ಭಾರತದ ರೀಟೇಲ್ ಕ್ಷೇತ್ರದ ಸಂಸ್ಥೆಗಳಲ್ಲಿ ಒಂದಾಗಿರುವ ಹೈಪರ್‌ಸಿಟಿ, ಬೆಂಗಳೂರಿನಲ್ಲಿ ತನ್ನ 3ನೇ ಸ್ಟೋರ್ ಅನಾವರಣಗೊಳಿಸಿದೆ. ಈ ನೂತನ ಸ್ಟೋರ್ 30000 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿದ್ದು, ಆಹಾರ ಮತ್ತು ದಿನಸಿ, ಹಣ್ಣು ಮತ್ತು ತರಕಾರಿ, ವೈಯಕ್ತಿಕ ಕಾಳಜಿ, ಬಟ್ಟೆ ಮತ್ತು ಸಣ್ಣ ಉಪಕರಣಗಳ ವಿಭಾಗದಲ್ಲಿ ಅತ್ಯುತ್ತಮ ಶ್ರೇಣಿ ಹೊಂದಿದೆ. ಗ್ರಾಹಕರಿಗೆ ಅತ್ಯುತ್ತಮ ಉತ್ಪನ್ನಗಳು ಮತ್ತು ಕೊಡುಗೆಗಳನ್ನು ಒದಗಿಸುವುದು ಈ ಸ್ಟೋರ್‌ನ ಗುರಿಯಾಗಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಸ್ಥಾಪಿತವಾಗಿರುವ ಈ ಹೊಸ ಸ್ಟೋರ್, ದೇಶದಲ್ಲಿ ಹೇಪರ್‌ಸಿಟಿಯ 13ನೇ ಸ್ಟೋರ್ ಆಗಿದೆ. ಸ್ಟೋರ್‌ನ ಬಿಡುಗಡೆಯನ್ನು ಘೋಷಿಸಿದ ಹೈಪರ್‌ಸಿಟಿ ರೀಟೇಲ್ ಲಿ., ಸಿಇಒ ಮಾರ್ಕ್ ಅಶ್ಮಾನ್ ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿರುವ ಬೆಂಗಳೂರು ನಗರದಲ್ಲಿ ನಮ್ಮ 3ನೇ ಸ್ಟೋರ್ ಆರಂಭಿಸುತ್ತಿರುವುದು ನಮಗೆ ಅತೀವ ಸಂತಸ ನೀಡಿದೆ. ಬೆಂಗಳೂರಿನಲ್ಲಿ ಒಟ್ಟಾರೆ ರೀಟೇಲ್ ವ್ಯವಹಾರದಲ್ಲಿ ನಾವು ಸಂಪೂರ್ಣ ಪ್ರಗತಿ ದಾಖಲಿಸಿದ್ದೇವೆ. ಎಲ್ಲ ಅಗತ್ಯ ಪೂರೈಸುವ ಮತ್ತು ಅಂತಾರಾಷ್ಟ್ರೀಯ ಮಟ್ಟದ ಶಾಪಿಂಗ್ ಅನುಭೂತಿಯನ್ನು ಒಂದೇ ಸೂರಿನಡಿಯಲ್ಲಿ ನೀಡುವ ಹೈಪರ್‌ಮಾರ್ಕೆಟ್ ಪರಿಕಲ್ಪನೆಗೆ ಗ್ರಾಹಕರು ಹೊಂದಿಕೊಂಡಿದ್ದಾರೆ. ಈ ಹೊಸ ಸ್ಟೋರ್ ನಮ್ಮನ್ನು ಗ್ರಾಹಕರಿಗೆ ಮತ್ತಷ್ಟು ಸನಿಹವಾಗಿಸಿದೆ ಎಂದರು.
ಶೇ.80 ಭಾರತೀಯರಲ್ಲಿ ವಿಟಮಿನ್ ಡಿ ಕೊರತೆ
ಬೆಂಗಳೂರು: ಶೇ.80ಕ್ಕೂ ಅಧಿಕ ಆರೋಗ್ಯವಂತ ಭಾರತೀಯರಲ್ಲಿ ವಿಟಮಿನ್ ಡಿ ಕೊರತೆ ಕಂಡುಬಂದಿರುವುದಾಗಿ ಡಯಾಬಿಟಿಸ್ ಫೌಂಡೇಷನ್ ಆಫ್ ಇಂಡಿಯಾ ಸಂಶೋಧನೆ ದೃಢಪಡಿಸಿದೆ.
ವಿಟಮಿನ್ ಡಿ ಕೊರತೆಯು ಜಾಗತಿಕ ಮತ್ತು ರಾಷ್ಟ್ರೀಯವಾಗಿ ಹೆಚ್ಚು ಆತಂಕ ಮೂಡಿಸಲಿರುವ ವಿಷಯವಾಗಿದ್ದು, ಭಾರತೀಯ ಜನಸಂಖ್ಯೆಯ ಶೇ.80ರಷ್ಟು ಮಂದಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜು ಮಾಡಿದೆ. ಆದರೆ, ಜತೆಗೆ ಇದಕ್ಕಿಂತಲೂ ದೊಡ್ಡ ಆತಂಕವೆಂದರೆ ಹೆಚ್ಚಿನವರಿಗೆ ವಿಟಮಿನ್ ಡಿ ಕೊರತೆ ಇರುವುದೇ ಅರಿವಿಗೇ ಬಂದಿಲ್ಲ ಎನ್ನುವುದನ್ನು ತಿಳಿಸಿದೆ.
ಭಾರತದ ಪ್ರಮುಖ ಮಧುಮೇಹ ತಜ್ಞರಾದ ಭಾರತೀಯ ಡಯಾಬಿಟಿಸ್ ಫೌಂಡೇಷನ್ ಸ್ಥಾಪಕ ಡಾ.ಬನ್ಸಿ ಸಬೂ ಅವರು, ಹಿಂದೆ ವಿಟಮಿನ್ ಡಿ ಮೂಳೆಯ ಆರೋಗ್ಯ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಕ್ಯಾಲ್ಸಿಯಂ ನಿರ್ವಹಿಸಲು ಅಗ್ರ ಎಂದು ನಂಬಲಾಗಿತ್ತು. ಆದರೆ, ಕಳೆದ ಒಂದು ದಶಕದಲ್ಲಿ ನಡೆದ ಅಧ್ಯಯನದ ಅನುಸಾರ ಅಸ್ತಮಾ, ಟಿ.ಬಿ., ಅಧಿಕ ರಕ್ತದೊತ್ತಡ, ನರಗಳಿಗೆ ಸಂಬಂಧಿಸಿದ ಸಮಸ್ಯೆಗೂ ಕಾರಣವಾಗಿದೆ ಎಂದು ಹೇಳಿದ್ದಾರೆ.
