ವಾಣಿಜ್ಯ

ಫೈನ್ ಫೈನಾನ್ಸ್!

ವೈಯಕ್ತಿಕ ಹಣಕಾಸು ನಿರ್ವಹಣೆ ಬೇಕೇ ಬೇಕು ಎನ್ನುವುದು ಹಣಕಾಸು ತಜ್ಞರ ಅಭಿಪ್ರಾಯ. ಪರ್ಸನಲ್ ಫೈನಾನ್ಸ್ ಮ್ಯಾನೇಜ್‌ಮೆಂಟ್ ಏಕೆ ಬೇಕು ಮತ್ತು ಅದರಲ್ಲಿ ವಹಿಸಬೇಕಾದ ಎಚ್ಚರಿಕೆಗಳೇನು? ಈ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳೇನು?

ಆದಾಯ ಏನೇ ಇರಲಿ, ಖರ್ಚು ಎಷ್ಟೇ ಇರಲಿ..., ಸಾಕಷ್ಟು ಉಳಿತಾಯ ಇರಲಿ, ಇಲ್ಲದಿರಲಿ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹಣಕಾಸು ಸ್ಥಿತಿಗತಿಯ ಬಗ್ಗೆ ಸದಾ ನಿಗಾ ವಹಿಸುತ್ತಾನೆ. ನಾಳೆಯ ಪರಿಸ್ಥಿತಿ ಏನು, ಹತ್ತು ವರ್ಷಗಳ ಬಳಿಕ ತನ್ನ ಮತ್ತು ಕುಟುಂಬವನ್ನು ಆಪತ್ತಿನಿಂದ ಕಾಪಾಡಿಕೊಳ್ಳಲು ಯಾವ ರೀತಿಯ ವ್ಯವಸ್ಥೆಗಳು ಇವೆ ಎಂದು ಹಣಕಾಸಿನ ವಿಚಾರದಲ್ಲಿ ದೂರದೃಷ್ಟಿಯುಳ್ಳ ವ್ಯಕ್ತಿಯೊಬ್ಬ ಗಂಭೀರವಾಗಿಯೇ ಆಲೋಚಿಸುತ್ತಾನೆ.
ಈ ಆಲೋಚನೆ ಹತ್ತು ಹಲವು ಕಾರಣಗಳನ್ನು ಹುಡುಕಬಹುದು. ಇದ್ದ ಆದಾಯವನ್ನು ಜೀವನ ನಿರ್ವಹಣೆಯ ಎಲ್ಲ ವಿಭಾಗಗಳಿಗೆ ಹಂಚಿಕೆ ಮಾಡಿಕೊಂಡು, ತೆರಿಗೆ ಪಾವತಿ ಮಾಡುವುದಿದ್ದರೆ ಅದನ್ನೂ ಪಾವತಿ ಮಾಡಿಕೊಂಡು ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸುವ ಈ ಸರ್ಕಸ್‌ನ ನಿರ್ವಹಣೆಯನ್ನು ವೈಯಕ್ತಿಕ ಹಣಕಾಸಿನ ನಿಭಾಯಿಸುವಿಕೆ (ಪರ್ಸನಲ್ ಫೈನಾನ್ಸ್ ಮ್ಯಾನೇಜ್‌ಮೆಂಟ್) ಎಂದು ವಿಶ್ಲೇಷಿಸಲಾಗುತ್ತದೆ.
ಆಧುನಿಕ ಅರ್ಥಶಾಸ್ತ್ರದಲ್ಲಿ  ಮತ್ತು ಹಣ ನಿರ್ವಹಣೆ (ಫೈನಾನ್ಸ್ ಮ್ಯಾನೇಜ್‌ಮೆಂಟ್) ಕೋರ್ಸ್‌ನಲ್ಲಿ ಅದನ್ನು ಕಾರ್ಪೊರೇಟ್ ಫೈನಾನ್ಸ್ ತತ್ವಗಳನ್ನು ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ಅಳವಡಿಸುವ ಕಲೆಯಾಗಿದೆ.

