ದೇಶದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ವೆಲ್-ಎಕ್ಸ್ ವರದಿ ತಿಳಿಸಿದೆ. 
ವಾಣಿಜ್ಯ

4.37 ಲಕ್ಷ ಶತ ಕೋಟ್ಯಧಿಪತಿಗಳು

ದೇಶದಲ್ಲಿನ ಕೋಟ್ಯಧಿಪತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಮುಂದಿನ ಮೂರು ವರ್ಷಗಳೊಳಗೆ ಈ ಸಂಖ್ಯೆ 4.37 ಲಕ್ಷಕ್ಕೆ ಹೆಚ್ಚಲಿದೆ ಎಂದು ಅಧ್ಯಯನವೊಂದು ಹೇಳಿದೆ...

ನವದೆಹಲಿ: ದೇಶದಲ್ಲಿನ ಕೋಟ್ಯಧಿಪತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಮುಂದಿನ ಮೂರು ವರ್ಷಗಳೊಳಗೆ ಈ ಸಂಖ್ಯೆ 4.37 ಲಕ್ಷಕ್ಕೆ ಹೆಚ್ಚಲಿದೆ ಎಂದು ಅಧ್ಯಯನವೊಂದು ಹೇಳಿದೆ. 2023ರ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗಲಿದೆ ಎಂತಲೂ ಹೇಳಲಾಗಿದೆ.

ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಅತಿ ಶ್ರೀಮಂತರ ಸಂಖ್ಯೆ ಅತಿ ವೇಗವಾಗಿ ಹೆಚ್ಚಲಿದ್ದು ಸಂಪತ್ತು ಸೃಷ್ಟಿಯಲ್ಲಿ `ಭಾರತದ ದಶಕ'ವಾಗಲಿದೆ ಎಂದು ವಿವರಿಸಿದೆ.

ಅನಾದಿ ಕಾಲದಿಂದಲೂ ಮುಂದುವರೆದಿರುವ ಜಾತಿ ವ್ಯವಸ್ಥೆ ಆದಾಯ ಮತ್ತು ಸಂಪತ್ತು ಗಳಿಕೆಯಲ್ಲಿ ಭಾರೀ ಅಂತರವನ್ನು ಸೃಷ್ಟಿಸಿದೆ ಎಂದಿರುವ ವೆಲ್ತ್-ಎಕ್ಸ್ ಅಧ್ಯಯನ, ಬ್ರೆಜಿಲ್ ಮತ್ತು ಚೀನಾದಂತಹ ಅತಿ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ದೇಶಗಳಲ್ಲಿ ಸಾಮಾಜಿಕ ಅಸಮಾನತೆ ಅಥವಾ ಮಿತವ್ಯಯ ಕಾರ್ಯಯೋಜನೆಗಳು ಖರೀದಿ ಶಕ್ತಿಯನ್ನು ಕುಂದಿಸಿವೆ ಎಂದು ಹೇಳಿದೆ. ಭಾರತದಲ್ಲಿನ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸುಧಾರಣೆಗಳ ಪರವಾಗಿರುವುದು ದೇಶದಲ್ಲಿನ ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಹೆಚ್ಚು ಮುನ್ನೋಟವನ್ನು ನೀಡಿದೆ ಎಂದಿದ್ದಾರೆ.

ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಮಾತ್ರವೇ ಡಾಲರ್ ಮೌಲ್ಯದಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆ 1.96 ಲಕ್ಷದಿಂದ 2.50 ಲಕ್ಷಕ್ಕೆ ಏರಿದೆ. ಅಂದರೆ ಶೇ 27ರಷ್ಟು ಏರಿಕೆ ದಾಖಲಿಸಿದೆ.

ಇದೇ ಹಾದಿಯಲ್ಲಿ ಸಾಗಿದರೆ ಮುಂದಿನ ದಿನಗಳಲ್ಲಿ ಭಾರತ ಹೊಸ ಶತಕೋಟ್ಯಧಿಪತಿಗಳನ್ನು ಹುಟ್ಟುಹಾಕಲಿದೆ. 2018ರ ವೇಳೆಗೆ ಈ ಸಂಖ್ಯೆ 4.37 ಲಕ್ಷ ತಲುಪಲಿದೆ ಎಂದು `ಡಿ ಕೇಡ್ಸ್ ಆಫ್ ವೆಲ್ತ್: ದಿ ನೆಕ್ಸ್ಟ್ 10 ಇಯರ್ಸ್ ಇನ್ ವೆಲ್ತ್ ಅಂಡ್ ಲಕ್ಸುರಿ' ವರದಿಯಲ್ಲಿ ವೆಲ್ತ್ -ಎಕ್ಸ್ ಹೇಳಿದೆ. 2023ರ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗಲಿದೆ ಎಂತಲೂ ಹೇಳಿವೆ. ಭಾರತದ ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿಯೂ ಶತಕೋಟ್ಯಧಿಪತಿಗಳ ಸಂಖ್ಯೆ ಏರಲಿದೆ.

ಸದ್ಯ ಭಾರತದ ದಶಕಕ್ಕೆ ಪ್ರವೇಶಿಸುತ್ತಿದ್ದೇವೆ ಎಂದಿರುವ ವೆಲ್ತ್-ಎಕ್ಸ್, ಕಳೆದೊಂದು ವರ್ಷದಲ್ಲಿ ಹೆಚ್ಚಿದ ಭಾರತದ ಸಂಪತ್ತು ಮತ್ತು ಕೋಟ್ಯಾಧಿಪತಿಗಳ ಸಂಖ್ಯೆ ಉತ್ತೇಜನಕಾರಿಯಾಗಿದೆ. ಸಂಪತ್ತು ಹೆಚ್ಚುತ್ತಿರುವುದು ಅವರು ಖರೀದಿ ಮಾಡುವ ಬ್ರಾಂಡ್ ಗಳ ಮೇಲೆ ಪರಿಣಾಮ ಬೀರಿರುವುದು ಮಾತ್ರವಲ್ಲ, ತಾವು ಏನು ಖರೀದಿಸಬೇಕೆಂಬುದರ ಮೇಲೂ ಬೀರಿದೆ ಎಂದು ವರದಿ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!