಗಲು ಅತಿದೊಡ್ಡ ಕಾರಣ ಎಂದು ಹೇಳಿದರು.
ಐಡಿಯಾ ಮೊಬೈಲ್ ಟಾರಿಫ್ನಲ್ಲಿ ಇಳಿಕೆ
ಐಡಿಯಾ ಮೊಬೈಲ್ ಸಂಸ್ಥೆ ತನ್ನ ಟಾರಿಫ್ ಅನ್ನು 8 ಸರ್ಕಲ್ಗಳಲ್ಲಿ ಶೇ. 90ಕ್ಕೆ ಇಳಿಸಿದೆ. ಭಾರತದ 3ನೇ ಅತಿ ದೊಡ್ಡ ಮೊಬೈಲ್ ಆಪರೇಟರ್ ಹಾಗೂ ದೇಶಾದ್ಯಂತ ಡಾಟಾ ಬಳಕೆದಾರರ ಆದ್ಯತೆಯ ನೆಟ್ವರ್ಕ್ ಆಗಿರುವ ಐಡಿಯಾ ಸೆಲ್ಯೂಲರ್ ದೇಶದಾದ್ಯಂತ ಎಂಟು ಸರ್ಕಲ್ಗಳಲ್ಲಿ ಡಾಟಾ ಟಾರಿಫ್ಗಳನ್ನು ಪರಿಷ್ಕರಿಸಿದೆ. ಐಡಿಯಾ ಬಳಕೆದಾರರು ಈಗ ಕೇವಲ 2 ಪೈಸೆಯಲ್ಲಿ 10 ಕೆಬಿಯಂತೆ ಡಾಟಾಗಳಿಗೆ ಪ್ರವೇಶಿಸಬಹುದಾಗಿದೆ. ಈವರೆಗೆ 2ಪೈಸೆಗೆ 1 ಕೆಬಿ ಡಾಟಾ ಪ್ರವೇಶಿಸಲು ಅವಕಾಶವಿತ್ತು. ಐಡಿಯಾದ ಹೊಸ ಟಾರಿಫ್ ಜು. 1ರಿಂದ ಪ್ರಾರಂಭವಾಗಲಿದ್ದು, ಇದು 90ದಿನಗಳವರೆಗೆ ಜಾರಿಯಲ್ಲಿರುತ್ತದೆ.
ಕತ್ರಿನಾ ಕೈಫ್ ಜಾನ್ಸನ್ ಬ್ರಾಂಡ್ ಅಂಬಾಸಿಡರ್
ಮುಂಬೈ: ಹೋಮ್ ಲೈಫ್ಸ್ಟೈಲ್ ವಲಯದ 'ಎಚ್ ಆ್ಯಂಡ್ ಆರ್ ಜಾನ್ಸನ್' ಕಂಪನಿಯ ಬ್ರಾಂಡ್ ಅಂಬಾಸಿಡರಾಗಿ ಬಾಲಿವುಡ್ನ ಖ್ಯಾತ ಅಭಿನೇತ್ರಿ ಕತ್ರಿನಾ ಕೈಫ್ ಸಹಿ ಹಾಕಿದ್ದಾರೆ. ಕಂಪನಿಯ ಟೈಲ್ಸ್, ಬಾತ್ರೂಂ, ಮೌಲ್ಯವರ್ಧಿತ ಅಮೃತಶಿಲೆ ಮತ್ತು ಮಾಡ್ಯುಲರ್ ಕಿಚನ್ಗೆ ಸಂಬಂಧಿಸಿದ ಉತ್ಪನ್ನಗಳ ಪ್ರಚಾರ ಮಾಡಲಿದ್ದಾರೆ. ವಿಶೇಷ ಎಂದರೆ, ಇದೇ ಮೊದಲ ಬಾರಿಗೆ ಕಂಪನಿ ಪ್ರಸಿದ್ಧ ತಾರೆಯೊಬ್ಬರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಂಡಿದೆ. ಕತ್ರಿನಾ ಕೈಫ್ ರಾಯಭಾರತ್ವದಲ್ಲಿ ಜಾನ್ಸನ್ ಬ್ರಾಂಡಿನ ಗುಣಮಟ್ಟದ ವಿಶ್ವಾಸಾರ್ಹತೆಯನ್ನು ಜನಮನದಲ್ಲಿ ಮೂಡಿಸುವ ಕಾರ್ಯದಲ್ಲಿ ಕಂಪನಿ ಯಶಸ್ವಿಯಾಗಲಿದೆ ಎಂದು ಎಚ್ ಆ್ಯಂಡ್ ಆರ್ ಜಾನ್ಸನ್(ಭಾರತ) ಕಂಪನಿಯ ಮುಖ್ಯ ನಿರ್ವಹಣಾಧಿಕಾರಿ ಸುಶಿಲ್ ಮಥೇ ಈ ಸಂದರ್ಭದಲ್ಲಿ ತಿಳಿಸಿದರು. ಕಂಪನಿಯ ನೂತನ ಅಂಬಾಸಿಡರ್ ಆಗಿರುವ ಕೈಫ್ ಮಾತನಾಡಿ, ಎಚ್ ಆ್ಯಂಡ್ ಆರ್ ಜಾನ್ಸನ್ ಕಂಪನಿ ಜತೆ ಗುರುತಿಸಿಕೊಳ್ಳುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇದೊಂದು ವಿಶ್ವಾಸಾರ್ಹ ಕಂಪನಿಯಾಗಿದೆ ಎಂದು ತಿಳಿಸಿದರು. ಈ ಕಂಪನಿ ಸೃಜನಶೀಲ ಪಾಲುದಾರರನ್ನಾಗಿ ಒಗಿಲ್ವಿ ಸಹೋದರ ಸಂಸ್ಥೆಯಾಗಿರುವ ಸೋಹಾ ಸ್ಕೇರ್ ಜತೆ ಒಪ್ಪಂದ ಮಾಡಿಕೊಂಡಿದೆ.
ಏರ್ಟೆಲ್, ಗೂಗಲ್ ಜೊತೆ ಫ್ರೀ ಝೋನ್ ಸೇವೆ
ಭಾರತದ ಪ್ರತಿಷ್ಠಿತ ಮೊಬೈಲ್ ನೆಟ್ವರ್ಕ್ ಹಾಗೂ ಬ್ರಾಡ್ಬ್ಯಾಂಡ್ ಸಂಸ್ಥೆ ಭಾರ್ತಿ ಏರ್ಟೆಲ್ ಮತ್ತು ಅಂತರ್ಜಾಲ ಹುಡುಕು ತಾಣಸಂಸ್ಥೆ ಗೂಗಲ್ ಕೈಜೋಡಿಸಿದ್ದು, ಜಂಟಿಯಾಗಿ ನೂತನ ಫ್ರೀ ಝೋನ್ ಸೇವೆ ಹೊರತರುವುದಾಗಿ ಘೋಷಿಸಿದೆ. ಈ ನೂತನ ಸೇವೆಯಿಂದಾಗಿ ಏರ್ಟೆಲ್ ಮೊಬೈಲ್ ಗ್ರಾಹಕರು ಯಾವುದೇ ಡಾಟಾ ಶುಲ್ಕ ಇಲ್ಲದಂತೆ ಗೂಗಲ್ನ ಹುಡುಕು ತಾಣ ಬಳಸಬಹುದಾಗಿದೆ. ಜತೆಗೆ ಜಿ ಮೇಲ್ ಹಾಗೂ ಜಿ ಪ್ಲಸ್ನಂತಹ ಗೂಗಲ್ನ ಜನಪ್ರಿಯ ಸೇವೆಗಳನ್ನು ಶುಲ್ಕ ರಹಿತವಾಗಿ ಬಳಸಬಹುದಾಗಿದೆ. ಸಂಸ್ಥೆಯ ನೂತನ ಯೋಜನೆ ಕುರಿತು ಮಾತನಾಡಿದ ಗೂಗಲ್ ಇಂಡಿಯಾ ಸಂಸ್ಥೆಯ ಉಪನಿರ್ದೇಶಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜನ್ ಆನಂದ್, ಭಾರತದಲ್ಲಿ ಮೊಬೈಲ್ ಮೂಲಕ ಅಂತರ್ಜಾಲ ಬಳಕೆ ಮಾಡುವವರ ಸಂಖ್ಯೆ ದಿನೇ ದಿನೇ ಏರುತ್ತಲಿದೆ. ಹೀಗಾಗಿ ಏರ್ಟೆಲ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ನೂತನ ಒಪ್ಪಂದದಿಂದಾಗಿ ಮೊಬೈಲ್ ಬಳಕೆ ಮಾಡುವ ಗ್ರಾಹಕರು ಯಾವುದೇ ಶುಲ್ಕವಿಲ್ಲದೆ ಅಂತರ್ಜಾಲ ಬಳಕೆ ಮಾಡಲು ನೆರವಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಗೃಹಿಣಿಯರಿಗೂ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅನುವಾಗುವಂತೆ ಅಂತರ್ಜಾಲದ ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಬಂಧುಮಿತ್ರರೊಂದಿಗೆ ನಿತ್ಯ ಸಂಪರ್ಕದಲ್ಲಿರಲು ಫ್ರೀ ಝೋನ್ ನೆರವಾಗಲಿದೆ ಎಂದು ವಿವರಿಸಿದರು.