ಆರಂಭದಲ್ಲಿ ಹೇಗಿತ್ತು?
1980ರ ದಶಕದವರೆಗೆ ವೈಯಕ್ತಿಕ ಹಣಕಾಸಿನ ಕ್ಷೇತ್ರದಲ್ಲಿ ಸದ್ಯದ ದಿನಮಾನದಲ್ಲಿ ಇರುವಷ್ಟು ವೃತ್ತಿಪರತೆ, ಆಳ ಹೊಂದಿರಲಿಲ್ಲ. ಕ್ಲಿಷ್ಟಕರವಾದ ಸಂದರ್ಭಗಳಲ್ಲಿ ಮಾತ್ರ ಲೆಕ್ಕಪತ್ರ ಪರಿಶೋಧಕರನ್ನು ಸಂಪರ್ಕಿಸುತ್ತಿದ್ದರು. ಉಳಿದಂತೆ ಎಲ್ಲ ಸ್ಥಳೀಯವಾಗಿಯೇ ಉಳಿತಾಯ, ಲೆಕ್ಕಾಚಾರ, ಲೇವಾದೇವಿ ನಡೆಯುತ್ತಿತ್ತು. ಆದರೂ, ಅಂಚೆ ಕಚೇರಿ, ಬ್ಯಾಂಕ್‌ಗಳಲ್ಲಿ ಠೇವಣಿ, ವಿಮಾ ಪಾಲಿಸಿ ಮತ್ತು ಷೇರು ಮಾರುಕಟ್ಟೆಗಳಿಗೆ (ಅತ್ಯಂತ ಹೆಚ್ಚು ಪರಿಣಿತರು ಮತ್ತು ಮೇಲ್ ಮಧ್ಯಮ ವರ್ಗ) ಜನರು ತಮ್ಮ ಹೂಡಿಕೆ ಮಾಡುತ್ತಿದ್ದರು.

ಬಂತು ಬದಲಾವಣೆಯ ಸಮಯ
1990ರ ದಶಕದಲ್ಲಿ ನಮ್ಮ ಹಣಕಾಸು ವ್ಯವಸ್ಥೆ ಜಾಗತಿಕ ಮಟ್ಟಕ್ಕೆ ತೆರೆದುಕೊಂಡ ಕೆಲ ವರ್ಷಗಳ ಬಳಿಕ ವೈಯಕ್ತಿಕ ಹಣಕಾಸು ಕ್ಷೇತ್ರದಲ್ಲಿ ಬದಲಾವಣೆಯ ಬಿರುಗಾಳಿಯೇ ಎದ್ದಿತು. ತೆರಿಗೆ ಸಂಗ್ರಹ ಕಾನೂನು ಕಠಿಣವಾಯಿತು. ಮಾತ್ರವಲ್ಲದೆ ತೆರಿಗೆ ವಂಚಕರ ಮೇಲೆ ಕಾನೂನಿನ ಕಬಂಧ ಬಾಹುವೂ ವಿಸ್ತಾರವಾಗತೊಡಗಿತು. ಹೊಸ ಹೊಸ ಹೂಡಿಕೆ ಯೋಜನೆಗಳು ಬಂದವು. ಪ್ರತಿಯೊಂದು ಹಣಕಾಸು ಸಂಸ್ಥೆ (ಸರ್ಕಾರಿ ಸ್ವಾಮ್ಯ, ಖಾಸಗಿ ಮತ್ತು ಸಹಕಾರಿ ಕ್ಷೇತ್ರ) ಗಳು ತಮ್ಮದೇ ಆದ ವಿಶೇಷ ಯೋಜನೆಗಳನ್ನು ತಂದವು.
ಸಾಲ ನೀಡಲು ಬಹಳ ಮಡಿವಂತಿಕೆ ವಹಿಸುತ್ತಿದ್ದ ಎಲ್ಲ ಬ್ಯಾಂಕ್‌ಗಳು ಕರೆ ಕರೆದು ಯಾವ ರೀತಿಯ ಸಾಲ ಬೇಕು ಎಂದು ಗ್ರಾಹಕರ ಮನೆಗಳಿಗೇ ಎಡತಾಕತೊಡಗಿದವು. ಇದಕ್ಕಾಗಿಯೇ ಸಾರ್ವಜನಿಕರಿಗೆ ಸಲಹೆ ನೀಡಲು ವೈಯಕ್ತಿಕ ಹಣಕಾಸು ಸಲಹೆ ನೀಡುವ ಕಂಪನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು. ಅವುಗಳಲ್ಲಿ ಕೆಲವು ಪ್ರಾಮಾಣಿಕ ಸೇವೆ ಮಾಡಿ ಜನರ ಮನಸ್ಸು ಗೆದ್ದುಕೊಂಡು ಯಶಸ್ಸು, ಲಾಭ ಗಳಿಸಿಕೊಂಡವು. ಇನ್ನುಳಿದವು ಕಣ್ಣುಮುಚ್ಚಿದರೆ, ಮತ್ತೆ ಹಲವು ಜನರಿಗೆ ಪಂಗನಾಮ ಹಾಕಿ ತಲೆಮರೆಸಿಕೊಂಡವು.

