ರಘುರಾಂ ರಾಜನ್ 
ವಾಣಿಜ್ಯ

ಕೇಂದ್ರ ಸರ್ಕಾರದ ನಿರೀಕ್ಷೆಗಳು ಅವಾಸ್ತವಿಕ: ರಾಜನ್

ಕಳೆದ ವರ್ಷ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ನಿರೀಕ್ಷೆಗಳು ‘ಬಹುಶಃ ಅವಾಸ್ತವಿಕ’ ಎನಿಸಿದ್ದವು.

ನ್ಯೂಯಾರ್ಕ್: ಕಳೆದ ವರ್ಷ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ನಿರೀಕ್ಷೆಗಳು ‘ಬಹುಶಃ ಅವಾಸ್ತವಿಕ’ ಎನಿಸಿದ್ದವು. ಆದರೆ ಸರ್ಕಾರ ಹೂಡಿಕೆಯ ವಾತಾವರಣ ಸೃಷ್ಟಿಸಲು ಕ್ರಮಕೈಗೊಂಡಿದೆ ಎಂದು ರಿಸರ್ವ್ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್ ಅವರು ಹೇಳಿದ್ದಾರೆ.

'ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್‌' ಉದ್ದೇಶಿಸಿ ಮಾತನಾಡಿದ ಬಳಿಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಜನ್, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಹೊಸ ಸರ್ಕಾರ ಭಾರಿ ನಿರೀಕ್ಷೆಗಳನ್ನು ಹೊಂದಿತ್ತು. ಆದರೆ ಯಾವುದೇ ಸರ್ಕಾರಕ್ಕೆ ಆ ಮಟ್ಟಿಗಿನ ನಿರೀಕ್ಷೆಗಳು ಪೂರೈಸಲು ಸಾಧ್ಯವಿಲ್ಲ ಎಂದು ತಮಗನಿಸಿತ್ತು ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಜನ ಹೇಗೆ ಭಾವಿಸಿದ್ದರು ಎಂದರೆ, ಮಾರುಕಟ್ಟೆ ವಿರೋಧಿ ಶಕ್ತಿಗಳ ಸಂಹಾರಕ್ಕೆ ‘ಬಿಳಿ ಕುದುರೆ ಸವಾರಿ ಮಾಡಿ ಬರುವ ರೊನಾಲ್ಡ್‌ ರೇಗನ್‌’ ಅವರಂತೆ ಮನಸ್ಸಿನಲ್ಲಿ ಚಿತ್ರಿಸಿಕೊಂಡಿದ್ದರು. ಅಂಥ ಹೋಲಿಕೆ ‘ಪ್ರಾಯಶಃ ಸಮಂಜಸವಲ್ಲ’ ಎಂದು ರಾಜನ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಹೂಡಿಕೆ ವಾತಾವರಣ ನಿರ್ಮಿಸಲು ಬೇಕಾದ ಕ್ರಮಗಳನ್ನು ಕೈಗೊಂಡಿದೆ. ಅದು ನನಗೆ ಮುಖ್ಯ ಎನಿಸುತ್ತದೆ. ಸರ್ಕಾರ ಹೂಡಿಕೆದಾರರ ಆತಂಕಗಳಿಗೆ ಸ್ಪಂದಿಸುತ್ತಿದೆ ಮತ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದೆ ಎಂದ ರಾಜನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ ಸಜ್ಜಾದ CJP; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ: JDS ಶಾಸಕ ಹೆಚ್ ಡಿ ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು

ಸೀತಾಪುರದಲ್ಲಿ ವಿಚಿತ್ರ ಪ್ರಕರಣ: ಹಗಲು ಪ್ರೇಮಿ, ರಾತ್ರಿ ಗಂಡ ಬೇಕಂತೆ! ಇಬ್ಬರ ಜತೆ ಸಂಸಾರ ನಡೆಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ! Video

ಬೀದಿ ನಾಯಿಯ ಭೀಕರ ದಾಳಿ: ಮನೆಯಿಂದ ಹೊರಗೆ ಆಟವಾಡುತ್ತಿದ್ದ 5 ವರ್ಷದ ಬಾಲಕಿ ಗಂಭೀರ! Video