ಮುಂಬೈ: ಅನುತ್ಪಾದಕ ಸಾಲದ ಪ್ರಮಾಣ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಮಾರ್ಚ್ ನಲ್ಲಿ ಶೇ.4.6ರಷ್ಟು ಇದ್ದದು ಸೆಪ್ಟೆಂಬರ್ ಅಂತ್ಯಕ್ಕೆ ಶೇ.5.1ಕ್ಕೆ ಏರಿದೆ.
ಆರ್‍ಬಿಐ ಬುಧವಾರ ಬಿಡುಗಡೆ ಮಾಡಿದ ಹಣಕಾಸು ಸುಸ್ಥಿರತೆ ವರದಿ (ಎಫ್ ಎಸ್‍ಆರ್)ನಲ್ಲಿ ಈ ಅಂಶವನ್ನು ಪ್ರಸ್ತಾಪಿಸಿದ್ದು ಇದು ಆತಂಕಕಾರಿ ಬೆಳವಣಿಗೆ ಎಂದಿದೆ. ಹಾಗಿದ್ದರೂ ಕಾರ್ಪೋರೇಟ್ ಸಾಲ ಪುನರ್ ರಚನೆ ನಂತರದಲ್ಲಿ ಒಟ್ಟಾರೆ ಸಾಲ ನೀಡುವ ಪ್ರಮಾಣ ಶೇ.6.4ರಿಂದ 6.2ಕ್ಕೆ ಇಳಿದರೂ ಕೆಟ್ಟ ಸಾಲಗಳ ಪ್ರಮಾಣ ಶೇ.11.1ರಿಂದ 11.3ಕ್ಕೆ ಏರಿಕೆ ಕಂಡಿದೆ ಎಂದು ವರದಿ ವಿವರಿಸಿದೆ.