ಇನ್ನೂ ಟ್ರಯಲ್ ಆ್ಯಂಡ್ ಎರರ್
ವಾಣಿಜ್ಯಿಕ ಕೋರ್ಸ್ (ಬಿಬಿಎಂ, ಬಿಕಾಂ ಇತ್ಯಾದಿ)ಗಳನ್ನು ಹೊರತು ಪಡಿಸಿದರೆ ದೇಶದಲ್ಲಿ ವೈಯಕ್ತಿಕ ಹಣಕಾಸಿನ ಬಗ್ಗೆ ಪ್ರಾಥಮಿಕ ಹಂತದ ಶಿಕ್ಷಣ ಎನ್ನುವುದು ನಮ್ಮಲ್ಲಿ ಇಲ್ಲ. ಅಪರೂಪಕ್ಕೆ ಎಂಬಂತೆ ಕೆಲವೆಡೆ ಇದೆ. ಹೀಗಾಗಿ ಇದು ಟ್ರಯಲ್ ಆ್ಯಂಡ್ ಎರರ್ ವಿಧಾನದಲ್ಲೇ ಇದೆ. ಇಲ್ಲಿ ನಿರ್ದಿಷ್ಟವಾದ ಚೌಕಟ್ಟುಗಳಿಲ್ಲ. ಆದರೆ, ಅದಕ್ಕೆ  ಹೊಸ ಪೀಳಿಗೆಯ ಬ್ಯಾಂಕ್‌ಗಳು ಹೊಸ ಅರ್ಥವನ್ನು ಕೊಟ್ಟಿವೆ. ಅದೂ ಅಮೆರಿಕದ ಅರ್ಥ ವ್ಯವಸ್ಥೆಯಿಂದ ಎರವಲು ತಂದ ವಿಚಾರವನ್ನು ದೇಶದ ಹಣಕಾಸಿನ ವ್ಯವಸ್ಥೆಗೆ ತಕ್ಕಂತೆ ಬದಲಿಸಲಾಗಿದೆ.
ವೈಯಕ್ತಿಕ ಹಣಕಾಸು ಎಂದರೆ ಕೇವಲ ಹಣ ಖರ್ಚು ಮತ್ತು ಉಳಿತಾಯ ಅಲ್ಲವೇ ಅಲ್ಲ. ಅದರಲ್ಲಿ ಉಳಿತಾಯ, ಖರ್ಚು, ಹೂಡಿಕೆ, ತೆರಿಗೆ, ಆಸ್ತಿ ಕೊಳ್ಳುವಿಕೆ, ನಿರ್ವಹಣೆ ಮತ್ತು ಆರ್ಥಿಕ ಆಪತ್ಕಾಲದಲ್ಲಿ ಹೇಗೆ ಪರಿಸ್ಥಿತಿ ನಿಭಾಯಿಸುವುದು... ಹೀಗೆ ಎಲ್ಲವೂ ಇದೆ. ಅದು ಹೇಗೆಂದರೆ-

ಅಂದಾಜು
ಆದಾಯ, ಖರ್ಚು, ವೈಯಕ್ತಿಕ ಆಸ್ತಿ (ನಗದು, ಮನೆ ಮತ್ತು ಬ್ಯಾಂಕ್‌ನಲ್ಲಿ ಬ್ಯಾಲೆನ್ಸ್), ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಸಾಲ.

ಗುರಿ
ಖರೀದಿ, ಅಲ್ಪಾವಧಿ ಸಾಲ, ನಿವೃತ್ತಿ ಯೋಜನೆಯ ಬಗೆ.
ಯೋಜನೆ
ಸಾಲಗಳನ್ನು ಕಡಿಮೆ ಮಾಡುವುದು, ಹೊಸತಾಗಿ ಸಾಲ ಪಡೆದುಕೊಳ್ಳುವುದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ.

ಯೋಜನೆ ನಿರ್ವಹಣೆ
ಲೆಕ್ಕಪತ್ರ ಪರಿಶೋಧಕರ ಸಹಾಯದಿಂದ ನಿರ್ವಹಣೆ.

ಮೇಲ್ವಿಚಾರಣೆ
ಅನಿವಾರ್ಯವಾದ ವ್ಯತ್ಯಾಸಗಳನ್ನು ಸರಿಪಡಿಸಲು ಹೊಂದಾಣಿಕೆ ಮಾಡುವುದು.  

