ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಇಳಿಕೆ ಮುಂದುವರೆದಿದ್ದು, ಭಾರತದ ಷೇರುಮಾರುಕಟ್ಟೆಯ ಮೇಲೂ ಅದರ ಪರಿಣಾಮ ಬೀರಿದೆ.
ಮಂಗಳವಾರದ ಮಧ್ಯಾಹ್ನ ಷೇರುಮಾರುಕಟ್ಟೆಯ ವಹಿವಾಟು ಆರಂಭವಾಗುತ್ತಿದ್ದಂತೆಯೇ ಬಿಎಸ್ಇ ಸೆನ್ಸೆಕ್ಸ್ಸ ಕುಸಿತ ಕಂಡಿದ್ದು, ಸುಮಾರು 573 ಅಂಕಗಳನ್ನು ಕಳೆದುಕೊಂಡಿದೆ. ಆ ಮೂಲಕ ಸೆನ್ಸೆಕ್ಸ್ ಒಟ್ಟು 27, 268. 99ಕ್ಕೆ ಸ್ಥಿರವಾಗಿದೆ. ನಿಫ್ಟಿಯಲ್ಲೂ ಕೂಡ ಇದೇ ರೀತಿಯ ಪರಿಣಾಮ ಮುಂದುವರೆದಿದ್ದು, 45.58 ಅಂಕಗಳ ಇಳಿಕೆ ಕಂಡಿದೆ. ಷೇರುಮಾರುಕಟ್ಟೆಯ ಏರಿಳಿತಗಳ ನಡುವೆಯೇ ಇತ್ತ ಡಾಲರ್ ಎದುರು ರುಪಾಯಿ ಅಲ್ಪ ಚೇತರಿಕೆ ಕಂಡಿದ್ದು, ರುಪಾಯಿ ಮೌಲ್ಯ 6 ಪೈಸೆಯಷ್ಟು ಏರಿಕೆಯಾಗಿದೆ.
ಇನ್ನು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ನ ತೈಲದ ಬೆಲೆಯಲ್ಲಿ 50 ಡಾಲರ್ ಇಳಿಕೆಯಾಗಿದ್ದು, ತೈಲ ಬೆಲೆ ಕುಸಿತ ಮುಂದುವರೆದಿದೆ. ಇನ್ನು ಯೂರೋಪಿಯನ್ ಷೇರುಮಾರುಕಟ್ಟೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಮುಂದುವರೆದಿದ್ದು, ಇದು ಕೂಡ ಷೇರುಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.