ಬೆಂಗಳೂರು-ಮಧುರೆ ಮಧ್ಯೆ ಏರ್ಪೆಗಾಸಸ್
ಬೆಂಗಳೂರು-ಮಧುರೈ ನಡುವೆ ಜೂನ್ 26 ಶುಕ್ರವಾರದಿಂದ ವಿಮಾನ ಹಾರಾಟ ಆರಂಭಿಸುವುದಾಗಿ ವಿಮಾನಯಾನ ಸೇವಾ ಕಂಪನಿ ಏರ್ಪೆಗಾಸಸ್ ಹೇಳಿದೆ.
ಮಧುರೈ: ಬೆಂಗಳೂರು-ಮಧುರೈ ನಡುವೆ ಜೂನ್ 26 ಶುಕ್ರವಾರದಿಂದ ವಿಮಾನ ಹಾರಾಟ ಆರಂಭಿಸುವುದಾಗಿ ವಿಮಾನಯಾನ ಸೇವಾ ಕಂಪನಿ ಏರ್ಪೆಗಾಸಸ್ ಹೇಳಿದೆ.
66 ಆಸನ ಸಾಮರ್ಥ್ಯದ ಎಟಿಆರ್ 72-500 ವಿಮಾನ ದೇವಸ್ಥಾನಗಳ ನಗರ ಮತ್ತು ಐಟಿ ನಗರದ ನಡುವೆ ಸಂಚರಿಸಲಿದೆ ಎಂದು ಕಂಪನಿ ನಿರ್ದೇಶಕ ಅಶ್ವಿನ್ ಥಾಮಸ್ ಹೇಳಿದ್ದಾರೆ. ಬೆಳಗ್ಗೆ 10.40ಕ್ಕೆ ಬೆಂಗಳೂರಿನಿಂದ ಹೊರಡಲಿರುವ ವಿಮಾನ 12 ಗಂಟೆಗೆ ಮಧುರೈ ತಲುಪಲಿದೆ. 12.30ಕ್ಕೆ ಮಧುರೈನಿಂದ ಹೊರಟು 1.50ಕ್ಕೆ ಬೆಂಗಳೂರು ತಲುಪಲಿದೆ. ಏಪ್ರಿಲ್ನಲ್ಲಿ ಸೇವೆ ಅರಂಭಿಸಿದ ಮೂರು ತಿಂಗಳಲ್ಲಿ ಕಂಪನಿ ದಕ್ಷಿಣ ಭಾರತದ ನಾಲ್ಕನೆ ನಗರಕ್ಕೆ ತನ್ನ ಸೇವೆಯನ್ನು ವಿಸ್ತರಿಸಿದೆ. ಇದಕ್ಕೂ ಮೊದಲು ಹುಬ್ಬಳ್ಳಿ, ತಿರುವನಂತಪುರಂ ಮತ್ತು ಕಡಪ ನಡುವೆ ಸೇವೆ ಆರಂಭಿಸಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.