ಅತ್ಯಾಧುನಿಕ ಸ್ವಿಚ್ ಬಾಕ್ಸ್ ಬಿಡುಗಡೆ
ಸ್ಕವಾ ಎಲೆಕ್ಟ್ರಿಕ್ ಸ್ಕವಾ 'ವೂ' ಎಂಬ ನೂತನ ಶೈಲಿಯ ಅತ್ಯಾಧುನಿಕ ಸ್ವಿಚ್ ಬಾಕ್ಸ್‌ಗಳನ್ನು ಬಿಡುಗಡೆಗೊಳಿಸಿದೆ. ಸ್ಕವಾ ವೂ ಗ್ರಾಹಕರನ್ನ ಆಕರ್ಷಕ ಪ್ಲೇಟ್, ನಾನಾ ಗಾತ್ರ, ವರ್ಣ ವೈವಿಧ್ಯತೆಯಿಂದ ಗಮನ ಸೆಳೆಯುವಂತೆ ರೂಪಿಸಲಾಗಿದೆ. ನೂತನ ಶ್ರೇಣಿಯ ಉತ್ಪನ್ನದ ಬಗ್ಗೆ ಮಾತನಾಡಿದ ಶ್ರೀನಿಕ್ ಕವೆಡಿಯಾ ಕಂಪನಿ ನವೀನ ಉತ್ಪನ್ನ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಇದನ್ನು ಅಭಿವೃದ್ಧಿಪಡಿಸಿದ್ದು ಈ ನಿಟ್ಟಿನಲ್ಲಿ 'ವೂ' ಶ್ರೇಣಿಯು ಗ್ರಾಮೀಣ ಭಾಗದ ಗ್ರಾಹಕರ ಮನಗೆಲ್ಲುವ ವಿಶ್ವಾಸವಿದೆ. ಅತ್ಯುತ್ತಮ ಗುಣಮಟ್ಟ ಮತ್ತು ನಾವಿನ್ಯತೆ ಇದರ ಲಕ್ಷಣವಾಗಿದೆ ಎಂದರು. ಸ್ಕವಾ ಬಾರಿ ಶ್ರೇಣಿಯ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳು ಶೇ.100 ಶಾಕ್‌ಪ್ರೂಫ್ ವಿತರಣೆ ಬಾಕ್ಸ್ ಅನ್ನು ಒಳಗೊಂಡಿದೆ. ಮಿಟದದ ಟ್ರಿಪ್ ಎಂಸಿಬಿ, ಓವಾ ಹೋಲ್ಡರ್ ಮತ್ತು ಎಲ್‌ಇಡಿ ನೈಟ್ ಲ್ಯಾಂಪ್‌ನ್ನು ಒಳಗೊಂಡಿದೆ. ಆಗಸ್ಟ್ 2013ರಲ್ಲಿ ಅತ್ಯಾಧುನಿಕ ಶ್ರೇಣಿಯ ನವೀನ ಉತ್ಪನ್ನ ಬಿಡುಗಡೆಗೊಳಿಸುವ ಉದ್ದೇಶ ಹೊಂದಿದ್ದು, ಕರ್ನಾಟಕದಾದ್ಯಂತ 100ಕ್ಕೂ ಹೆಚ್ಚು ಎಲೆಕ್ಟ್ರಿಕಲ್ ಡೀಲರ್ ಮತ್ತು ವಿತರಕರ ಜಾಲವನ್ನು ಹೊಂದಿದೆ. ಬ್ರ್ಯಾಂಡ್ ಜನಪ್ರಿಯವಾಗಿದ್ದು ಡೀಲರ್‌ಗಳ ಬೆಂಬಲದ ನಿರೀಕ್ಷೆಯಲ್ಲಿದ್ದೇವೆ. ಹೊಸ ಡೀಲರ್‌ಗಳನ್ನು ಸೇರಿಸುವ ಆಲೋಚನೆಯೂ ಇದೆ ಎಂದರು.
ಬ್ಲೂಡಾರ್ಟ್‌ಗೆ 188.66 ಕೋಟಿ ಲಾಭ
ದಕ್ಷಿಣ ಏಶಿಯಾದಲ್ಲಿ ಮೊದಲ ಸ್ಥಾನ ಪಡೆದಿರುವ ಅತಿ ವೇಗದ, ಸಂಯೋಜಿತ, ಸಾಗಣೆ, ವಿತರಣೆ ಮತ್ತು ಪೂರೈಕೆ ವ್ಯವಸ್ಥಾಪನ ಸಂಸ್ಥೆಯಾದ ಬ್ಲೂಡಾರ್ಟ್ ಜ.1 2012ರಿಂದ ಮಾ.31 2013ರವರೆಗಿನ15ತಿಂಗಳ ಕಾಲಾವಧಿಯಲ್ಲಿ, ತೆರಿಗೆಯ ನಂತರ, 188.66 ಕೋಟಿ ಲಾಭ ಗಳಿಸಿರುವುದಾಗಿ ಪ್ರಕಟಿಸಿದೆ. ಕಾರ್ಯಾಚರಣೆ ಆದಾಯವು 15 ತಿಂಗಳಲ್ಲಿ 2,162.06 ಕೋಟಿ ಆಗಿದೆ. ಬ್ಲೂಡಾರ್ಟ್ ಎಕ್ಸ್‌ಪ್ರೆಸ್ ನಿಯಮಿತದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಅನಿಲ್ ಖನ್ನಾ, ಬಹಳ ಕ್ಲಿಷ್ಟಕರವಾದ ಆರ್ಥಿಕ ಪರಿಸ್ಥಿತಿಯಲ್ಲಿದ್ದರೂ ನಾವು ನಮ್ಮ ಗ್ರಾಹಕರಲ್ಲಿ ಬಂಡವಾಳ ತೊಡಗಿಸುವುದನ್ನು ಮುಂದುವರೆಸುತ್ತೇವೆ. ಬ್ಲೂಡಾರ್ಟ್ ಅತ್ಯುತ್ತಮ ಗ್ರಾಹಕ ತೃಪ್ತಿಯನ್ನು ಮತ್ತು ಉದ್ಯಮದಲ್ಲಿಯೇ ಹೂಡಿಕೆದಾರರ ಲಾಭಾಂಶ ಹೊಂದಿದೆ. ಮತ್ತು ಇದು ನಮ್ಮ ಸೇವಾ ಶ್ರೇಷ್ಠತೆ ಮತ್ತು ಗ್ರಾಹಕರ ತೃಪ್ತಿಯ ಸಾಕ್ಷಿಯಾಗಿದೆ ಎಂದರು. ಮಾರ್ಚ್ 31 ರಂದು ಕೊನೆಗೊಂಡ 15 ತಿಂಗಳ ಕಾಲಾವಧಿಯಲ್ಲಿ, ಬ್ಲೂಡಾರ್ಟ್ ಸ್ವದೇಶದಲ್ಲಿ ಮತ್ತು 220 ದೇಶಗಳಲ್ಲಿ 141.7 ದಶಲಕ್ಷ ಟನ್‌ಗಳ ದೇಶೀಯ ಸರಕನ್ನು ಮತ್ತು 1 ದಶಲಕ್ಷ ಟನ್‌ಗಳ ವಿದೇಶೀ ಸರಕನ್ನು ಮತ್ತು 594,900 ಟನ್‌ಗಳ ದಾಖಲೆಗಳು ಮತ್ತು ಭಾಂಗಿಗಳನ್ನು ನಿರ್ವಹಿಸಿದೆ.
ವೊಡಾಫೋನ್ ಇಂಡಿಯಾ ಆದಾಯ ಶೇ.10. ಏರಿಕೆ
ವೊಡಾಫೋನ್ ಇಂಡಿಯಾ ದೂರಸಂಪರ್ಕ ಸೇವಾ ಸಂಸ್ಥೆಯಾಗಿದ್ದು, 2013ನೇ ಆರ್ಥಿಕ ವರ್ಷದ ಫಲಿತಾಂಶವನ್ನು ಘೋಷಿಸಿದೆ. ಸ್ಥಿರವಾದ ಆದಾಯದ ಪ್ರಗತಿ ಕಂಡಿದ್ದು, ಸೇವಾ ಆದಾಯ 356.101 ಮಿಲಿಯನ್. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ದಲ್ಲಿ ಪ್ರಗತಿ ದರ ಶೇ.10.6 ರಷ್ಟು ಏರಿಕೆ ಕಂಡಿದೆ. ಆದಾಯದ ಸಾಧನೆ ಪ್ರಗತಿಯೊಂದಿಗೆ ಇನ್ನಷ್ಟು ಬಲಯುತಗೊಂಡಿದ್ದು, ಡಾಟಾ ಮತ್ತು ಧ್ವನಿ ಆಧಾರಿತ ಆದಾಯದಲ್ಲಿ ಏರಿಕೆಯಾಗಿದೆ. ನಿಯಂತ್ರಣ ನಿಯಮಗಳ ಬದಲಾವಣೆಯೊಂದಿಗೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿದೆ.
