ಮುಂಬೈ: ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ ಅತಿ ಹೆಚ್ಚು ಕುಸಿತ ಕಂಡಿದೆ. ಚೀನಾ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸಿರಿವ ಹಿನ್ನೆಲೆಯಲ್ಲಿ ಈ ಬೆಳೆವಣಿಗೆ ಕಂಡುಬಂದಿದೆ.
ಚೀನಾದ ಯಾನ್ ಅಪಮೌಲ್ಯಗೊಂದಿರುವುದು ಜಾಗತಿಕ ಮಟ್ಟದಲ್ಲಿ ಕರೆನ್ಸಿ ಯುದ್ಧದ ಭೀತಿಯನ್ನು ಸೃಷ್ಟಿಸಿದೆ. ಕುಸಿತ ಕಂಡ ಬಳಿಕ ಪ್ರತಿ ಡಾಲರ್ ಗೆ ರೂಪಾಯಿ ಮೌಲ್ಯ 64 .66 ರಷ್ಟಾಗಿದೆ. ಸೆಪ್ಟೆಂಬರ್ 2013 ರ ಬಳಿಕ ದಾಖಲಾಗಿರುವ ಗರಿಷ್ಠ ಕುಸಿತ ಇದಾಗಿದೆ. ಮಂಗಳವಾರ ಮುಕ್ತಾಯಗೊಂಡ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 64 .19 /20 ರಲ್ಲಿ ವಹಿವಾಟು ನಡೆಸುತ್ತಿತ್ತು. ಆಗಸ್ಟ್ 11 ರಂದೂ ರೂಪಾಯಿ ಮೌಲ್ಯ 32 ಪೈಸೆಯಷ್ಟು ಕುಸಿದಿತ್ತು.
ಬುಧವಾರ ಬೆಳಿಗ್ಗೆ 9 : 07 ರ ವೇಳೆಗೆ ರೂಪಾಯಿ ಮೌಲ್ಯ 64 . 65 /66 ಕ್ಕೆ ಕುಸಿದಿದೆ. ರೂಪಾಯಿ ಮೌಲ್ಯ ಕುಸಿದಿರುವ ಹಿನ್ನೆಯಲ್ಲಿ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 120 ಪಾಯಿಂಟ್ ನಷ್ಟು ಕುಸಿದಿದೆ. ದಿನದ ವಹಿವಾಟು ಪ್ರಾರಂಭವಾದಾಗ ಬಿಎಸ್ಇ ಸೆನ್ಸೆಕ್ಸ್ 27,745.39 ರಲ್ಲಿ ವಹಿವಾಟು ನಡೆಸುತ್ತಿತ್ತು.