ವೈಯಕ್ತಿಕ ಹಣಕಾಸು ಕ್ಷೇತ್ರದಲ್ಲಿ ಆಯ್ಕೆ ಏನು?
    ಜೀವ ವಿಮೆ
    ಬ್ಯಾಂಕ್ ಠೇವಣಿ
    ಪ್ರಾವಿಡೆಂಟ್ ಫಂಡ್
    ದಲಾಲ್ ಸ್ಟ್ರೀಟ್/ಷೇರು ಮಾರುಕಟ್ಟೆ
    ಮ್ಯೂಚ್ಯುವಲ್ ಫಂಡ್
    ಅಂಚೆ ಕಚೇರಿ ಠೇವಣಿ
    ತೆರಿಗೆ ರಹಿತ ಬಾಂಡ್‌ಗಳು
    ಮನೆ ಖರೀದಿ ಅಥವಾ ನಿರ್ಮಾಣ
    ಆರೋಗ್ಯ ವಿಮೆ
    ವಾಹನ ಖರೀದಿ
    ಶಿಕ್ಷಣ ಮತ್ತು ಪರ್ಸನಲ್ ಲೋನ್

ಇದರ ಜತೆಗೆ ವೈಯಕ್ತಿಕ ಹಣಕಾಸು ಕ್ಷೇತ್ರದಲ್ಲಿ
ಏಕಾಏಕಿ ಬರುವ ರೋಗ ರುಜಿನ ಮತ್ತು ಇತರ ಆಪತ್ತುಗಳ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ಇದಕ್ಕಾಗಿ ಆಯಾ ವ್ಯಕ್ತಿಯ ಹಣಕಾಸಿನ ಸಾಮರ್ಥ್ಯಕ್ಕೆ ತಕ್ಕಂತೆ ವಿಮೆ, ಉಳಿತಾಯ ಅಗತ್ಯ.
ಯಾವುದೇ ಉದ್ಯೋಗ ಮಾಡುವ ವ್ಯಕ್ತಿ ಇರಲಿ, ಆತ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಅದಕ್ಕಾಗಿ ಸರ್ಕಾರ ಕೊಡುವ ವಿನಾಯಿತಿ ಬಗ್ಗೆ ತಿಳಿದುಕೊಳ್ಳಬೇಕು.
ಮನೆ, ಖರೀದಿ, ಮದುವೆ, ವಿದ್ಯಾಭ್ಯಾಸಕ್ಕೆ ಉಳಿತಾಯ.
ನಿವೃತ್ತಿಯಲ್ಲಿ ಆದಾಯದ ದಾರಿ, ಅದಕ್ಕೆ ಸಂಬಂಧಿಸಿದ ತೆರಿಗೆ ನಿಭಾಯಿಸುವುದು ಹೇಗೆ?
ಮನೆ ಅಥವಾ ಇತರ ಆಸ್ತಿಯನ್ನು ಮಾರುವುದು ಹೇಗೆ?
ಇಲ್ಲಿ ನಾವು ಒಂದು ವಿಚಾರ ಗಮನಿಸಬೇಕು. ವೈಯಕ್ತಿಕ ಹಣಕಾಸು ನಿಭಾಯಿಸುವಿಕೆ ಸಂಪತ್ತಿನ ನಿರ್ವಹಣೆಗೆ (ವೆಲ್ತ್ ಮ್ಯಾನೇಜ್‌ಮೆಂಟ್) ಸಮಾನವಾಗಿದೆ. ಇದರಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಅಪಾಯ ಕಟ್ಟಿಟ್ಟ ಬುತ್ತಿ. ವೈಯಕ್ತಿಕ ಹಣಕಾಸು ನಿರ್ವಹಣೆ ಬಗ್ಗೆ ಗಮನ ಕೊಡದೇ ಬೇಕಾಬಿಟ್ಟಿಯಾಗಿ ಖರ್ಚು ಮಾಡುವುದು ಅದಕ್ಕಿಂತಲೂ ಅಪಾಯ. ಅವುಗಳನ್ನು ನಿರ್ವಹಿಸುವಾಗ ಗರಿಷ್ಠ ಪ್ರಮಾಣದ ಎಚ್ಚರಿಕೆ ಬೇಕು ಅಷ್ಟೆ. ಅಗತ್ಯಕ್ಕೆ ತಕ್ಕಂತೆ ಖರ್ಚು, ಉಳಿತಾಯ ಸದ್ಯದ ಅಗತ್ಯ.
 
-ರಮಾನಂದ ಶರ್ಮಾನಿವೃತ್ತ ಬ್ಯಾಂಕ್ ವ್ಯವಸ್ಥಾಪಕರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!