ಚಿನ್ನದ ದರ ಇಳಿಕೆ (ಸಂಗ್ರಹ ಚಿತ್ರ) 
ವಾಣಿಜ್ಯ

ರು.1,000 ಕಳೆದುಕೊಂಡ ಚಿನ್ನ ದರ

ಸತತ ಮೂರನೆ ವರ್ಷ ಚಿನ್ನ ದರ ಕುಸಿತದೊಂದಿಗೆ ವರ್ಷಾಂತ್ಯ ಕಾಣುತ್ತಿದೆ. 2015ರಲ್ಲಿ ಪ್ರತಿ ಗ್ರಾಂ ಚಿನ್ನದ ದರ ರು.1,000ವರೆಗೂ ನಷ್ಟ ಕಂಡಿದೆ...

ಮುಂಬೈ: ಸತತ ಮೂರನೆ ವರ್ಷ ಚಿನ್ನ ದರ ಕುಸಿತದೊಂದಿಗೆ ವರ್ಷಾಂತ್ಯ ಕಾಣುತ್ತಿದೆ. 2015ರಲ್ಲಿ ಪ್ರತಿ ಗ್ರಾಂ ಚಿನ್ನದ ದರ ರು.1,000ವರೆಗೂ ನಷ್ಟ ಕಂಡಿದೆ.

ಹೂಡಿಕೆದಾರರ ಬೇರೆ ಬೇರೆ ಯೋಜನೆಗಳತ್ತ ಮುಖ ಮಾಡಿದ್ದ ರಿಂದ ಮತ್ತು ಕೇಂದ್ರ ಸರ್ಕಾರ ಚಿನ್ನದ ಸ್ಕೀಂಗಳನ್ನು ಅನುಷ್ಠಾನಕ್ಕೆ ತಂದಿದ್ದ ರಿಂದ ಚಿನ್ನ ಬೇಡಿಕೆ ಕಳೆದುಕೊಂಡಿತು. ಅಂದರೆ  ಚಿನ್ನ ಒಟ್ಟಾರೆ ಶೇ.5ರಷ್ಟು ನಷ್ಟ ಕಂಡಿದೆ. ಬೆಳ್ಳಿ ಪರಿಸ್ಥಿತಿಯೂ ಉತ್ತಮವಾಗಿಲ್ಲ. ಈ ವರ್ಷ ಬೆಳ್ಳಿ ದರ ಶೇ.8ರಷ್ಟು ನಷ್ಟದೊಂದಿಗೆ ವರ್ಷ ಮುಗಿಸಲಿದೆ. ರುಪಾಯಿ ಮೌಲ್ಯ ಅತಿ ಹೆಚ್ಚಿನ  ಏರಿಳಿತದಿಂದ ಕೂಡಿದ್ದರಿಂದ ಮತ್ತು ಅಮೆರಿಕದ ಫೆಡರಲ್ ಬ್ಯಾಂಕ್ ಏಳು ವರ್ಷಗಳ ನಂತರ ಬಡ್ಡಿದರ ಹೆಚ್ಚಿಸಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಡೀ ವರ್ಷ ಚಿನ್ನ ಮತ್ತು ಬೆಳ್ಳಿ ದರಗಳು  ಏಳು ಬೀಳು ಕಂಡವು.

ಜಾಗತಿಕ ಆರ್ಥಿಕತೆಯಲ್ಲಿ ಕಂಡುಬಂದ ಹಿಂಜರಿತದಿಂದಲೂ ಚಿನ್ನಕ್ಕೆ ಬೇಡಿಕೆ ಇಳಿಮುಖ ಕಂಡಿದ್ದು ದರ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಷೇರು ಪೇಟೆಗಳಲ್ಲಿ ಸ್ವಲ್ಪ  ಚೇತರಿಕೆ ಕಂಡಿದ್ದು ಹೂಡಿಕೆದಾರರನ್ನು ಅತ್ತ ಆಕರ್ಷಿಸಿತು. ಚಾಲ್ತಿ ಖಾತೆ ಕೊರತೆ ಕಡಿಮೆಗೊಳಿಸಲು ಚಿನ್ನದ ಆಮದಿನ ಮೇಲೆ ಪದೇ ಪದೇ ಮಿತಿ ಹೇರುತ್ತಿದ್ದದು ಮತ್ತು ಮನೆ, ದೇವಸ್ಥಾನಗಳಲ್ಲಿ  ಇಟ್ಟು ಕೊಂಡಿರುವ ಚಿನ್ನವನ್ನು ಹೊರತರಲು ಜಾರಿಗೆ ತಂದ ಚಿನ್ನದ ಯೋಜನೆಗಳು ತುಸು ವ್ಯತಿರಿಕ್ತ ಪರಿಣಾಮ ಬೀರಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮುಸ್ಲಿಮರು ಕಾಫಿರರೊಂದಿಗೆ ಸ್ನೇಹ ಬೆಳೆಸಬಾರದು’: ಭಾರತ-ಅಫ್ಘಾನ್ ಗೆಳತನಕ್ಕೆ Pak ಅಸೂಯೆ, Quran ಉಲ್ಲೇಖಿಸಿ ವಿಷ ಕಾರಿದ ಸೇನಾ ವಕ್ತಾರ..!

Iran ಮೇಲಿನ ದಾಳಿ ತಡೆಗೆ ಗಲ್ಫ್ ರಾಷ್ಟ್ರಗಳ ಸಲಹೆಯೇ ಪ್ರಮುಖ ಕಾರಣ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಾಯಕರಿಗಿಂತ ಹೆಚ್ಚಾಗಿ ಸ್ಟಾಲಿನ್ ಮಾತು ಕೇಳ್ತಾರೆ; ಕಾವೇರಿ ಜಲ ವಿವಾದದ ನಡುವೆ ತಮಿಳುನಾಡು ಸಚಿವ ಆರೋಪ!

ಖೈಬರ್ ಪಖ್ತುಂಖ್ವಾದಲ್ಲಿ "ಶಾಂತಿ ರ‍್ಯಾಲಿ"ಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ; 13 ಸಾವು

ರಸ್ತೆಗೆ ತಂದು ರಾಮಲಲ್ಲಾನಿಗೆ ಅಪಮಾನ: ಸಂಸದ ಪಪ್ಪು ಯಾದವ್ ಹತ್ಯೆಗೆ ಯತ್ನ ಆರೋಪ, Video!