ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಮಾರ್ಚ್ 26ರಂದು ಹುಟ್ಟಿದ ಮಕ್ಕಳಿಗೆ ಎಂಟಿಎಸ್ ಕೊಡುಗೆ

Rashmi Kasaragodu
Updated On : 31 Mar 2014, 1:16 am

ಬೆಂಗಳೂರು: ಎಂಟಿಎಸ್ ಐದನೇ ವಾರ್ಷಿಕೋತ್ಸವದ ಪ್ರಯುಕ್ತ 2014 ಮಾ.26ರಂದು ಜನಿಸಿದ ಎಲ್ಲಾ ಮಕ್ಕಳಿಗೆ ಉಚಿತ 'ಎಂ- ಬ್ಲೇಜ್ ಅಲ್ಟಾ ಡಾಂಗಲ್‌' ಮತ್ತು 10 ಜಿಬಿ ಡಾಟಾ ಉಚಿತವಾಗಿ ನೀಡುವ ಯೋಜನೆ ಹಾಕಿಕೊಂಡಿದೆ. ಇದು ಎಂಟಿಎಸ್‌ನ 'ಬಾರ್ನ್ ಫಾರ್ ದಿ ಇಂಟರ್‌ನೆಟ್ ಆಂದೋಲನ'ದ ಕೊಡುಗೆ. ಈ ಕೊಡುಗೆ ಪಡೆಯಲು ನವಜಾತ ಶಿಶುವಿನ ಪೋಷಕರು ಎಂಟಿಎಸ್ ಇಂಡಿಯಾ ವೆಬ್‌ಸೈಟ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. (ಢಿಢಿಢಿ.ಟಡಿಡ್ಝಟಿಜ್ಝಛ.್ಝಟಿ) ಆಯ್ದ ಎಂಟಿಎಸ್ ಮಳಿಗೆಗಳಿಗೆ ಅಗತ್ಯ ದಾಖಲೆಗಳ ಜೊತೆಗೆ ಹಾಜರಾಗಬೇಕು. ಎಂಟಿಎಸ್‌ನ ಈ ಕೊಡುಗೆ ಪಡೆದುಕೊಳ್ಳಲು ಮಾ.26ರಿಂದ 21 ದಿನಗಳ ಕಾಲಾವಕಾಶವಿದೆ. ಸ್ಥಳೀಯ ನಗರಸಭೆ ನೀಡುವ ಪೋಷಕರ ಹೆಸರನ್ನೊಳಗೊಂಡ ಶಿಶುವಿನ ಜನನ ಪ್ರಮಾಣಪತ್ರ, ಕೊಡುಗೆ ಪಡೆಯುವ ಪೋಷಕರ ವಿಳಾಸ, ಗುರುತು ಧೃಢೀಕರಣ ಪತ್ರ, ಪೋಷಕರ ಫೋಟೋದೊಂದಿಗೆ ವಿವರಗಳನ್ನು ಭರ್ತಿ ಮಾಡಿದ ಅರ್ಜಿ ನಮೂನೆ, ಕೊಡುಗೆ ಪಡೆಯುವವರು ಸಹಿ ಮಾಡಿದ ಕೊಡುಗೆ ಪ್ರಮಾಣ ಪತ್ರದ ದಾಖಲೆಗಳನ್ನು ಒದಗಿಸಬೇಕು.


