ಮುಂಬೈ: ಗುದ್ದೋಡು ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಿರ್ದೋಷಿ ಎಂದು ಬಾಂಬೆ ಹೈಕೋರ್ಟ್ ತೀರ್ಪು ಪ್ರಕಟಿಸಿದ್ದರಿಂದ ಖಾನ್ ಸಹಯೋಗದ ಕಂಪನಿ ಮಂಧನ ಇಂಡಸ್ಟ್ರೀಸ್ ಷೇರು ದರಗಳು ಏರಿಕೆ ಕಂಡಿವೆ.
ಮುಂಬೈ ಷೇರು ಪೇಟೆಯ ಗುರುವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಮಂಧನ ಇಂಡಸ್ಟ್ರೀಸ್ ಷೇರು ದರ ಶೇ.11.65ರಷ್ಟು ಏರಿಕೆಯೊಂದಿಗೆ ರು.296ಕ್ಕೆ ತಲುಪಿತ್ತು. ಅಂತಿಮವಾಗಿ ಶೇ.2.41ರಷ್ಟು ಏರಿಕೆಯೊಂದಿಗೆ ರು.271.50ಕ್ಕೆ ಕೊನೆಗೊಂಡಿತು.
ಎರೋಸ್ ಇಂಟರ್‍ನ್ಯಾಷನಲ್ ಮೀಡಿಯಾ ಷೇರು ದರಗಳು ಸಹ ಶೇ.3.89ರಷ್ಟು ಏರಿಕೆ ಕಂಡು ರು.237.70ಕ್ಕೆ ತಲುಪಿತು.