ಏರ್ಸೆಲ್ನಿಂದ ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆ
ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಏರ್ಸೆಲ್ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೂತನ ಡೇಟಾ ಪ್ಯಾಕ್ ಬಿಡುಗಡೆಗೊಳಿಸಿದೆ. ಹೊಸ ಶೈಕ್ಷಣಿಕ ವರ್ಷ ಆರಂಭಿಸುತ್ತಿರುವ 50ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳಿಗೆ ನೋಟ್ ಜೈನ್ ಎಂಬ ವಿಶೇಷ ಕ್ಯಾಂಪಸ್ ಆಕ್ಟಿವೇಶನ್ ಸ್ಪಾನ್ಸರ್ಶಿಪ್ ಒದಗಿಸುತ್ತದೆ.
ಪ್ಲಾನ್ ವೋಚರ್ 77 ಟೋ ಸ್ಟೇ ಕನೆಕ್ಟೆಡ್ ಎಂಬ ನೂತನ ಉತ್ಪನ್ನವನ್ನು ಒಳಗೊಂಡಿದ್ದು, ಸ್ಥಳೀಯ ಏರ್ಸೆಲ್ನಿಂದ ಏರ್ಸೆಲ್ಗೆ 100,000 ಸೆಕೆಂಡ್ನಷ್ಟು ಕರೆ ಮಾಡಲು ಅವಕಾಶವಿದೆ. ಪ್ರತಿ ತಿಂಗಳಿಗೆ 20ರಂತೆ ಆರು ತಿಂಗಳ ಅವಧಿಯ ಟಾಕ್ಟೈಮ್ ಹೊಂದಿದೆ. ಮೊದಲ ಮೂರು ಎಸ್ಎಂಎಸ್ಗಳಿಗೆ ತಲಾ 50 ಪೈಸೆಯಂತೆ ನೀಡಿದರೆ ನಂತರದ 99 ಎಸ್ಎಂಎಸ್ಗಳು ಉಚಿತ. ಇದರೊಂದಿಗೆ ಗುಡ್ ಮಾರ್ನಿಂಗ್ ಬೆಂಗಳೂರು - ಉಚಿತ 3ಜಿ ಡೇಟಾ ಪರಿಚಯಿಸಿದೆ. ಈ ಕುರಿತು ಮಾತನಾಡಿದ ಏರ್ಸೆಲ್ ಲಿಮಿಟೆಡ್ನ ಸರ್ಕಲ್ ಬಿಸಿನೆಸ್ ಮುಖ್ಯಸ್ಥ ಕೆ. ಕದಿವರನ್, ಏರ್ಸೆಲ್ ಇಂದಿನ ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು 3ಜಿ ಆಧಾರಿತ ಸೇವೆಯನ್ನು ಒದಗಿಸಲಿದೆ. ಸಂಗೀತ, ವೀಡಿಯೋ, ಟಿವಿ ಶೋ, ಗೇಮಿಂಗ್ ಶೇರಿಂಗ್ ಪೋಟೋ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಪಾಕೆಟ್ ಇಂಟರ್ನೆಟ್ 24 ವಿದ್ಯಾರ್ಥಿಗಳಿಗೆ ಅವರ ಸ್ನೇಹಿತರೊಡನೆ ನಿರಂತರ ಸಂಪರ್ಕದಲ್ಲಿರಲು ಸಹಕಾರವಾಗಲಿದೆ ಎಂದರು.
