ನವದೆಹಲಿ: ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯು ಬರೋಬ್ಬರಿ ರು. 1,250 ಕೋಟಿ (200 ದಶಲಕ್ಷ ಡಾಲರ್) ಮೊತ್ತಕ್ಕೆ ಅಮೆರಿಕ ಮೂಲದ ಪನಾಯಾ ಕಂಪನಿಯನ್ನು ಖರೀದಿಸಿದೆ. ಸೆ. 2012ರಲ್ಲಿ ಜ್ಯೂರಿಕ್ ಮೂಲದ ಲೋಡ್‍ಸ್ಟೋನ್ ಕಂಪನಿಯ ಖರೀದಿಯ ಬಳಿಕ ಇನ್ಫೋಸಿಸ್ ಮಾಡುತ್ತಿರುವ ಎರಡನೇ ಅತಿ ದೊಡ್ಡ ಸ್ವಾಧೀನ ಇದಾಗಿದೆ. ಈ ಮೂಲಕ ತನ್ನ ಪ್ರತಿಸ್ಪರ್ಧಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)ಗೆ ಪ್ರಬಲ ಪೈಪೋಟಿ ನೀಡಲು ಇನ್ಫಿ ಮುಂದಾಗಿದೆ. ನ್ಯೂಜೆರ್ಸಿ ಮೂಲದ ಪನಾಯ್ ಕಂಪನಿಯು ಉದ್ಯಮ ಅಪ್ಲಿಕೇಷನ್‍ಗಳಿಗೆ ಕ್ಲೌಡ್ ಆಧರಿತ ಗುಣಮಟ್ಟ ನಿರ್ವಹಣಾ ಸೇವೆಯನ್ನು ಒದಗಿಸುತ್ತಿದೆ.
ಕೋಕಾ-ಕೋಲಾ, ಮರ್ಸಿಡಿಸ್ ಬೆನ್ಝ್, ಯೂನಿಲಿವರ್ ಸೇರಿದಂತೆ ಅನೇಕ ಖ್ಯಾತ ಕಂಪನಿಗಳು ಪನಾಯಾ ದ ಕ್ಲೈಂಟ್‍ಗಳಾಗಿವೆ. ಈಗ ಈ ಕಂಪನಿಯನ್ನು ಇನ್ಫೋಸಿಸ್ ಖರೀದಿಸಿದ್ದು, ಪೂರ್ಣ ನಗದು ಡೀಲ್ ಮಾರ್ಚ್ 31ರಂದು ನಡೆಯಲಿದೆ.