ಇಬಿಐಟಿಡಿಎ ಮೊತ್ತ 2013ನೇ ಹಣಕಾಸು ವರ್ಷದಲ್ಲಿ 106.406 ಮಿಲಿಯನ್. 2012ನೇ ಹಣಕಾಸು ವರ್ಷದಲ್ಲಿ 85.493 ಮಿಲಿಯನ್. 3.4 ಪಿಪಿಟಿಯೊಂದಿಗೆ ಅಂಚಿನ ಮೊತ್ತದಲ್ಲಿ ಗಣನೀಯ ಏರಿಕೆ ಶೇ.26.3 ರಿಂದ ಶೇ. 29.7 ರಷ್ಟಿದೆ. ಆರೋಗ್ಯಕರವಾದ ನಿರ್ವಹಣಾ ಉಚಿತ ಹಣಕಾಸು ಹರಿವು ಮೊತ್ತ 62.951 ಮಿಲಿಯನ್, 2012ನೇ ಹಣಕಾಸು ವರ್ಷದಲ್ಲಿ 39.776 ಮಿಲಿಯನ್. ಪ್ರಗತಿ ಪ್ರಮಾಣ ಶೇ.58.3ರಷ್ಟು ಏರಿಕೆ ಕಂಡಿದೆ. ಕ್ಯಾಪೆಕ್ಸ್‌ನಿಂದ ಭವಿಷ್ಯದ ಪ್ರಗತಿಗಾಗಿ 3ಜಿ ಮತ್ತು ಡಾಟಾ ಸೇರಿದಂತೆ 2013ನೇ ಹಣಕಾಸು ವರ್ಷದಲ್ಲಿ ಒಟ್ಟು 47.301 ಮಿಲಿಯನ್ ವ್ಯಯ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಈ ಕುರಿತು ಪ್ರತಿಕ್ರಯಿಸಿದ ವೊಡಾಫೋನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಾರ್ಟೆನ್ ಪೀಟರ್ಸ್ ಅವರು ಹೊಸದಾದ ಸ್ವಾಧೀನ ಮತ್ತು ಶುಲ್ಕ ನಿಯಂತ್ರಣ ಕ್ರಮಗಳಿಂದಾಗಿ ಉದ್ಯಮದ ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ ಮೂಡಿತು. ಆದರೂ, ಗ್ರಾಹಕರ ಏರಿಕೆ ಮತ್ತು ಬಳಕೆಯ ಪ್ರಮಾಣ ಏರಿರುವುದು ಉತ್ತಮ ಸ್ಥಿತಿ ತಲುಪುಲು ಕಾರಣವಾಗಿದೆ ಎಂದರು.
'ವಿಜ್ಞಾನದಲ್ಲಿ ಯುವತಿಯರು' ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ
ಲೋರಿಯಲ್‌ನ ಜಗತ್ತಿಗೆ ವಿಜ್ಞಾನ ಅಗತ್ಯ ಮತ್ತು ವಿಜ್ಞಾನಕ್ಕೆ ಮಹಿಳೆಯರು ಅಗತ್ಯ ಎಂಬ ನಂಬಿಕೆಗೆ ಅನುಸಾರವಾಗಿ ಲೋರಿಯಲ್ ಇಂಡಿಯಾ, ದೆಹಲಿ, ಎನ್‌ಸಿಆರ್, ಮಹಾರಾಷ್ಟ್ರ ಮತ್ತು ಕರ್ನಾಟಕದ 7ನೇ ತರಗತಿಯ ವಿದ್ಯಾರ್ಥಿಗಳನ್ನು ವಿಜ್ಞಾನದಲ್ಲಿ ಯುವತಿಯರು ಎಂಬ ಸ್ಕಾಲರ್‌ಶಿಪ್ ಕಾರ್ಯಕ್ರಮದ 11ನೇ ಆವೃತ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ಲೊರಿಯಲ್ ಇಂಡಿಯಾ ತಲಾ 2.5ಲಕ್ಷದ ಸ್ಕಾಲರ್‌ಶಿಪ್‌ಗಳ ಕೊಡುಗೆಯನ್ನು 30 ಯುವತಿಯರಿಗೆ ನೀಡಲಿದೆ. ಭಾರತದಲ್ಲಿನ ಗುರುತಿಸಲಾದ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ವಿಜ್ಞಾನದ ಕ್ಷೇತ್ರದಲ್ಲಿ ನಡೆಸುವ ಅಧ್ಯಯನಕ್ಕಾಗಿ ಈ ಸ್ಕಾಲರ್‌ಶಿಪ್‌ನ್ನು ನೀಡಲಿದೆ. ಈ ಕುರಿತು ಪ್ರತಿಕ್ರಯಿಸಿರುವ ಲೋರಿಯಲ್ ಇಂಡಿಯಾದ ಚೀಫ್ ಆಪರೇಟಿಂಗ್ ಆಫೀಸರ್ ಆಗಿರುವ ದಿನೇಶ್ ದಯಾಳ್, “'ವಿಜ್ಞಾನದ ಕ್ಷೇತ್ರದಲ್ಲಿ ವೃತ್ತಿಜೀವನಗಳನ್ನು ಹೊಂದುವ ಮಹಿಳೆಯರ ಸಂಖ್ಯೆ ಇನ್ನೂ ತುಂಬ ಕಡಿಮೆಯಿದೆ. ಲೋರಿಯಲ್ ಮಹಿಳೆಯರನ್ನು ವಿಜ್ಞಾನದಲ್ಲಿ ಮುಂದುವರಿಯಲು ಅರ್ಹ ಮಹಿಳಾ ಅಭ್ಯರ್ಥಿಗಳನ್ನು ಸಬಲಗೊಳಿಸುವ ಹಾಗೂ ಈ ಅಗತ್ಯವನ್ನು ಒಪ್ಪುವ ಮೂಲಕ ಬದಲಾವಣೆಯನ್ನು ತರುವ ನಮ್ಮ ಸಣ್ಣ ಪ್ರಯತ್ನವಾಗಿದೆ. 11ನೇ ವರ್ಷವನ್ನು ಪ್ರವೇಶಿಸುತ್ತಿರುವ ಹಾಗೂ ಇನ್ನೂ ಬಲಿಷ್ಠವಾಗಿರುವ ವಿಜ್ಞಾನದಲ್ಲಿ ಯುವತಿಯರು ಎಂಬ ಕಾರ್ಯಕ್ರಮವು ಅರ್ಹ ಅಭ್ಯರ್ಥಿಗಳನ್ನು ಗುರುತಿಸುವಲ್ಲಿ ಮತ್ತು ಒಪ್ಪಿಕೊಳ್ಳುವಲ್ಲಿ ಮಹಾನ್ ಉಪಕ್ರಮವೆನಿಸಿದೆ. ಇದು ನಮಗೆ ವಿಜ್ಞಾನದ ಮುಂದಿನ ತಲೆಮಾರಿನ ನಾಯಕರ ಜೊತೆಗೂಡುವಲ್ಲಿ ಅತ್ಯಂತ ಆನಂದವನ್ನು ತರುತ್ತದೆ ಎಂದರು.