ವಾಣಿಜ್ಯ

ಸಿಂಡಿಕೇಟ್ ಬ್ಯಾಂಕ್ ನಿವ್ವಳ ಲಾಭ ಶೇ.20ರಷ್ಟು ಕುಸಿತ

Srinivasamurthy VN

ಬೆಂಗಳೂರು: ಕಳೆದ ತ್ರೈಮಾಸಿಕ ವರ್ಷಕ್ಕೆ ಹೋಲಿಸಿದರೆ ಸಿಂಡಿಕೇಟ್ ಬ್ಯಾಂಕ್‍ನ ನಿವ್ವಳ ಲಾಭ ಪ್ರಸಕ್ತ ಸಾಲಿನಲ್ಲಿ ಶೇ.20ರಷ್ಟು ಕಡಿಮೆಯಾಗಿದೆ ಎಂದು ಬ್ಯಾಂಕ್‍ನ ಕಾರ್ಯಕಾರಿ ನಿರ್ದೇಶಕ ಟಿ. ಕೆ.ಶ್ರೀವತ್ಸ ತಿಳಿಸಿದರು.

ದೇಶದ ಜಿಡಿಪಿ ಕುಸಿತವಾಗಿದೆ. ಅದು ಬ್ಯಾಂಕ್‍ನ ನಿವ್ವಳ ಲಾಭದ ಮೇಲೂ ಪ್ರಭಾವ ಬೀರಿದೆ. 2013-14ನೇ ಸಾಲಿನ ತ್ರೈಮಾಸಿಕ ವರ್ಷದಲ್ಲಿ ರು380 ಕೋಟಿಗಳಿದ್ದ ನಿವ್ವಳ ಲಾಭ
2014-15ರಲ್ಲಿ ರು.305 ಕೋಟಿಯಷ್ಟಕ್ಕೆ ಇಳಿಕೆಯಾಗಿದೆ. ಆದರೆ, ಜಾಗತಿಕ ಠೇವಣಿಯಲ್ಲಿ ಶೇ. 29ರಷ್ಟು ಹೆಚ್ಚಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಮಾರ್ಚ್- ಡಿಸೆಂಬರ್‍ನಲ್ಲಿ ಬ್ಯಾಂಕ್‍ನ ವಹಿವಾಟು ರು. 4,38,099 ಕೋಟಿಯಷ್ಟಿದೆ.

ವಿಶ್ವದೆಲ್ಲೆಡೆ 3463 ಶಾಖೆಗಳಿದ್ದು, ದೇಶದ ಗ್ರಾಮೀಣ ಭಾಗದಲ್ಲಿ 1125 ಶಾಖೆಗಳನ್ನು ಹೊಂದಿದೆ. ಅರೆ ನಗರ ಪ್ರದೇಶಗಳಲ್ಲಿ 906 ಶಾಖೆಗಳು, ನಗರಗಳಲ್ಲಿ 772 ಹಾಗೂ ಮಹಾನಗರ ಗಳಲ್ಲಿ 659 ಶಾಖೆಗಳಿವೆ ಎಂದು ಮಾಹಿತಿ ನೀಡಿದರು. ಜಿಡಿಪಿ ಶೇ 8.2 ರಿಂದ ಶೇ 7.5ಕ್ಕೆ ಕುಸಿತ ಅನುಭವಿಸಿದೆ. ಇದರಿಂದ ಬ್ಯಾಂಕಿಂಗ್, ಇತರೆ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕರಾದ ಅತುಲ್ ಕುಮಾರ್, ಪ್ರೀತಂಲಾಲ್, ಐ.ಪಿ.ನಾಗರಾಜ, ವಿನಾಯಕ ಭಟ್, ಸಂತೋಷ್ ರಾವತ್ ಉಪಸ್ಥಿತರಿದ್ದರು.

SCROLL FOR NEXT