ನವದೆಹಲಿ: ದೇಶದ ಅರ್ಥ ವ್ಯವಸ್ಥೆ ಸೇರಿ ಹಲವು ಕ್ಷೇತ್ರಗಳಲ್ಲಿ ಸುಧಾರಣೆ ಮಾಡುತ್ತಿರುವ ಮೋದಿ ಸರ್ಕಾರ ಹೊಸ ಕ್ರಮ ಜಾರಿಗೆ ಮುಂದಾಗಿದೆ.
ಇನ್ನು ಮುಂದೆ ಪ್ಯಾನ್ ಕಾರ್ಡ್ ಬೇಕಾದರೆ ದಿನಗಟ್ಟಲೆ ಕಾಯಬೇಕಾಗಿಲ್ಲ. 2 ದಿನಗಳಲ್ಲಿ ನೀಡುವಂತೆ ಮಾಡುವ ಯೋಜನೆ ಶೀಘ್ರವೇ ಅನುಷ್ಠಾನಗೊಳ್ಳಲಿದೆ. ಜನಧನ ಯೋಜನೆ ಜಾರಿಗೊಳಿಸಿದ ಮಾದರಿಯಲ್ಲಿ ಪ್ಯಾನ್ ಕಾರ್ಡ್ ನೀಡುವ ಬಗ್ಗೆ ವಿಶೇಷ ಆಂದೋಲನ ಕೈಗೊಳ್ಳಲು ಕೇಂದ್ರ ನೇರ ತೆರಿಗೆಗಳ ಮಂಡಳಿ ಮುಂದಾಗಿದೆ. ನಗರ, ಗ್ರಾಮೀಣ ಪ್ರದೇಶಗಳಲ್ಲಿ ಈ ಕ್ರಮಗಳನ್ನು ಜಾರಿ ಗೊಳಿಸಲಾಗುತ್ತದೆ.