ವಾಣಿಜ್ಯ

ಮತ್ತೆ ಬರಲಿದೆ ಒಂದು ರುಪಾಯಿ ನೋಟು

Rashmi Kasaragodu

ದಿಲ್ಲಿ: 20 ವರ್ಷಗಳ ನಂತರ ಒಂದು ರುಪಾಯಿ ನೋಟು ಮತ್ತೆ ಚಲಾವಣೆಗೆ ಬರುತ್ತಿದೆ. ಒಂದು ರುಪಾಯಿಯ ಕರೆನ್ಸಿ ನೋಟನ್ನು ಮತ್ತೆ ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ.

ಹೊಸ ನೋಟು ಗುಲಾಬಿ ಹಾಗು ಹಸಿರು ಬಣ್ಣದ್ದಾಗಿರುವುದು.

1994ರಲ್ಲಿ ರಿಸರ್ವ್ ಬ್ಯಾಂಕ್ ಒಂದು ರುಪಾಯಿ ನೋಟು ಮುದ್ರಣವನ್ನು ನಿಲ್ಲಿಸಿತ್ತು. ಕರೆನ್ಸಿ ನೋಟುಗಳನ್ನು ಮುದ್ರಿಸುವುದಕ್ಕೆ ಖರ್ಚು ಹೆಚ್ಚಾದ ಕಾರಣ ಮುದ್ರಣವನ್ನು ನಿಲ್ಲಿಸಲಾಗಿತ್ತು.

ಹೊಸ ನೋಟು ಹಳೆಯ ಒಂದು ರುಪಾಯಿ ನೋಟಿನಂತೆಯೇ ಇರಲಿದ್ದು, ಇಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್‌ನ ಸಹಿ ಬದಲು ವಿತ್ತ ಕಾರ್ಯದರ್ಶಿಯ ಸಹಿ ಇರುತ್ತದೆ.

SCROLL FOR NEXT