ಮೂರು ಕಂಪನಿಗಳೊಂದಿಗೆ ಫ್ಲಿಪ್ಕಾರ್ಟ್ ಪಾಲುದಾರಿಕೆ
ಪ್ರಮುಖ ಗೃಹೋಪಯೋಗಿ ಸಾಧನಗಳ ಮಾರಾಟ ಕಂಪನಿಗಳಾದ ಹೋಮ್ ಟೌನ್, ಹೋಮ್ ಸ್ಟಾಪ್ ಮತ್ತು ಅಟ್ ಹೋಮ್ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿ ಕೊಂಡಿರುವುದಾಗಿ ದೇಶದ ಪ್ರಮುಖ ಆನ್ಲೈನ್..
ಬೆಂಗಳೂರು: ಪ್ರಮುಖ ಗೃಹೋಪಯೋಗಿ ಸಾಧನಗಳ ಮಾರಾಟ ಕಂಪನಿಗಳಾದ ಹೋಮ್ ಟೌನ್, ಹೋಮ್ ಸ್ಟಾಪ್ ಮತ್ತು ಅಟ್ ಹೋಮ್ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿ ಕೊಂಡಿರುವುದಾಗಿ ದೇಶದ ಪ್ರಮುಖ ಆನ್ಲೈನ್ ವಹಿವಾಟು ಕಂಪನಿ ಫ್ಲಿಪ್ಕಾರ್ಟ್ ಹೇಳಿದೆ.
ಈ ಕಂಪನಿಗಳ ಎಲ್ಲ ಉಪಕರಣಗಳು ಇನ್ನು ಮುಂದೆ ಫ್ಲಿಪ್ಕಾರ್ಟ್ನಲ್ಲಿ ಖರೀದಿಸಬಹುದಾಗಿದೆ. ಫ್ಲಿಪ್ ಕಾರ್ಟ್ನಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ಬ್ರಾಂಡ್ಗಳ 7 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳು ಸಿಗಲಿವೆ. ಗೃಹೋಪಯೋಗಿ ಉತ್ಪನ್ನಗಳ ಪ್ರಮುಖ ಬ್ರಾಂಡ್ಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದರಿಂದ ಕಂಪನಿಯ ಗ್ರಾಹಕರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಫ್ಲಿಪ್ ಕಾರ್ಟ್ ನ ಮುಖ್ಯ ವಹಿವಾಟು ಅಧಿಕಾರಿ ಅಂಕಿತ್ ನಗೋರಿ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.