ವಾಣಿಜ್ಯ

ಕೆನರಾ ಬ್ಯಾಂಕ್ ಗೆ 626 ಕೋಟಿ ಲಾಭ

ಪ್ರತಿಷ್ಠಿತ ಕೆನರಾ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ 626 ಕೋಟಿ ಲಾಭಗಳಿಸಿದೆ.

ಕ.ಪ್ರ.ವಾರ್ತೆ,  ಬೆಂಗಳೂರು,  ನ.12-
ಪ್ರತಿಷ್ಠಿತ ಕೆನರಾ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ 626 ಕೋಟಿ ಲಾಭಗಳಿಸಿದೆ.
ಬ್ಯಾಂಕ್ನ ಕಾರ್ಯಾಚಾರಣೆ ಲಾಭವು 1425 ಕೋಟಿಗೆ ಏರಿದೆ. ಒಟ್ಟಾರೆ ನಿವ್ವಳ ಲಾಭ ಹಾಗೂ ಕಾರ್ಯಾಚರಣೆ ಲಾಭದಲ್ಲಿ ಶೇ.11ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಆರ್.ಕೆ. ದುಬೆ ಹೇಳಿದರು.
ಬ್ಯಾಂಕ್ನ ಒಟ್ಟಾರೆ ವಹಿವಾಟು 6.73 ಲಕ್ಷ ಕೋಟಿ ಏರಿದೆ. ಮುಂದಿನ ಆರ್ಥಿಕ ವರ್ಷದೊಳಗೆ 7 ಲಕ್ಷ ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.22ರಷ್ಟು ವೃದ್ಧಿಯಾಗಿರುವುದರಿಂದ  ಈ ಗುರಿಯನ್ನು ಮುಟ್ಟುವ ವಿಶ್ವಾಸವಿದೆ ಎಂದು ಅವರು ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬ್ಯಾಂಕ್ನ ಒಟ್ಟು ಠೇವಣಿ 3.92 ಲಕ್ಷ ಕೋಟಿಗೆ ಏರಿದೆ. ಬ್ಯಾಂಕ್ನಿಂದ ನೀಡಿರುವ ಸಾಲ ಪ್ರಮಾಣದಲ್ಲಿಯೂ ಶೇ.30ರಷ್ಟು ಹೆಚ್ಚಾಗಿದ್ದು, 2.81 ಲಕ್ಷ ಕೋಟಿಗೆ ವೃದ್ಧಿಯಾಗಿದೆ. ಇದಲ್ಲದೇ ಬ್ಯಾಂಕ್ನ ಬಡ್ಡಿಯೇತರ ಆದಾಯದಲ್ಲಿ ಶೇ.27ರಷ್ಟು ಏರಿಕೆಯಾಗಿ 771 ಕೋಟಿ ಸಂಗ್ರಹವಾಗಿದೆ ಎಂದು ಅವರು ಹೇಳಿದರು.
ಬ್ಯಾಂಕ್ನ ಉಳಿತಾಯ ಠೇವಣಿಯು ಸಪ್ಟೆಂಬರ್ ಅಂತ್ಯಕ್ಕೆ 80,070 ಕೋಟಿ ತಲುಪಿದೆ. ಪ್ರತಿ ಉದ್ಯೋಗಿಯ ತಲಾ ವ್ಯವಹಾರ 14.28 ಕೋಟಿ ಹಾಗೂ ಪ್ರತಿ ಶಾಖೆಯ ವ್ಯವಹಾರ 159 ಕೋಟಿಯಾಗಿದೆ. ಇದಲ್ಲದೇ ಬ್ಯಾಂಕ್ ಒಟ್ಟು ಗ್ರಾಹಕರು 5.16 ಕೋಟಿಯಾಗಿದ್ದು, 73 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಪ್ರಸಕ್ತ ಆರ್ಥಿಕ ವರ್ಷದ ಈ ತ್ರೈಮಾಸಿಕಕ್ಕೆ ಬ್ಯಾಂಕ್ನ ಒಟ್ಟು ಆದಾಯ 10,427 ಕೋಟಿಯಾಗಿದೆ. ಸಾಲದ ಮೂಲಕ 6964 ಕೋಟಿ ಆದಾಯ ಬಂದಿದೆ. ಬ್ಯಾಂಕ್ನ ಒಟ್ಟಾರೆ ವೆಚ್ಚ 9003 ಕೋಟಿಯಷ್ಟಿದೆ ಎಂದು ದುಬೆ ಹೇಳಿದರು.
ಹೊಸ ನಿಯಮಾವಳಿ ಮೂಲಕ ಬಂಡವಾಳ ಪರ್ಯಾಪ್ತತೆಯ ಅನುಪಾತ ಶೇ.10.62ರಷ್ಟಿದೆ. ಮೋದಲನೇ ಸ್ಥರದ ಬಂಡವಾಳ ಅನುಪಾತ ಶೇ.8.52ರಷ್ಟಿದೆ. ಆದರೆ ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಇದು ಕ್ರಮವಾಗಿ ಶೇ.9 ಹಾಗೂ ಶೇ.6.5ಕ್ಕಿಂತ ಹೆಚ್ಚಿರಬೇಕೆಂದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆದ್ಯತಾ ಕ್ಷೇತ್ರಗಳಾದ ಕೃಷಿ, ಸಣ್ಣ ಕೈಗಾರಿಕೆಗೆ ಶೇ.30ಕ್ಕೂ ಅಧಿಕ ಪ್ರಮಾಣದಲ್ಲಿ ಹೆಚ್ಚುವರಿ ಸಾಲ ನೀಡಲಾಗಿದೆ. ಗೃಹ, ವಾಹನ ಹಾಗೂ ವೈಯಕ್ತಿಕ ಸಾಲದಲ್ಲಿ ಶೇ.40ಕ್ಕೂ ಅಧಿಕ ಪ್ರಮಾಣದ ಸಾಧನೆ ಮಾಡಲಾಗಿದೆ ಎಂದು ಆರ್.ಕೆ. ದುಬೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಂದಿನ ಒಂದೂವರೆ ಆರ್ಥಿಕ ವರ್ಷದೊಳಗೆ ಬ್ಯಾಂಕ್ನ ಶಾಖೆಯನ್ನು 5500 ಹಾಗೂ ಎಟಿಎಂ ಕೇಂದ್ರವನ್ನು 10 ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದರಲ್ಲಿ 14 ಸಾಗರೋತ್ತರ ಶಾಖೆಗಳು ಸೇರಿವೆ. ಪ್ರಸ್ತುತ 4126 ಶಾಖೆ ಹಾಗೂ 4005 ಎಂಟಿಎಂ ಕೇಂದ್ರಗಳನ್ನು ಬ್ಯಾಂಕ್ ಹೊಂದಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!