ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಡಿಜಿಟಲ್ ಆರ್ಥಿಕ ವ್ಯವಸ್ಥೆಯಲ್ಲಿ ಸಬಲೀಕರಿಸಲು ಅಮೆಜಾನ್ amazonbusiness.in ತನ್ನ ಸದಸ್ಯರಿಗೆ ಮಾತ್ರ ಬಿ2ಬಿ ವೆಬ್‍ಸೈಟ್ ಆರಂಭಿಸಿದೆ.
ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಈ ವೆಬ್‍ಸೈಟ್ ಅವಕಾಶ ಮಾಡಿಕೊಡುತ್ತದೆ. ಸಣ್ಣ ಕಚೇರಿಗಳು, ದಿನಸಿ ಅಂಗಡಿಗಳು, ಔಷಧದ ಅಂಗಡಿಗಳು, ಆಸ್ಪತ್ರೆಗಳು, ಹೋಟೆಲ್‍ಗಳು, ರೆಸ್ಟೋರೆಂಟ್ ಮತ್ತಿತರ ವಹಿವಾಟುದಾರರಿಗೆ ಪ್ರಸ್ತುತ ನೋಂದಣಿಯ ಅವಕಾಶವಿದೆ. ಉದ್ಯಮಗಳು ಉಚಿತವಾಗಿ ನೋಂದಣೆ ಮಾಡಿಕೊಳ್ಳಬಹುದಲ್ಲದೇ ಕೇವಲ ರು.1 ಸಾವಿರಗಳಷ್ಟು ಕಡಿಮೆ ದರದ ಉತ್ಪನ್ನಗಳ ಖರೀದಿಗೂ ಅವಕಾಶವಿದೆ.