'ಲಿನೆನ್ ಕ್ಲಬ್ ಫ್ಯಾಬ್ರಿಕ್ಸ್‌' 14ನೇ ವಿಶೇಷ ಶೋ ರೂಂ
ಬೆಂಗಳೂರಿನಲ್ಲಿ ಆದಿತ್ಯ ಬಿರ್ಲಾ ನುವೊ ಲಿ, ಜಯಶ್ರೀ ಟೆಕ್ಸ್‌ಟೈಲ್ಸ್‌ನ ಪ್ರೀಮಿಯಂ ಬ್ರಾಂಡ್ 'ಲಿನೆನ್ ಕ್ಲಬ್ ಫ್ಯಾಬ್ರಿಕ್ಸ್‌' 14ನೇ ವಿಶೇಷ ಶೋ ರೂಂ ಅನ್ನು ಪ್ರಾರಂಭಿಸಿದೆ. ಇದು ದೇಶದಲ್ಲಿ ಲಿನೆನ್ ಕ್ಲಬ್ ಫ್ಯಾಬ್ರಿಕ್ಸ್‌ನ 100ನೇ ವಿಶೇಷ ಶೋ ರೂಂ ಆಗಿದೆ. ಆದಿತ್ಯ ಬಿರ್ಲಾ ಸಮೂಹದ ಡೊಮೆಸ್ಟಿಕ್ ಟೆಕ್ಸ್‌ಟೈಲ್ಸ್ ವಿಭಾಗದ ಸಿಇಒ ಎಸ್. ಕೃಷ್ಣಮೂರ್ತಿ ಮಳಿಗೆ ಉದ್ಘಾಟಿಸಿದರು. ಇಲ್ಲಿ ಲಿನೆನ್ ಫ್ಯಾಬ್ರಿಕ್, ಸಿದ್ಧ ಉಡುಪುಗಳು ದೊರೆಯುತ್ತವೆ. ಮಹಿಳೆಯರು ಮತ್ತು ಪುರುಷರಿಗೆ ವಿವಿಧ ವರ್ಣಗಳ ಎಂಬ್ರೈಡರಿ ಬಟ್ಟೆಗಳಿವೆ. ಷರ್ಟು, ಪ್ಯಾಂಟ್, ಸೂಟ್, ಸಾಂಪ್ರದಾಯಿಕ ಉಡುಗೆ, ಸ್ಕರ್ಟ್, ಟಾಪ್, ಜಾಕೆಟ್ ಇತ್ಯಾದಿಗಳು ಲಭ್ಯ. ಸ್ಟೈಲ್ ಗುರು ರೋಹಿತ್ ಬಾಲ್ ಪ್ರಕಾರ, ಹೊಸ ಪ್ರವೃತ್ತಿಯನ್ನು ಸ್ಥಾಪಿಸುವ ಎಲ್ಲರಿಗೂ ಈ ಮಾಸದಲ್ಲಿ ಲಿನೆನ್ ಕ್ಲಬ್ ಉತ್ತಮ ಆಯ್ಕೆಗಳನ್ನು ಒದಗಿಸಲಿದೆ. ಬೆಂಗಳೂರಿನ ವಾತಾವರಣಕ್ಕೆ ಇಲ್ಲಿನ ಉಡುಗೆಗಳು ಹೇಳಿ ಮಾಡಿಸಿದಂತೆ. ಹತ್ತಿ ಬಟ್ಟೆಗಳಿಗಿಂತ ಹೆಚ್ಚು ತೇವಾಂಶ ಹೀರಿಕೊಳ್ಳುವ ಸಾಮರ್ಥ್ಯವಿರುವ ಈ ಬಟ್ಟೆಗಳು ನಿಮ್ಮನ್ನು ಬೇಸಿಗೆಯಲ್ಲಿ ತಂಪಾಗಿಯೂ, ಚಳಿಗಾಲದಲ್ಲಿ ಬೆಚ್ಚಗಿರುವಂತೆ ನೆರವಾಗುತ್ತದೆ.


ಬೋರ್ಡ್ ಪರೀಕ್ಷೆ: ವಂಡರ್ ಲಾದಲ್ಲಿ ರಿಯಾಯಿತಿ
10ನೇ ತರಗತಿ ಮತ್ತು ಪಿಯುಸಿ ಬೋರ್ಡ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ವಂಡರ್‌ಲಾ ತನ್ನ ಟಿಕೆಟ್ ದರದಲ್ಲಿ ಶೇ.35ರಷ್ಟು ರಿಯಾಯಿತಿ ಘೋಷಿಸಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಟಿಕೆಟ್ ದರದಲ್ಲಿ ಶೇ.20ರಷ್ಟು ರಿಯಾಯಿತಿ ನೀಡುತ್ತಿದೆ. ಪುಸ್ತಕಗಳ ಅಧ್ಯಯನ ಮತ್ತು ಪರೀಕ್ಷೆ ಒತ್ತಡದ ನಂತರ ಬದಲಾವಣೆ ಬಯಸುವ ವಿದ್ಯಾರ್ಥಿಗಳಿಗೆ ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್ ಹೊಸ ಅವಕಾಶಗಳನ್ನು ಘೋಷಿಸಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಅಸಲಿ ಹಾಲ್ ಟಿಕೆಟ್ ಅನ್ನು ಟಿಕೆಟ್ ಕೌಂಟರ್‌ನಲ್ಲಿ ತೋರಿಸಿ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ದೇಶದ ಎಸ್‌ಎಸ್‌ಎಲ್‌ಸಿ/ಪಿಯುಸಿ/ ಸಿಬಿಎಸ್‌ಇ/ಐಸಿಎಸ್‌ಇ ಬೋರ್ಡ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಮೇ  31ರವರೆಗೆ ಜಾರಿಯಲ್ಲಿರುತ್ತದೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ಅಸಲಿ ಕಾಲೇಜು ಐಡಿ ತೋರಿಸಿ ರಿಯಾಯಿತಿ ಪಡೆದುಕೊಳ್ಳಬಹುದು. ದೂ:9945557777


10 ದಿನದಲ್ಲಿ ಯಮಹಾದ 500 ಸ್ಕೂಟರ್ ಮಾರಾಟ  
ಯಮಹಾ ಮೋಟರ್ ಇಂಡಿಯಾ ಸೇಲ್ಸ್ ಲಿಮಿಟೆಡ್ ಸಂಸ್ಥೆ 113 ಸಿಸಿ ಸಾಮರ್ಥ್ಯದ ಕೌಟುಂಬಿಕ ಸ್ಕೂಟರ್ ಆಲ್ಫಾದ ಯಶಸ್ಸನ್ನು ಆಚರಿಸುತ್ತಿದೆ. ಬೆಂಗಳೂರಿನಲ್ಲಿ 10 ದಿನದ ಅವಧಿಯಲ್ಲಿ ಒಟ್ಟು 500 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇದಲ್ಲದೆ ಹೆಚ್ಚುವರಿಯಾಗಿ 3,000 ಆಲ್ಫಾ ವಾಹನಗಳಿಗೆ ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ. ಯಮಹಾ ಮೋಟಾರ್ ಇಂಡಿಯಾ ಸೇಲ್ಡ್ ಪ್ರೈವೇಟ್ ಲಿ. ಉಪಾಧ್ಯಕ್ಷ ರಾಯ್ ಕುರಿಯನ್ ಮಾತನಾಡಿ, ಸ್ಥಳೀಯ ವಿತರಕರಿಗೂ ಈ ಸಾಧನೆಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅವರ ಸಹಕಾರವಿಲ್ಲದೆ ಯಶಸ್ಸು ಸಾಧಿಸುವುದು ಕಷ್ಟ. ದಕ್ಷಿಣ ಭಾಗದಲ್ಲಿ 120 ಅಧಿಕೃತ ವಿತರಕರನ್ನು ಹೊಂದಿದೆ. ಕರ್ನಾಟಕದಲ್ಲಿ 25 ಮಂದಿ ವಿತರಕರು ಇದ್ದಾರೆ. ಭವಿಷ್ಯದಲ್ಲಿ ದಕ್ಷಿಣ ಭಾಗದಲ್ಲಿ ನಮ್ಮ ವಿತರಕರ ಸಂಖ್ಯೆಯನ್ನು 130ಕ್ಕೆ ಏರಿಸಲು ಬಯಸಿದ್ದೇವೆ ಎಂದು ಹೇಳಿದ್ದಾರೆ.



'ಕಾಲ್‌ವಿನ್ ಕ್ಲೈನ್‌' ಬ್ರಾಂಡ್‌ನ ಮಾರಾಟ ಲೈಸೆನ್ಸ್
ಅರವಿಂದ್ ಲಿ. ಮತ್ತು ಪಿವಿಎಚ್ ಕಾರ್ಪ್ ಜಂಟಿಯಾಗಿ 'ಕಾಲ್‌ವಿನ್ ಕ್ಲೈನ್‌' ಬ್ರಾಂಡ್‌ನ ಬಟ್ಟೆಗಳನ್ನು ಭಾರತದಾದ್ಯಂತ ಜವಳಿ ಮಾರುಕಟ್ಟೆಗಳಿಗೆ ಸರಬರಾರಾಜು ಮಾಡುವ ಲೈಸೆನ್ಸ್ ಪಡೆದುಕೊಂಡಿದೆ. ಇದರಿಂದ ಭಾರತದಲ್ಲಿ 'ಕಾಲ್‌ವಿನ್ ಕ್ಲೈನ್‌' ಬ್ರಾಂಡ್‌ನ ಮಾರುಕಟ್ಟೆ ವಿಸ್ತಾರವಾಗಲಿದೆ. ಸದ್ಯಕ್ಕೆ ಭಾರತದ ಮಾರುಕಟ್ಟೆಯಲ್ಲಿ ದೊರಕುತ್ತಿರುವ ಈ ಬ್ರಾಂಡ್‌ನ ಜೀನ್ಸ್‌ಗಳ ಜತೆಗೆ ಬೆಲ್ಟ್, ಬ್ಯಾಗ್, ಲೆದರ್ ಪರಿಕರಗಳು ಕೂಡ ಇನ್ನು ಮುಂದೆ ದೊರಕಲಿದೆ. ಅರವಿಂದ್ ಲಿಮಿಟೆಡ್‌ನ ಅಧ್ಯಕ್ಷ ಸಂಜೀವ್ ಲಾಲ್‌ಭಾಯ್ ಪ್ರಕಾರ, ವಿಶ್ವದಲ್ಲೇ ಹೆಚ್ಚಿನ ಮಟ್ಟದಲ್ಲಿ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಫ್ಯಾಶನ್ ಬ್ರಾಂಡ್ ಇದು. 20 ವರ್ಷಗಳಿಂದ ಪಿವಿಎಚ್ ಜತೆಗೆ ಜಂಟಿಯಾಗಿ 'ಟಾಮಿ ಹಿಲ್‌ಫಿಗರ್‌' ಬ್ರಾಂಡ್ ಮಾರುಕಟ್ಟೆಗೆ ಜಂಟಿಯಾಗಿ ಕೈಗೂಡಿಸಿ ಕೆಲಸ ಮಾಡುತ್ತಿದ್ದೇವೆ. ಈಗ ಈ ಕಾಲ್‌ವಿನ್ ಕ್ಲೈನ್ ಜತೆಗಿನ ಒಪ್ಪಂದದ ಮೂಲಕ ಇನ್ನಷ್ಟು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಿದ್ದೇವೆ.  


'ರಾಮ್‌ರಾಜ್‌' ಉಡುಗೆಗಳಿಗೆ ಅಶ್ವಿನ್ ರವಿಚಂದ್ರನ್ ರಾಯಭಾರಿ
'ರಾಮ್‌ರಾಜ್‌' ಬ್ರಾಂಡ್‌ನ ಕಾಟನ್ ಉಡುಗೆಗಳಿಗೆ ಖ್ಯಾತ ಕ್ರಿಕೆಟ್‌ಪಟು ಅಶ್ವಿನ್ ರವಿಚಂದ್ರನ್ ಅವರನ್ನು ನೂತನ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ರಾಮ್‌ರಾಜ್ ಕಾಟನ್‌ನ ಹೊಸ ಬಿಳಿ ಶರ್ಟ್‌ಗಳು 600ರಿಂದ 6,000ಗಳ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಕಂಪನಿ ಪ್ರಸ್ತುತ 600 ಕೋಟಿ ವಹಿವಾಟು ಹೊಂದಿದ್ದು ಮುಂದಿನ ವರ್ಷಗಳಲ್ಲಿ 1,000 ಕೋಟಿ ವಹಿವಾಟು ತಲುಪುವ ಗುರಿ ಹೊಂದಲಾಗಿದೆ ಎಂದು ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಕೆ.ಆರ್. ನಾಗರಾಜನ್ ತಿಳಿಸಿದ್ದಾರೆ. ಅವರ ಪ್ರಕಾರ, ರಾಮ್‌ರಾಜ್ ಬಟ್ಟೆ ಉತ್ಪನ್ನಗಳಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಕಂಪನಿ ಬಹುದೊಡ್ಡ ಮಾರುಕಟ್ಟೆ ಹೊಂದಿದೆ. ಅದಕ್ಕೆ ಕಾರಣ ಗುಣಮಟ್ಟ ನಿರ್ವಹಣೆ, ಗುಣಮಟ್ಟ ಉತ್ಪನ್ನ, ಗುಣಮಟ್ಟದ ಆಡಳಿತ, ಸ್ಪಷ್ಟ ಮಾರಾಟ ತಂತ್ರಗಳು ಯುವಜನರನ್ನು ಸೆಳೆಯುತ್ತಿದೆ.  



ವೊಡಾಫೋನ್‌ಗೆ ಐಸಿಐಸಿಐ ಬ್ಯಾಂಕ್ ಸಹಯೋಗ
ವೊಡಾಫೋನ್ ಇಂಡಿಯಾ ಸಂಸ್ಥೆಯು ಐಸಿಐಸಿಐ ಬ್ಯಾಂಕ್ ಸಹಯೋಗದಲ್ಲಿ ಕರ್ನಾಟಕದಲ್ಲಿ ಹೊಸ ರೀತಿಯ ಹಣ ವರ್ಗಾವಣೆ, ಪಾವತಿ ಸೇವಾ ಸೌಲಭ್ಯ ಂ-ಕಿಜಡಛವನ್ನು ಆರಂಭಿಸಿದೆ. ಇದು ವೊಡಾಫೋನ್‌ನ ಟ್ರೇಡ್‌ಮಾರ್ಕ್ ಆಗಿದೆ. ಬ್ಯಾಂಕ್ ಸೌಲಭ್ಯವಿಲ್ಲದ, ಬ್ಯಾಂಕ್ ಸೌಲಭ್ಯ ತಲುಪದ ಜನರಿಗೆ ಮೊಬೈಲ್ ಫೋನ್ ಮೂಲಕವೇ ಹಣಕಾಸು ಸೇವೆ ಪಡೆಯಲು ಇದರಿಂದ ಸಹಾಯವಾಗಲಿದೆ. ಈ ಸೇವೆ ರಾಜದಾದ್ಯಂತ 2500 ವಿಶೇಷವಾಗಿ ತರಬೇತಿಗೊಳಿಸಿದ ಅಧಿಕೃತ ಏಜೆಂಟರ ಮೂಲಕ, 600 ವೊಡಾಫೋನ್‌ನ ವಿಶೇಷ ಮಳಿಗೆಗಳು ಸೇರಿದಂತೆ 30 ಜಿಲ್ಲೆಗಳ 137 ತಾಲೂಕು ವ್ಯಾಪ್ತಿಯಲ್ಲಿ ಲಭ್ಯವಾಗಲಿದೆ. ಮೊಬೈಲ್ ತಂತ್ರಜ್ಞಾನ ಬಳಸುವ ಈ ಸೌಲಭ್ಯದಿಂದ ಗ್ರಾಹಕರಿಗೆ ತ್ವರಿತಗತಿಯಲ್ಲಿ ಹಣದ ವರ್ಗಾವಣೆ, ಪಾವತಿ ಮಾಡಲು ನೆರವಾಗಲಿದೆ.




ಪ್ಲಾನೆಟ್ ಎಂನಲ್ಲಿ ಶಾಲಾ ಮಕ್ಕಳ ವಸ್ತುಗಳು ಲಭ್ಯ   
ಶಾಲಾ ಮಕ್ಕಳಿಗೆ ಅವಶ್ಯವಾದ ಉತ್ಪನ್ನಗಳನ್ನೊಳಗೊಂಡ 'ಬ್ಯಾಕ್ ಟು ಸ್ಕೂಲ್‌' ಬ್ರಾಂಡ್ ವಸ್ತುಗಳು 'ಪ್ಲಾನೆಟ್ ಎಂ'ನಲ್ಲಿ ದೊರಕಲಿದೆ. ಶಾಲಾ ಬ್ಯಾಗ್‌ಗಳು, ನೀರಿನ ಬಾಟಲಿ, ಸ್ಲಿಪ್ಪರ್, ಮ್ಯಾಗ್ನೆಟಿಕ್ ಪೆನ್ಸಿಲ್ ಬಾಕ್ಸ್, ಪೌಚ್‌ಗಳು, ಅಚ್ಚುಮೆಚ್ಚಿನ ನಾಯಕರನ್ನೊಳಗೊಂಡ ಸ್ಟೇಷನರಿ ಉತ್ಪನ್ನಗಳು ಇಲ್ಲಿ ದೊರಕಲಿವೆ. ಆಟಿಕೆಗಳು, ಮನರಂಜನೆ, ಟಿ- ಶರ್ಟ್‌ಗಳು, ಆಕ್ಸೆಸರೀಸ್, ಗೇಮಿಂಗ್ ಇತ್ಯಾದಿ ವೈವಿಧ್ಯಮಯ ಉತ್ಪನ್ನ ಶ್ರೇಣಿಗಳನ್ನು ಇದು ಒದಗಿಸಲಿದೆ. ಡಬ್ಲ್ಯೂಡಬ್ಲ್ಯೂಇ, ಸ್ಟೆಫಿ ಲವ್, ಡಿಸ್ನೀ ಪ್ರಿನ್ಸೆಸ್‌ಗಳ ಚಿತ್ರವನ್ನು ಶಾಲೆಗಳ ಬ್ಯಾಗ್‌ಗಳಲ್ಲಿ ಕಾಣಬಹುದು. ವೈವಿಧ್ಯಮಯ ಬಣ್ಣ ಮತ್ತು ವಿನ್ಯಾಸಗಳನ್ನು ಹೊಂದಿದ ಮಕ್ಕಳ ಆಕರ್ಷಣೆಯ ಕಾರ್ಟೂನ್, ಸೂಪರ್ ಹೀರೋಗಳನ್ನು ಸೃಷ್ಟಿಸಲಾಗಿದೆ. ಅವುಗಳನ್ನು ವಿವಿಧ ಆಕಾರಗಳಲ್ಲಿ ಮತ್ತು ಗಾತ್ರಗಳಲ್ಲಿ ಪೆನ್ಸಿಲ್ ಬಾಕ್ಸ್‌ಗಳು, ಪೌಚ್‌ಗಳ ಮೇಲೆ ಕುಂಗ್‌ಫು ಪಾಂಡಾ, ಸಿಂಡ್ರೆಲಾ, ಕಿಟ್ಟಿ, ಬೆನ್ 10, ಬಾರ್ಬಿ ಡೋರಾ ಇತ್ಯಾದಿ ಚಿತ್ರಗಳನ್ನು ಮೂಡಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement