ವಾಣಿಜ್ಯ

ಚಿಲ್ಲರೆ ಹಣದುಬ್ಬರ ಶೇ.5.01ಕ್ಕೇರಿಕೆ

Rashmi Kasaragodu

ನವದೆಹಲಿ: ಹಣ್ಣು, ತರಕಾರಿಗಳ ದರ ಕಡಿಮೆಯಾದರೂ, ದ್ವಿದಳ ಧಾನ್ಯಗಳ ಬೆಲೆ ಹೆಚ್ಚಿದ ಪರಿಣಾಮ ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರ ಏರಿಕೆಯಾಗಿದೆ. ಏಪ್ರಿಲ್ ನಲ್ಲಿ ಶೇ.4.87ರಷ್ಟಿದ್ದ ಗ್ರಾಹಕ ದರ ಸೂಚ್ಯಂಕ ಆಧರಿತ ಹಣದುಬ್ಬರ ಮೇ ತಿಂಗಳಲ್ಲಿ ಶೇ.5.01 ಆಗಿತ್ತು ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ. 2014ರ ಮೇ ತಿಂಗಳಲ್ಲಿ ಹಣದುಬ್ಬರ ಶೇ.8.33 ಆಗಿತ್ತು. ಇದೇ ವೇಳೆ, ಏಪ್ರಿಲ್‍ನಲ್ಲಿ ಕೈಗಾರಿಕಾ ಉತ್ಪಾದನೆ ಶೇ.4.1ರಷ್ಟಾಗಿದ್ದು, ಇದು 2 ತಿಂಗಳಲ್ಲೇ ಆದ ಅತ್ಯಧಿಕ ಏರಿಕೆ ಎಂದು ಸರ್ಕಾರ ತಿಳಿಸಿದೆ. ಉತ್ಪಾದನಾ ವಲಯದ ಪ್ರಗತಿ ಹೆಚ್ಚಾಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

SCROLL FOR NEXT