ಜಗತ್ತಿನ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಫೋರ್ಟೀಸ್ಗೆ 4ನೇ ಸ್ಥಾನ
ವೈದ್ಯಕೀಯ ಪ್ರವಾಸಿಗಳಿಗೆ ಸಂಬಂಧಿಸಿದಂತೆ ಜಗತ್ತಿನಲ್ಲಿಯೇ ಅತ್ಯುತ್ತಮ ಆಸ್ಪತ್ರೆಗಳಲ್ಲಿ 2013ರ ಪಟ್ಟಿಯಲಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟೀಸ್ ಆಸ್ಪತ್ರೆ 4ನೇ ಸ್ಥಾನ ಗಳಿಸಿದೆ. ಸತತ 4ನೇ ಬಾರಿಗೆ ಮೆಡಿಕಲ್ ಟ್ರಾವೆಲ್ ಕ್ವಾಲಿಟಿ ಅಲಾಯನ್ಸ್ನ ವಾರ್ಷಿಕ ಪಟ್ಟಿಯಲ್ಲಿ ಆಸ್ಪತ್ರೆ ಗುರುತಿಸಿಕೊಂಡಿದೆ.
ಈ ಗೌರವವು ಜಾಗತಿಕ ಮಟ್ಟದಲ್ಲಿ ವೈದ್ಯಕೀಯ ಪರಿಣತಿಯನ್ನು ಹೊಂದಿದ ಒಂದು ಸಂಸ್ಥೆಯಾಗಿ ನಮ್ಮನ್ನು ಗುರುತಿಸುತ್ತದೆ ಎಂದು ಪೊರ್ಟೀಸ್ ಬೆಂಗಳೂರು ವಲಯ ನಿರ್ದೇಶಕ ಪಿ. ಡೇವಿಸನ್ ಈ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ. ಔಟ್ಲುಕ್ ಹಾಸ್ಪಿಟಲ್ ವಾರ್ಷಿಕ ಸರ್ವೇ 2012ರ ಹೃದ್ರೋಗ ಆರೈಕೆ ವಿಭಾಗದಲ್ಲಿ ನಮ್ಮ ಆಸ್ಪತ್ರೆಯು 8ನೇ ಸ್ಥಾನ ಪಡೆದಿರುವುದು ಕೂಡ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಮೆಡಿಕಲ್ ಟ್ರಾವೆಲ್ ಕ್ವಾಲಿಟಿ ಅಲಾಯನ್ಸ್ ಪ್ರಶಸ್ತಿ ಸ್ವೀಕರಿಸಿದ ತಂಡವನ್ನು ಅಭಿನಂದಿಸಿದ ಫೋರ್ಟಿಸ್ ಹೆಲ್ತ್ ಕೇರ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆದಿತ್ಯ ವಿಜ್ ಮಾತನಾಡಿ, ಪೋರ್ಟಿಸ್ ಆಸ್ಪತ್ರೆಗಳು ವೈದ್ಯಕೀಯ ಪ್ರವಾಸೋದ್ಯಮದ ನಕ್ಷೆಯಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದೆ. ಇನ್ನೂ ಅಧಿಕ ಸಂಖ್ಯೆಯಲ್ಲಿ ರೋಗಿಗಳು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಅದರಲ್ಲೂ ಮುಖ್ಯವಾಗಿ ಫೋರ್ಟೀಸ್ ಆಸ್ಪತ್ರೆಗೆ ಬಂದು ಸಂಪೂರ್ಣ ಗುಣಮುಖರಾಗಿ ವಾಪಸಾಗುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.