ಟಾಟಾ ಕನ್ಸಲ್ ಟೆನ್ಸಿ ಸರ್ವಿಸಸ್ ಮುಖ್ಯಸ್ಥ ಚಂದ್ರಶೇಖರನ್ 
ವಾಣಿಜ್ಯ

ಟಿಸಿಎಸ್ ಮುಖ್ಯಸ್ಥರ ವೇತನ ಬರೋಬ್ಬರಿ 21 ಕೋಟಿ..!

ದೇಶದ ಖ್ಯಾತ ಟಾಟಾ ಕನ್ಸಲ್ ಟೆಂಟ್ ಸರ್ವಿಸಸ್ ಸಂಸ್ಥೆಯ ಮುಖ್ಯಸ್ಥನ ವೇತನ ಎಷ್ಟಿರಬಹುದು 1 ಕೋಟಿ, 2 ಕೋಟಿ ಅಥವಾ 5 ಕೋಟಿ...

ಮುಂಬೈ: ದೇಶದ ಖ್ಯಾತ ಟಾಟಾ ಕನ್ಸಲ್ ಟೆನ್ಸಿ ಸರ್ವಿಸಸ್ ಸಂಸ್ಥೆಯ ಮುಖ್ಯಸ್ಥರ ವೇತನ ಎಷ್ಟಿರಬಹುದು 1 ಕೋಟಿ, 2 ಕೋಟಿ ಅಥವಾ 5 ಕೋಟಿ...

ಇದು ನಿಮ್ಮ ಊಹೆಯಾಗಿದ್ದರೆ ಖಂಡಿತ ನಿಮ್ಮ ಊಹೆ ತಪ್ಪು. ಹೌದು ಟಾಟಾ ಕನ್ಸಲ್ ಟೆನ್ಸಿ ಸರ್ವಿಸಸ್ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರನ್ ಅವರ ವಾರ್ಷಿಕ ವೇತನ ಬರೋಬ್ಬರಿ 21.28 ಕೋಟಿ ರು. ಇತ್ತೀಚೆಗೆ ಟಿಸಿಎಸ್ ಸಂಸ್ಥೆ ತನ್ನ ನೌಕರರ ವೇತನದಲ್ಲಿ ಶೇ.14ರಷ್ಟು ಹೆಚ್ಚಳ ಮಾಡಿದ್ದು, ಪ್ರಸ್ತುತ ಚಂದ್ರಶೇಖರನ್ ಅವರ 2014-15 ರ ಸಾಲಿನ ವಾರ್ಷಿಕ ವೇತನ ಬರೋಬ್ಬರಿ 21.28 ಕೋಟಿ ರು.ಗೆ ಏರಿಕೆಯಾಗಿದೆ. 2013-14ರ ಸಾಲಿನ ಅವಧಿಯಲ್ಲಿ ಚಂದ್ರಶೇಖರನ್ ಅವರು 18.68 ಕೋಟಿ ವೇತನ ಪಡೆದಿದ್ದರು.

ಸಂಸ್ಥೆಯ ವಾರ್ಷಿಕ ಆದಾಯ ವರದಿಯ ಪ್ರಕಾರ ಚಂದ್ರಶೇಖರನ್ ಅವರು ವೇತನದ ಮೂಲಕ 1.79 ಕೋಟಿ, ಇನಾಮು ಮೌಲ್ಯದ ಅಡಿಯಲ್ಲಿ 2.62 ಕೋಟಿ ಮತ್ತು ಸಂಸ್ಥೆ ನೀಡುವ ವಿವಿಧ ವಿಭಾಗದ ಕಮಿಷನ್ ಅಡಿಯಲ್ಲಿ 16 ಕೋಟಿ ರು. ಪಡೆದಿದ್ದಾರೆ. ಇತರೆ ಅಲೋವನ್ಸಸ್ ಗಳ ಅಡಿಯಲ್ಲಿ 86.61 ಲಕ್ಷ ಪಡೆದಿದ್ದಾರೆ ಎಂದು ಸಂಸ್ಥೆಯ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಇದಲ್ಲದೆ ಚಂದ್ರಶೇಖರನ್ ಅವರು 88,528 ಷೇರುಗಳನ್ನು ಟಾಟಾ ಸಮೂಹದಲ್ಲಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ದುಬಾರಿ ವೇತನ ಪಡೆಯುವ ಭಾರತೀಯ ಉಧ್ಯಮಿಗಳ ಪಟ್ಟಿ ದೊಡ್ಡದೇ ಇದ್ದು, 2014ರ ಜೂನ್ 14ರಂದು ಇನ್ಫೋಸಿಸ್ ನಿರ್ದೇಶಕರಾಗಿ ನೇಮಕಗೊಂಡಿದ್ದ ವಿಶಾಲ್ ಸಿಕ್ಕಾ ಅವರ ವೇತನ ಕೂಡ ಸುಮಾರು ಶೇ.33 ರಷ್ಟು ಏರಿಕೆಯಾಗಿದ್ದು, ಪ್ರಸ್ತುತ 2014-15ರ ವಾರ್ಷಿಕ ಹಣಕಾಸಿನ ವರ್ಷದಲ್ಲಿ ಅವರು 1.46 ಮಿಲಿಯನ್ ಡಾಲರ್ (9.3 ಕೋಟಿ) ವೇತನ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT