ಪ್ರತಿಷ್ಠಿತ ಸಾಮಾಜಿಕ ಉದ್ಯಮಶೀಲ ಭಾರತ- 2013 ಪ್ರಶಸ್ತಿಗಾಗಿ ಪ್ರವೇಶಗಳನ್ನು ಆಹ್ವಾನಿಸಿದೆ. ಪ್ರಶಸ್ತಿ ವಿಜೇತರು ಸ್ಕ್ವಾಬ್ ಫೌಂಡೇಶನ್ನಿನ 2014 ವರ್ಷದ ಸಾಮಾಜಿಕ ಉದ್ಯಮಶೀಲರ ಜಾಗತಿಕ ಸಮುದಾಯದಲ್ಲಿ ಸೇರಿಕೊಳ್ಳಲಿದ್ದಾರೆ.
ನೆಕ್ಸ್ಟ್ ಬಿಗ್ ಐಡಿಯಾ ಸ್ಪರ್ಧೆಗೆ ಸಕಲ ಸಜ್ಜು
ಬೆಂಗಳೂರು: ಮೇ 20ರಿಂದ 22ರವರೆಗೆ ನಡೆಯಲಿರುವ 2013ನೇ ಸಾಲಿನ ರಾಷ್ಟ್ರೀಯ ಉದ್ಯಮ ಯೋಜನಾ ಸ್ಪರ್ಧೆ ನೆಕ್ಸ್ಟ್ ಬಿಗ್ ಐಡಿಯಾ ಕಾರ್ಯಕ್ರಮದ ಆತಿಥ್ಯ ವಹಿಸಲು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಎನ್.ಎಸ್. ರಾಘವನ್ ಸೆಂಟರ್ ಫಾರ್ ಎಂಟರ್‌ಪ್ರಿನ್ಯೂರಿಯಲ್ ಲರ್ನಿಂಗ್ ಸಂಸ್ಥೆ ಸರ್ವಸನ್ನದ್ಧವಾಗಿದೆ. ಎನ್‌ಬಿಐ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಂಟೆಲ್ ಇಂಡಿಯಾದ ಮಾರ್ಗದರ್ಶದಲ್ಲಿ ನ್ಯಾಶನಲ್ ಸೈನ್ಸ್ ಅಂಡ್ ಟೆಕ್ನಾಲಜಿ ಎಂಟರ್‌ಪ್ರಿನ್ಯೂಯರ್‌ಷಿಪ್ ಡೆವಲಪ್‌ಮೆಂಟ್ ಬೋರ್ಡ್‌ನಿಂದ ಪ್ರಾಯೋಜನೆ ಹಾಗೂ ಬೆಂಬಲ ಪಡೆಯುತ್ತಿದೆ. ಸ್ಪರ್ಧೆ 2 ಸುತ್ತುಗಳಲ್ಲಿ ನಡೆಯಲಿದೆ. ಪೂರ್ವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಯ್ಕೆಗೊಂಡಿರುವ 32 ತಂಡಗಳಲ್ಲಿ ಅಂತಿಮ ಸುತ್ತಿಗಾಗಿ 10 ತಂಡಗಳು ಆಯ್ಕೆಗೊಳ್ಳಲಿವೆ. ಅಂತಿಮ ಸುತ್ತಿನಲ್ಲಿ ಮೂರು ತಂಡಗಳು ಆಯ್ಕೆಯಾಗಲಿವೆ. ಮೊದಲನೆಯ, ಎರಡನೆಯ ಹಾಗೂ ಮೂರನೆಯ ಬಹುಮಾನ ಪಡೆದ ವಿಜಯಿಗಳ ವಿವರಗಳನ್ನು ಜೂನ್ 2013ರಲ್ಲಿ ನಡೆಯಲಿರುವ ಪ್ರತ್ಯೇಕ ಪ್ರಶಸ್ತಿ ಸಮಾರಂಭದಲ್ಲಿ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಕರಕುಶಲ ಕಲೆ ಪ್ರದರ್ಶನ ಯಶಸ್ವಿ
ಕೈಮಗ್ಗ, ಕರಕುಶಲ ಕಲೆ ಮತ್ತು ಆಭರಣಗಳ ಪ್ರದರ್ಶನ ನಗರದ ಪ್ರೇಮಚಂದ್ರ ಸಾಗರ್ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು. ದೇಶದ ವಿವಿಧ ರಾಜ್ಯಗಳ 100ಕ್ಕೂ ಅಧಿಕ ಕರಕುಶಲ ಕರ್ಮಿಗಳು ಮತ್ತು ಕಲಾಕಾರರು ತಾವು ಕೈಯಿಂದಲೇ ನೇಯ್ದ ಬಟ್ಟೆಗಳನ್ನು, ಸೂಕ್ಷ್ಮ ಕೆತ್ತನೆಗಳ ಮೂಲಕ ತಯಾರಿಸಿದ ಕಲಾಕೃತಿಗಳನ್ನು ಇಲ್ಲಿ 60ಕ್ಕೂ ಅಧಿಕ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು. ಸುಮಾರು 60 ಲಕ್ಷ ವಹಿವಾಟು ನಡೆದಿರುವುದಾಗಿ ಅಂದಾಜಿಸಲಾಗಿದೆ.
ಉದ್ಯಮಶೀಲ ಭಾರತ- 2013 ಪ್ರಶಸ್ತಿಗಾಗಿ ಪ್ರವೇಶ
ಭಾರತೀಯ ಸಾಮಾಜಿಕ ಉದ್ಯಮಶೀಲರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ ಗೌರವಿಸುವುದಕ್ಕಾಗಿ ಸ್ಕ್ವಾಬ್ ಸೋಶಿಯಲ್ ಎಂಟರ್‌ಪ್ರೆನ್ಯೂರ್‌ಶಿಪ್ ಫೌಂಡೇಶನ್ ಮತ್ತು ಜ್ಯೂಬಿಲೆಂಟ್ ಭಾರತೀಯ ಫೌಂಡೇಶನ್ ತಮ್ಮ ಪ್ರತಿಷ್ಠಿತ ಸಾಮಾಜಿಕ ಉದ್ಯಮಶೀಲ ಭಾರತ- 2013 ಪ್ರಶಸ್ತಿಗಾಗಿ ಪ್ರವೇಶಗಳನ್ನು ಆಹ್ವಾನಿಸಿದೆ. ಪ್ರಶಸ್ತಿ ವಿಜೇತರು ಸ್ಕ್ವಾಬ್ ಫೌಂಡೇಶನ್ನಿನ 2014 ವರ್ಷದ ಸಾಮಾಜಿಕ ಉದ್ಯಮಶೀಲರ ಜಾಗತಿಕ ಸಮುದಾಯದಲ್ಲಿ ಸೇರಿಕೊಳ್ಳಲಿದ್ದಾರೆ. ಜತೆಗೆ ವಿಶ್ವ ಆರ್ಥಿಕ ವೇದಿಕೆಯ ಸಂಬಂಧಿತ ವಾರ್ಷಿಕ ಮತ್ತು ಪ್ರಾದೇಶಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಸ್ಕ್ವಾಬ್ ಸೋಶಿಯಲ್ ಎಂಟರ್‌ಪ್ರೆನ್ಯೂರ್‌ಶಿಪ್‌ನ ಸಹ- ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಹಿಲ್ದೆ ಸ್ಕ್ವಾಬ್ ಈ ಕುರಿತಂತೆ ಪ್ರತಿಕ್ರಿಯಿಸಿ, ಜಗತ್ತಿನ ಕೆಲವು ಅತ್ಯಂತ ಪ್ರಮುಖ ಸಾಮಾಜಿಕ ಉದ್ಯಮಗಳಿಗೆ ಭಾರತ ತವರೂರಾಗಿದೆ.
ಪೋಷಕರು, ವಿಶ್ವವಿದ್ಯಾಲಯಗಳು, ಕನ್‌ಸಲ್ಟೇನ್ಸಿಗಳು ಮತ್ತು ಬಂಡವಾಳಕಾರರು ಸೇರಿದಂತೆ ಸಾಮಾಜಿಕ ಉದ್ಯಮಗಳ ಬೆಳವಣಿಗೆಗಾಗಿ ದೇಶವು ಒಂದು ಪ್ರಗತಿಪರ ವಾತಾವರಣ ವ್ಯವಸ್ಥೆಯನ್ನು ನಿರ್ಮಿಸಿಕೊಂಡಿದೆ. ಸಾಮಾಜಿಕ ಉದ್ಯಮಶೀಲ ಪ್ರವೃತ್ತಿಗೆ ಭಾರತ ಹಲವಾರು ರೀತಿಯಲ್ಲಿ ಸಿಲಿಕಾನ್ ವ್ಯಾಲ್ಲೀ ಆಗಿದೆ ಎಂದರು.
ಸೇಫ್ ಇಂಜೆಕ್ಷನ್ ಎನ್ವಿರಾನ್‌ಮೆಂಟ್ ಆಂದೋಲನ
ದೇಶದ ಪ್ರಥಮ ಮಕ್ಕಳ ರೋಗ ತಜ್ಞರ ಸಂಸ್ಥೆ ಇಂಡಿಯನ್ ಅಕಾಡೆಮಿ ಆಫ್ ಪೆಡಿಯಾಟ್ರಿಕ್ಸ್ ಸುರಕ್ಷಿತವಾದ ಇಂಜೆಕ್ಷನ್ ನೀಡುವಿಕೆ ಪದ್ಧತಿ ಪ್ರಚಾರ ಮಾಡಲು ಸೇಫ್ ಇಂಜೆಕ್ಷನ್ ಎನ್ವಿರಾನ್‌ಮೆಂಟ್ ಅನ್ನು ರಾಷ್ಟ್ರವ್ಯಾಪಿಯಾಗಿ ಪರಿಚಯಿಸಲು ನಿರ್ಧರಿಸಿದೆ. ಈ ಆಂದೋಲನದ ಮೂಲಕ 500ಕ್ಕೂ ಹೆಚ್ಚು ವೈದ್ಯರು ಮತ್ತು ಮಕ್ಕಳ ರೋಗ ತಜ್ಞರಿಗೆ ತರಬೇತಿ ನೀಡಲಾಗುತ್ತಿದೆ. ಅಸುರಕ್ಷಿತ ಇಂಜೆಕ್ಷನ್‌ನಿಂದ ಬರುವ ಸೋಂಕುಗಳಿಂದ ಮಕ್ಕಳನ್ನು ರಕ್ಷಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.
ಔಷಧ ನೀಡಲು ಇಂಜೆಕ್ಷನ್ ಅತ್ಯಂತ ಸಾಮಾನ್ಯವಾಗಿ ಉಪಯೋಗಿಸಲಾಗುತ್ತಿರುವ ವಿಧಾನವಾಗಿದ್ದು, ವಾರ್ಷಿಕ ಸುಮಾರು 16 ಬಿಲಿಯನ್‌ಗೂ ಹೆಚ್ಚು ಇಂಜೆಕ್ಷನ್‌ಗಳನ್ನು ನೀಡಲಾಗುತ್ತಿದೆ. ರೋಗ ನಿರೋಧಕ ಚುಚ್ಚುಮದ್ದುಗಳ ಮೂಲಕ ಮೊದಲ ಕೆಲವು ತಿಂಗಳುಗಳಿಂದಲೇ ಮಗುವಿಗೆ ಚುಚ್ಚುಮದ್ದು ನೀಡುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಈ ಪೈಕಿ ರೋಗನಿರೋಧಕ ಚುಚ್ಚುಮದ್ದು ಶೇ.5ರಷ್ಟು ಮಾತ್ರವೇ ಆಗಿದೆ. ಶೇ.95ರಷ್ಟು ಇಂಜೆಕ್ಷನ್‌ಗಳನ್ನು ಚಿಕಿತ್ಸಾತ್ಮಕ ರೀತಿಯಲ್ಲಿ ನೀಡಲಾಗುತ್ತದೆ. ಎಸ್‌ಐಇ ಪ್ರಚಾರ ಆಂದೋಲನ ಮಹತ್ವದ ಬಗ್ಗೆ ಮಾತನಾಡಿದ ಎಕಾಡೆಮಿ ಆಫ್ ಪೆಡಿಯಾಟ್ರಿಕ್ಸ್‌ನ ಪ್ರಧಾನ ಕಾರ್ಯದರ್ಶಿ ಡಾ. ಶೈಲೇಶ್ ಗುಪ್ತಾ, ಇಂಜೆಕ್ಷನ್ ನೀಡುವ ಪದ್ದತಿಗಳ ಕುರಿತಂತೆ 2004 ಐಃಈಔಊಃ ಅಧ್ಯಯನದನ್ವಯ, ಭಾರತದಲ್ಲಿ ನೀಡಲಾಗಿರುವ ಎಲ್ಲಾ ಇಂಜೆಕ್ಷನ್‌ಗಳಲ್ಲಿ ಶೇ.63ರಷ್ಟು ಅಸುರಕ್ಷಿತ. ಹೆಪಟೈಟಿಸ್ ಸೇರಿದಂತೆ ಅನೇಕ ಕಾಯಿಲೆಗಳು ಹರಡುವುದಕ್ಕೆ ಅಸುರಕ್ಷಿತ ಇಂಜೆಕ್ಷನ್ ಪದ್ಧತಿಗಳೇ ಮುಖ್ಯ ಕಾರಣವಾಗಿದೆ. ಹಾಗಾಗಿ, ಸುರಕ್ಷಿತ ಇಂಜೆಕ್ಷನ್ ಪದ್ಧತಿಗಳ ಕುರಿತಂತೆ ಭಾರತೀಯ ಆರೋಗ್ಯಸೇವೆ ಪೂರೈಕೆದಾರರಿಗೆ ತರಬೇತಿ ನೀಡಬೇಕಾದ ತುರ್ತು ಅಗತ್ಯವಿದೆ ಎಂದರು.
ಗೀತಾಂಜಲಿ ಜ್ಯುವೆಲ್ಸ್‌ನ ಎರಡು ಮಳಿಗೆ ಆರಂಭ
ಗೀತಾಂಜಲಿ ಸಮೂಹದ ರಿಟೇಲ್ ಭಾಗವಾಗಿರುವ ಗೀತಾಂಜಲಿ ಜ್ಯುವೆಲ್ಸ್ ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ಆರಂಭಿಸಿದೆ. ಅಸ್ಮಿ, ನಕ್ಷತ್ರ, ಡಿಡ್ಯಾಮಸ್, ಗಿಲ್ಲಿ, ದಿಯಾ, ಪರಿಣತಾ, ಸಂಗಿನಿ, ನಿಜಾಮ್, ಅನನ್ಯ ಮತ್ತು ಗೀತಾಂಜಲಿ ಗೋಲ್ಡ್ ಎಂಬ ಬ್ರಾಂಡ್‌ಗಳನ್ನು ಈ ಮಳಿಗೆಗಳು ಒಳಗೊಂಡಿದೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಆರು ಮಳಿಗೆಗಳು ಸೇರಿದಂತೆ ದೇಶದಲ್ಲಿ 97 ಮಳಿಗೆಗಳನ್ನು ಹೊಂದಿದಂತಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಕಾರ್ತಿಕೇಯನ್ ವಿಷ್ಣು ವಿ-ರಿಟೇಲ್ ಗೀತಾಂಜಲಿ ಜ್ಯುವೆಲ್ಸ್‌ಅನ್ನು ಉದ್ಘಾಟಿಸಿದರು. ನಟಿ ರಾಗಿಣಿ ದ್ವಿವೇದಿ ಮಾತನಾಡಿ, ಗೀತಾಂಜಲಿ ಜ್ಯುವೆಲ್ಸ್‌ನ ಪ್ರತಿಯೊಂದು ಆಭರಣವೂ ಮಹಿಳೆಯರಿಗೆ ಅಚ್ಚುಮೆಚ್ಚಿನದ್ದಾಗಿದೆ. ಅಲ್ಲದೇ, ಅತ್ಯಾಕರ್ಷವಾಗಿದ್ದು, ಮನಮೋಹಕ ಆಭರಣಗಳು ಇದಾಗಿದೆ ಎಂದರು.
ಎಸ್‌ಕೆಎಸ್ ಮೈಕ್ರೋಫೈನಾನ್ಸ್‌ಗೆ 2.7 ಕೋಟಿ ಲಾಭ
ಎಸ್‌ಕೆಎಸ್ ಮೈಕ್ರೋಫೈನಾನ್ಸ್ ಲಿಮಿಟೆಡ್ ತನ್ನ ವಹಿವಾಟು ಉತ್ತಮ ಪಡಿಸಿಕೊಂಡಿದ್ದು, 2012-2013ನೇ ಹಣಕಾಸು ವರ್ಷ ನಾಲ್ಕನೇ ತ್ರೈಮಾಸಿಕದಲ್ಲಿ ಅತ್ಯಧಿಕ ಅಂದರೆ 2.7 ಕೋಟಿ ಲಾಭ ಪಡೆದಿದೆ. ಕಳೆದ ಹಣಕಾಸು ವರ್ಷದಲ್ಲಿ ಲಾಭದ ಪ್ರಮಾಣ 1.2 ಕೋಟಿ ಇತ್ತು. ಆಂಧ್ರಪ್ರದೇಶದಲ್ಲಿ ಎದುರಾದ ಬಿಕ್ಕಟ್ಟುಗಳ ಪರಿಣಾಮ, ಹಿಂದಿನ ಸತತ ಏಳು ತ್ರೈಮಾಸಿಕಗಳಲ್ಲಿ ಕಂಪನಿ ನಷ್ಟದಲ್ಲಿಯೇ ಇತ್ತು. ಕಳೆದ ವರ್ಷದ 4ನೇ ತ್ರೈಮಾಸಿಕದಲ್ಲಿ ಕಂಪನಿ 330 ಕೋಟಿ ನಷ್ಟ ಅನುಭವಿಸಿತ್ತು.
ಎಸ್‌ಕೆಎಸ್ ಮೈಕ್ರೋಫೈನಾನ್ಸ್ ಲಿಮಿಟೆಡ್ ತನ್ನ ಲಾಭಾಂಶ ಉತ್ತಮಪಡಿಸಿಕೊಳ್ಳಲು ಆಂಧ್ರಪ್ರದೇಶ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಆಸ್ತಿ ಮೌಲ್ಯವು ಹೆಚ್ಚಾಗಿದ್ದು ಕಾರಣ. ಸಂಸ್ಥೆ ಶೇ.15ರಷ್ಟು ಪ್ರಗತಿ ಸಾಧಿಸಿದ್ದು, 2013ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ 90 ಕೋಟಿ, 3ನೇ ತ್ರೈಮಾಸಿಕದಲ್ಲಿ 78 ಕೋಟಿ ಲಾಭ ಗಳಿಸಿದೆ. ಕಂಪನಿಯು ಸಾಲ ವಿತರಣೆ ಪ್ರಮಾಣ ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 65ರಷ್ಟು ಏರಿಕೆ ಕಂಡಿದ್ದು, 1,295 ಕೋಟಿಗೆ ಏರಿದೆ. ಈ ಮೊತ್ತ 3ನೇ ತ್ರೈಮಾಸಿಕದಲ್ಲಿ 784 ಕೋಟಿ ಇತ್ತು. ಇನ್‌ಕ್ರಿಮೆಂಟಲ್ ಡ್ರಾ ಪ್ರಮಾಣ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.201 ಕಡಿಮೆ ಆಗಿದ್ದು, 1,704 ಕೋಟಿ ಆಗಿದ್ದರೆ, 3ನೇ ತ್ರೈಮಾಸಿಕದಲ್ಲಿ 566 ಕೋಟಿ ಇತ್ತು. 2013ನೇ ಹಣಕಾಸು ವರ್ಷದಲ್ಲಿ ಒಟ್ಟು ಮೊತ್ತ 2,875 ಕೋಟಿ ಇದ್ದರೆ, 2012ನೇ ಹಣಕಾಸು ವರ್ಷದಲ್ಲಿ 1,484 ಕೋಟಿ ಆಗಿತ್ತು.
ಕಂಪೆನಿಯ ಎರವಲು ವೆಚ್ಚ ಗಣನೀಯವಾಗಿ ಕಡಿಮೆಯಾಗಿದ್ದು, ಇದು 3ನೇ ತ್ರೈಮಾಸಿಕದಲ್ಲಿ ಶೇ. 13.2ರಷ್ಟು ಇದ್ದರೆ, 4ನೇ ತ್ರೈಮಾಸಿಕದಲ್ಲಿ ಶೇ. 12 ಆಗಿದೆ. ಆಂಧ್ರಪ್ರದೇಶ ಹೊರತುಪಡಿಸಿ 16 ರಾಜ್ಯಗಳಲ್ಲಿ ವಸೂಲಾತಿ ಪ್ರಮಾಣ ಉತ್ತಮಗೊಂಡಿದ್ದು, 4ನೇ ತ್ರೈಮಾಸಿಕದಲ್ಲಿ ಶೇ. 99.9 ಆಗಿದೆ ಎಂದು ಎಸ್‌ಕೆಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿ ಎಸ್. ದಿಲ್ಲಿ ರಾಜ್ ಹೇಳಿದ್ದಾರೆ.