ವರ್ಣರಂಜಿತ ವೈವಿಧ್ಯಮಯ ಆಧುನಿಕ ಬದುಕಿಗೆ ತೆರೆದುಕೊಂಡಿರುವ ಬೆಂಗಳೂರಿನ ಯುವ ಪೀಳಿಗೆಯ ಗೇಮಿಂಗ್ ಹುಚ್ಚನ್ನು ತಣಿಸುವ ಅದ್ಭುತ ಗೇಮಿಂಗ್ ಸ್ಟೇಶನ್ ಒಂದು ಹೊಸದಾಗಿ ತೆರೆಯಲ್ಪಟ್ಟಿದೆ. 'ಕೆಫೆ ಫನ್ನಿ ಬನ್ನಿ' ಹೆಸರಿನ ಗೇಮಿಂಗ್ ಸ್ಟೇಶನ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಶುಭಾರಂಭಗೊಂಡಿದೆ. ಈ ಗೇಮಿಂಗ್ ಸ್ಟೇಶನ್ ವೈಶಿಷ್ಟ್ಯವೆಂದರೆ ಇಲ್ಲಿ ಗೇಮ್ ಮಾತ್ರವಲ್ಲ ಅಂತರಾಷ್ಟ್ರೀಯ ಗುಣಮಟ್ಟದ ಕೆಫೆಯೂ ಇದೆ. ಜರ್ಮನಿಯ ಹೆಸರಾಂತ ಬಾಣಸಿಗ ಸಿದ್ಧಪಡಿಸಿರುವ ಇಟಾಲಿಯನ್, ಮೆಕ್ಸಿಕನ್ ತಿನಿಸುಗಳನ್ನೊಳಗೊಂಡ ಇಲ್ಲಿನ ಮೆನು, ಖಾದ್ಯಪ್ರಿಯರ ನಾಲಗೆಯನ್ನು ತಣಿಸುವುದರಲ್ಲಿ ಸಂಶಯವಿಲ್ಲ ಎಂಬುದು 'ಕೆಫೆ ಫನ್ನಿ ಬನ್ನಿ'ಯ ಮಾಲಿಕ ಮಹೇಶ್ ಸುರಸಾಗರ್ ಅವರ ಅಭಿಮತ. ಹಾಗಾಗಿ ಸ್ನೇಹಿತರೊಡನೆ ವಾರಾಂತ್ಯದಲ್ಲಿ ಆಟವಾಡುತ್ತ, ಮೋಜು- ಮಸ್ತಿ- ಖಾನಾ ಎಂದು ಉಲ್ಲಸಿತವಾಗಿ ಕಾಲ ಕಳೆಯಲು ಹೇಳಿ ಮಾಡಿಸಿದ ಸ್ಥಳ, ಕೆಫೆ ಫನ್ನಿ ಬನ್ನಿ. ಎಕ್ಸ್ ಬಾಕ್ಸ್, ಪ್ಲೇಸ್ಟೇಶನ್ ಮುಂತಾದ ಮುಂಚೂಣಿಯಲ್ಲಿರುವ ಗೇಮಿಂಗ್ ಕನ್ಸೋಲ್ ಗಳು ಇಲ್ಲಿ ಲಭ್ಯವಿದೆ. ವಿಡಿಯೋ ಗೇಮ್ಸ್ ಅಲ್ಲದೆ ಫೂಸ್ ಬಾಲ್ ಟೇಬಲ್(table football) ಕೂಡ ಇದೆ. ಮೂರು ವರ್ಷದವರಿಂದ ಹಿಡಿದು ದೊಡ್ಡವರೆಲ್ಲರಿಗೂ ಹೊಂದುವ ವಿವಿಧ ಗೇಮ್ ಗಳು ಇಲ್ಲಿವೆ. ಇಲ್ಲಿ ವಯಸ್ಸಾದವರೂ ಆಟವಾಡುತ್ತ ತಮ್ಮ ಯೌವ್ವನವನ್ನು ಮರಳಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ- 9740029203
- ಹವನ