ವಾಣಿಜ್ಯ

ಹೆರಿಗೆ ವಿಮೆಯ ಮಹಿಮೆ

ಹೆರಿಗೆ ಎಂಬುದು ಮಹಿಳೆಯರ ಬದುಕಿನ ಅತ್ಯಮೂಲ್ಯ ಘಳಿಗೆ. ಇಂದು...

ಹೆರಿಗೆ ಎಂಬುದು ಮಹಿಳೆಯರ ಬದುಕಿನ ಅತ್ಯಮೂಲ್ಯ ಘಳಿಗೆ. ಇಂದು ವೈದ್ಯಕೀಯ ವೆಚ್ಚಗಲು ತುಂಬಾ ದುಬಾರಿಯಾಗಿವೆ. ಈ ಸಂದರ್ಭದಲ್ಲಿ ಹೆರಿಗೆಗೂ ಮುನ್ನ ಪ್ರತಿ ಮಹಿಳೆಯರು ಪೂರ್ವಸಿದ್ಧತೆ ಕೈಗೊಳ್ಳುವಂತೆ, ವೈದ್ಯಕೀಯ ಖರ್ಚುವೆಚ್ಚಗಳ ಯೋಜನೆಯನ್ನು ರೂಪಿಸಿಕೊಳ್ಳುವ ಅಗತ್ಯವಿದೆ.

ಕೆಲವು ರ್ಷಗಲಿಂದೀಚೆಗೆ ಬೆಳದ ಹೆರಿಗೆ ವಿಮೆ ಪರಿಕಲ್ಪನೆಯು ಭಾರತದಲ್ಲಿ ಈಗಷ್ಟೇ ಈ ವಿಮೆ ಸೌಲಭ್ಯವೂ ಪ್ರಚಾರಕ್ಕೆ ಬರುತ್ತಿದೆ. ಹೆರಿಗೆ ವಿಮೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಪ್ರಮುಖವಾಗಿ ಮಿತಿ, ಜನಸಂಖ್ಯೆ ಗುರಿ, ಎಷ್ಟು ಹೆರಿಗೆಗೆ(1 ಅಥವಾ 2 ಮಾತ್ರ) ವಿಮೆ, ಕಾಲಾವಧಿ, ಹಿಂದಿನ ಹೆರಿಗೆಯಲ್ಲಾದ ತೊಂದರೆಗಳು, ಹೆಚ್ಚು ಪ್ರೀಮಿಯಂ ಕಟ್ಟಿದರೆ ಆಗುವ ಲಾಭಗಳು.

ಹೆರಿಗೆ ವಿಮೆಯು ಗರ್ಭಧಾರಣೆ ವೇಳೆ ಮಹಿಳೆಗೆ ಎದುರಾಗುವ ಅನಿರೀಕ್ಷಿತ ತೊಂದರೆ ಸಂದರ್ಭದಲ್ಲಿ ಆರ್ಥಿಕ ಸುರಕ್ಷತೆ ಒದಗಿಸುತ್ತದೆ. ಗರ್ಭಧಾರಣೆಗೆ ಮೊದಲು ಈ ವಿಮೆಯನ್ನು ಪಡೆಯಬೇಕಾಗುತ್ತದೆ. ಗರ್ಭಧಾರಣೆ ನಂತರವಾದರೆ ಕಾಯುವ ಅವಧಿಯನ್ನು ಪರಿಶೀಲಸಬೇಕಾಗುತ್ತದೆ.

ಹೆರಿಗೆ ವಿಮೆ ಪಡೆಯುವ ಮುನ್ನ ನಿಮ್ಮ ಸಾಮೂಹಿಕ ವಿಮೆ ಮತ್ತು ಆರೋಗ್ಯ ವಿಮೆ ಪಡೆದಿದ್ದರೆ ಅದರಲ್ಲಿ ಹೆರಿಗೆ ವಿಮೆ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ. ಕೆಲವೊಂದು ಕಂಪನಿಗಳು ಉದ್ಯೋಗಿಗಳಿಗೆ ನೀಡುವ ಸಾಮೂಹಿಕ ವಿಮೆಯಲ್ಲಿ ಮೊದಲ ಮಗುವಿಗೆ ಹೆರಿಗೆ ವಿಮೆ, ನವಜಾತ ಶಿಶುವಿನ ರಕ್ಷಣೆ ಸೌಲಭ್ಯವನ್ನು ಒದಗಿಸಿರುತ್ತದೆ.

ಹೆರಿಗೆ ವಿಮೆ ಪಡೆಯಬೇಕಾದ ವಿಮಾದಾರ 10ರಿಂದ 48 ತಿಂಗಳು ಕಾಯಬೇಕಾಗುತ್ತದೆ. ಕಂಪನಿಗಳು ನೀಡುವ ಸಾಮೂಹಿಕ ವಿಮೆಯಲ್ಲಿ ಕಾಯುವ ಅವಧಿ 9 ತಿಂಗಳದ್ದಾಗಿರುತ್ತದೆ. ಸಾಮಾನ್ಯ ಮತ್ತು ಸಿಸರೀನ್ ಹೆರಿಗೆಗೆ 20,000ದಿಂದ 1.5 ಲಕ್ಷ ರು.ವರೆಗೆ ವಿಮೆ ಪರಿಹಾರ ಪಡೆಯಲು ಅವಕಾಶವಿದೆ. ಪ್ರಮುಖ ವಿಚಾರವೆಂದರೆ ಇದರಲ್ಲಿ ಎರಡು ಮಗುವಿನ ಹೆರಿಗೆಗೆ ಮಾತ್ರ ವಿಮೆ ಸೌಲಭ್ಯವನ್ನು ಒದಿಗಿಸಲಾಗುತ್ತದೆ.

ಹೆರಿಗೆ ವಿಮೆಯು ಗರ್ಭಧಾರಣೆ ವೇಳೆ ಎದುರಾಗುವ ಅನಿರೀಕ್ಷಿತ ತೊಂದರೆಗಳಿಂದ ತಾಯಿ-ಮಗುವಿನ ಸುರಕ್ಷತೆಗೆ ಆರ್ಥಿಕ ನೆರವಿನ ಭರವಸೆಯನ್ನು ನೀಡುತ್ತದೆ ಎನ್ನುತ್ತಾರೆ ಡಾ.ಎಸ್ ಪ್ರಕಾಶ್(ಎಫ್‌ಆರ್‌ಸಿಎಸ್ (ಗ್ಲಾಸ್ಗ್), ಎಫ್‌ಎಐಎಸ್, ಎಕ್ಸಿಕ್ಯೂಟಿವ್ ಡೈರೆಕ್ಟರ್, ಸ್ಟಾರ್ ಹೆಲ್ತ್ ಆ್ಯಂಡ್ ಎಲೈಡ್ ಇನ್ಸ್‌ರೆನ್ಸ್ ಕೋ- ಅಪರೇಟಿವ್ ಲಿಮಿಟೆಡ್).

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT