ಬೆಂಗಳೂರು: ಸ್ಯಾಮ್ ಸಿಗ್ನೇಚರ್ಸ್ ಕಂಪನಿ 'ಕಾಲ್ ಬೆಂಗಳೂರು' ಎನ್ನುವ ನೂತನ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಇದರಿಂದ ನಗರದ ಯಾವುದೇ ವ್ಯಾವಹಾರಿಕ ಮಾಹಿತಿ ಪಡೆಯಬಹುದು ಹಾಗೂ ವ್ಯಾವಹಾರಿಕ ಕ್ಷೇತ್ರದ ಅಷ್ಟೂ ದೂರವಾಣಿ ಸಂಖ್ಯೆಯನ್ನು ಪಡೆಯಬಹುದು.
ಅಪ್ಲಿಕೇಷನ್‌ನ್ನು ಡೌನ್‌ಲೋಡ್ ಮಾಡಲು ಮಾತ್ರ ಇಂಟರ್‌ನೆಟ್‌ನ ಅಗತ್ಯವಿದ್ದು, ಅದಾದ ನಂತರ ಆಫ್‌ಲೈನ್‌ನಲ್ಲೇ ಉಚಿತವಾಗಿ ಮಾಹಿತಿ ಪಡೆಯಬಹುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸ್ಯಾಮ್ ಚಾಲಾ ತಿಳಿಸಿದ್ದಾರೆ.
ಕಾಲ್ ಬೆಂಗಳೂರು ಅಪ್ಲಿಕೇಷನ್ 50 ಎಂಬಿಯದ್ದಾಗಿದ್ದು, ಹೊಸ ಅಪ್‌ಡೇಟ್‌ಗಳು ಕೇವಲ 2 ಗಂಟೆಗಳಲ್ಲಿ ಮೊಬೈಲ್‌ನಲ್ಲಿ ದಾಖಲಾಗಲಿದೆ. ವೆಬ್ಸೈಟ್: www.callblr.com