ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಸೌಲ್ ಟ್ರೀ ಸಂಸ್ಥೆಯಿಂದ ಆಯುರ್ವೇದ ಸೌಂದರ್ಯ ವರ್ಧಕಗಳ ಬಿಡುಗಡೆ

Rashmi Kasaragodu
Updated On : 24 Mar 2014, 1:24 am

ಬೆಂಗಳೂರು: ರಾಸಾಯನಿಕ ಸೌಂದರ್ಯವರ್ಧಕಗಳಿಂದ ಹೊರಬರಲು ಆಯುರ್ವೇದ ಸೌಂದರ್ಯವರ್ಧಕಗಳನ್ನು ಸೌಲ್ ಟ್ರೀ ಸಂಸ್ಥೆ ಪರಿಚಯಿಸಿದೆ. ಸೌಂದರ್ಯ ವರ್ಧಕಗಳ ಉತ್ಪನ್ನಗಳಲ್ಲಿ ರಾಸಾಯನಿಕ ಮಿಶ್ರಣ ಶೂನ್ಯ ಪ್ರಮಾಣದಲ್ಲಿರುತ್ತದೆ. ಸೌಲ್ ಟ್ರೀ ಬಳಸುವ ಪೊಟ್ಟಣಗಳನ್ನು ಸುಲಭವಾಗಿ ಮರುಬಳಕೆ ಮಾಡಬಹುದಾಗಿದ್ದು ಸುಲಭವಾಗಿ ಮಣ್ಣಿನಲ್ಲಿ ಕರಗುತ್ತವೆ ಎಂದು ಸೌಲ್ ಟ್ರೀ ಸಂಸ್ಥೆಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಷಾಲ್ ಭಂಡಾರಿ ತಿಳಿಸಿದ್ದಾರೆ. ಅಪಾಯಕಾರಿ ರಾಸಾಯನಿಕ ಕೆಟ್ಟ ಪರಿಣಾಮಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸಿ ಸೌಂದರ್ಯವರ್ಧಕಗಳ ಬಳಕೆದಾರರು ಸಾವಯವ ಉತ್ಪನ್ನಗಳತ್ತ ಆಕರ್ಷಕರಾಗಲು  ಸಂಸ್ಥೆ ನಿರಂತರವಾಗಿ ಪ್ರಯತ್ನಿಸುತ್ತಿದೆ. ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಸಾವಯವ ವ್ಯಾಪಾರ ಮೇಳವಾಗಿರುವ ಬಯೋಪ್ಯಾಕ್‌ನಲ್ಲಿ ಪಾಲ್ಗೊಳ್ಳುತ್ತಿದೆ. 2012ರಲ್ಲಿ ನಡೆದ ಮೇಳದಲ್ಲಿ ಭಾಗವಹಿಸುವುದರ ಮೂಲಕ ಬೆಂಗಳೂರಿಗೆ ಕಾಲಿಟ್ಟಿದೆ ಎಂದು ಹೇಳಿದ್ದಾರೆ.



ಹೆಲ್ತ್‌ಕೇರ್ ಟು ಕೇರ್ ಆಫ್ ಹೆಲ್ತ್
ಬೆಂಗಳೂರು: ಆರೋಗ್ಯ ಕುರಿತು ವಿವಿಧ ರೀತಿಯ ಉತ್ಪನ್ನಗಳ ವಿನ್ಯಾಸ, ಅಭಿವೃದ್ಧಿ ವಿಚಾರವಾಗಿ ಹೆಲ್ತ್‌ಕೇರ್ ಟು ಕೇರ್ ಆಫ್ ಹೆಲ್ತ್-ಒಂದು ಮಾದರಿ ಶಿಫ್ಟ್ ಕುರಿತ ಕಾರ್ಯಕ್ರಮವನ್ನು ಡಾಲ್ ಹೆಲ್ತ್‌ಕೇರ್ ಸರ್ವೀಸ್ ಆಯೋಜಿಸಿದೆ. ದೀರ್ಘ ಕಾಲೀನ ರೋಗಗಳು ಜನರಿಗೆ ಬರುವ ಮುನ್ನ ಹಾಗೂ ಬಂದ ನಂತರದಲ್ಲಿ ಯಾವ ರೀತಿ ಅದನ್ನು ಗುಣಪಡಿಸಬೇಕೆಂಬ ವಿಚಾರವಾಗಿ ಮಹತ್ತರ ಆರೋಗ್ಯ ಸೇವಾ ಸೌಲಭ್ಯ ನೀಡಬೇಕೆನ್ನುವ ಉದ್ದೇಶವನ್ನು ಸಂಸ್ಥ ಹೊಂದಿದೆ ಎಂದು ಡಾ. ಗಿರೀಶ್ ರಾವ್ ಹೇಳಿದರು. ಜನರ ಬದಲಾದ ಜೀವನಶೈಲಿ, ಆಹಾರ ಪದ್ಧತಿಗಳಿಂದ ದೀರ್ಘ ಪರಿಣಾಮ ಬೀರುತ್ತಿದೆ ಹಲವರಿಗೆ ತಮಗೆ ಕಾಯಿಲೆ ಬಂದಿರುವ ಮಾಹಿತಿ ಇರುವುದಿಲ್ಲ. ರೋಗ ನಿರ್ವಹಣೆ, ಕಾಯಿಲೆ ವಾಸಿಮಾಡುವಂತಹ ಯಾವುದೇ ತರಹದ ಔಷಧ ಮತ್ತು ಆರೈಕೆ ಹೊರತಾಗಿಯೂ ಬಹಳಷ್ಟು ಜನರಿಗೆ ಕಾಯಿಲೆ ವಾಸಿ ಮಾಡಿಕೊಳ್ಳುವ ಮನಸ್ಥಿತಿ ಮತ್ತು ಆರೋಗ್ಯ ವ್ಯವಸ್ಥೆಯಿಲ್ಲ ಎಂದರು.


ಇನೆಸ್ ಲೋಬೋಗೆ ಪ್ರಶಸ್ತಿ
ಬೆಂಗಳೂರು: ಇನೆಸ್ ಲೋಬೋ ಆವರು ಈ ಸಾಲಿನ ಆರ್ಕಿವಿಷನ್- ವುಮೆನ್ ಆ್ಯಂಡ್ ಆರ್ಕಿಟೆಕ್ಚರ್ ಪ್ರಶಸ್ತಿಗೆಭಾಜನರಾಗಿದ್ದಾರೆ. ಇಟಾಲಿಸಿಮೆಂಟಿ ಆರಂಭಿಸಿದ ಪ್ರಶಸ್ತಿ ಇದಾಗಿದ್ದು, ಮಹಿಳಾ ವಾಸ್ತುವಿನ್ಯಾಸಗಾರರಿಗೆ ನೀಡಲಾಗುತ್ತದೆ. ನಗರದ ಸ್ಥಿತಿಯೊಳಗೆ ಹೊಸ ಕಟ್ಟಡಗಳನ್ನು ರಚಿಸುವ ಮತ್ತು ಸೃಜನಶೀಲವಾದ ಸಂಕೀರ್ಣ ವಾಸ್ತುಶಿಲ್ಪದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯಕ್ಕೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಬೆರ್ಗಾಮೋದಲ್ಲಿನ ಇಟಾಲಿಸಿಮೆಂಟಿ ಗ್ರೂಪ್ ರೀಸರ್ಚ್ ಅಂಡ್ ಡೆವೆಲಾಪ್‌ಮೆಂಟ್ ಸೆಂಟರ್‌ನ ಐ. ಲ್ಯಾಬ್‌ನಲ್ಲಿ ಎರಡು ವಾರಗಳ ಸಂಶೋಧನಾ ಕಾರ್ಯಾಗಾರ ಮತ್ತು 50ಸಾವಿರ ಡಾಲರ್ ಮೊತ್ತದ ಬಹುಮಾನಗಳನ್ನು ಒಳಗೊಂಡಿದ್ದು, ಇದರಲ್ಲಿ ಒಂದು ಭಾಗವನ್ನು ವಿಜೇತರ ನಿರ್ಣಯದನುಸಾರ ಸಾಮಾಜಿಕ ಕಾರ್ಯಗಳಿಗೆ ವರ್ಗಾಯಿಸಬಹುದಾಗಿದೆ.
ಕೆಐಎನಲ್ಲಿ ಪ್ಲಾಝಾ ಪ್ರೀಮಿಯಂ ಲಾಂಜ್ ಸೇವೆ ಶುರು
ಬೆಂಗಳೂರು: ವಿಮಾನ ನಿಲ್ದಾಣಗಳಲ್ಲಿ ಲಾಂಜ್ ಸೇವೆಗಳನ್ನು ಒದಗಿಸುವ ಪ್ಲಾಝಾ ಪ್ರೀಮಿಯಂ ಲಾಂಜ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆ ಆರಂಭಿಸಿದೆ. ಪ್ರಯಾಣಿಕರಿಗೆ ವಿಶ್ವದರ್ಜೆಯ ಗುಣಮಟ್ಟದ ಆಹಾರ ಹಾಗೂ ಪಾನೀಯ, ಆರಾಮದಾಯಕ ವಿಶ್ರಾಂತಿ ಸ್ಥಳ, ಪವರ್ ಶವರ್, ಸ್ಪಾ ಹಾಗೂ ಮಸ್ಸಾಜ್ ಸೆಂಟರ್ ಸೇವೆಗಳನ್ನು  ನಿಲ್ದಾಣದಲ್ಲಿ ಪಡೆಯಬಹುದಾಗಿದೆ. ಕಂಫರ್ಟ್, ಇನ್ನೋವೇಷನ್ ಹಾಗೂ ಇಂಟರಾಕ್ಟಿವಿಟಿ ಪ್ರೀಮಿಯಂ ಲಾಂಜ್‌ನ ಮೂಲಮಂತ್ರ, ಆಸ್ಟ್ರೇಲಿಯಾದ ಮಿಚೆಲ್ ಸ್ಕ್ವೇರ್ಸ್, ಗಾರ್ಡನ್ ಮಾದರಿಯಲ್ಲಿ ಲಾಂಜ್‌ನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ.


ಕೃತಕ ಸಿಹಿ ಅಸ್ಪರ್ಟ್‌ಮೆ ಮಾನವ ಬಳಕೆಗೆ ಸಂಪೂರ್ಣ ಸುರಕ್ಷಿತ
ಬೆಂಗಳೂರು: ವಿಶ್ವದಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಸುವ ಕೃತಕ ಸಿಹಿ ಆಸ್ಪರ್ಟ್‌ಮೆ, ಐರೋಪ್ಯ ಆಹಾರ ಸುರಕ್ಷತೆ ಪ್ರಾಧಿಕಾರ ಪ್ರಸ್ತುತ ಮಟ್ಟದಲ್ಲಿ ಮಾನವ ಬಳಕೆಗೆ ಸಂಪೂರ್ಣ ಸುರಕ್ಷಿತ ಎನ್ನಲಾಗಿದೆ. ದೇಹ ತೂಕದ ಪ್ರತಿ ಕೆಜಿಗೆ 40 ಮಿ.ಗ್ರಾಂ ಸ್ವೀಕಾರಾರ್ಹ. ದಿನನಿತ್ಯದ ಡೋಸ್ ಜನರಿಗೆ ದೀರ್ಘ ಅಥವಾ ಅಲ್ಪಾವಧಿ ಆರೋಗ್ಯ ಕಾಳಜಿಗೆ ಭಂಗವನ್ನು ತಂದೊಡ್ಡುವುದಿಲ್ಲ ಎಂದು ಪ್ರಾಧಿಕಾರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಸ್ಪರ್ಟ್‌ಮೆ ಕೃತಕ ಆದರೆ ತೀವ್ರವಾದ ಕ್ಯಾಲೋರಿ ಹೊಂದಿದೆ. ಸ್ಯಾಕರೈಡ್, ಅಲ್ಲದ ಸಿಹಿಯು ಯೊಗರ್ಟ್, ಚೂಯಿಂಗ್ ಗಮ್, ಡೈಯಟ್ ಆಹಾರಗಳು, ತಂಪು ಪಾನೀಯಗಳು ಮತ್ತು ಕಡಿಮೆ ಕ್ಯಾಲೋರಿ, ಸಕ್ಕರೆ ರಹಿತ ಆಹಾರದಲ್ಲಿ ವಿಶ್ವದಾದ್ಯಂತ ಬಳಸುತ್ತಾರೆ. ವಾಸನೆಯಿಲ್ಲದ ಪುಡಿಯಾಗಿದ್ದು, ಸರಿಸುಮಾರು ಸಕ್ಕರೆಗಿಂತ 200ಪಟ್ಟು ಸಿಹಿಯಾಗಿದೆ ಎಂದು ಡಿಪಾರ್ಟ್‌ಮೆಂಟ್ ಆಫ್ ಡೈಯಾಬೆಟಾಲಜಿಯ ಮುಖ್ಯಸ್ಥ ಸಿ. ಮುನಿಚೌಡಪ್ಪ ಹೇಳಿದ್ದಾರೆ.



ಗ್ಯಾಲಕ್ಸಿಯಿಂದ ಹೊಸ ಸ್ಪೋರ್ಟ್ಸ್‌ಬಾರ್ ಆರಂಭ
ಬೆಂಗಳೂರು: ಮನರಂಜನಾ ಉದ್ಯಮ ಸಂಸ್ಥೆ ಗ್ಯಾಲಕ್ಸಿ ಎಂಟರ್‌ಟೈನ್‌ಮೆಂಟ್ ಕಾರ್ಪೊರೇಷನ್ ಮಾರತ್‌ಹಳ್ಳಿಯಲ್ಲಿ ಹೊಸ ಸ್ಪೋರ್ಟ್ಸ್‌ಬಾರ್‌ಗೆ ಚಾಲನೆ ನೀಡಿದೆ. ಕ್ರೀಡೆ ಹಾಗೂ ಸಂಗೀತದ ಸಮ್ಮಿಶ್ರಣವನ್ನು ಏಕಕಾಲಕ್ಕೆ ಅನುಭವಿಸಲು ಇಷ್ಟ ಪಡುವ ನಗರದ ಸಮುದಾಯಕ್ಕೆ ಅವಕಾಶ ಮಾಡಿಕೊಡಲಿದೆ. ಟಿ20 ವಿಶ್ವಕಪ್, ಐಪಿಎಲ್ 7,  ಫಿಫಾ ವಿಶ್ವಕಪ್ ಇಷ್ಟಪಡುವ ಆಟವನ್ನು ನೋಡಬಹುದು. ಸ್ಪೋರ್ಟ್ಸ್‌ಬಾರ್ ಕೇವಲ ಕ್ರೀಡಾ ಪ್ರೇಮಿಗಳಿಗೆ ಮಾತ್ರವಲ್ಲದೆ ಕಲಾವಿದರು, ಬ್ಯಾಂಡ್‌ಗಳು, ಡಿಜೆ, ಕರೋಡೆ ನೈಟ್ಸ್‌ಗಳ ನೇರ ಪ್ರದರ್ಶನವಿರುತ್ತದೆ. ಕ್ರೀಡಾನುಭವ, ಉತ್ತಮ ಆಹಾರ, ಪಾನೀಯ, ಜತೆಗೆ, ಮನೋರಂಜನೆ ಎಲ್ಲವೂ ಒಟ್ಟಿಗೆ ಸಿಗುವ ಸ್ಥಳ ಎಲ್ಲಿದೆ ಎಂದು ಕ್ರೀಡಾಸಕ್ತರು ಯೋಚಿಸುತ್ತಿರುವ ಸಂದರ್ಭದಲ್ಲೇ ಸ್ಪೋರ್ಟ್ಸ್‌ಬಾರ್‌ಗೆ ಚಾಲನೆ ದೊರೆತಿದೆ ಎಂದು ಇದರ ನಿರ್ದೇಶಕರಾದ ಸುನೀಲ್ ಬಿಯಾನಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement