ವಾಣಿಜ್ಯ

ಕಾಲ್ ಡ್ರಾಪ್ ಆದರೆ ಮೊಬೈಲ್‌ನಲ್ಲಿ ಖರ್ಚಾದ ದುಡ್ಡು ವಾಪಸ್ ಬರುತ್ತದೆ!

Rashmi Kasaragodu

ನವದೆಹಲಿ: ಮೊಬೈಲ್ ಫೋನ್‌ನಲ್ಲಿ ಕರೆ ಮಾಡುವಾಗ ನೆಟ್ವರ್ಕ್ ಸಿಗ್ನಲ್ ಸರಿಯಾಗಿ ಸಿಗದೆ ಆಗಾಗ ಕರೆ ಕಟ್ ಆಗಿ ದುಡ್ಡು ಖರ್ಚಾದರೆ ಸಿಕ್ಕಾಪಟ್ಟೆ  ಸಿಟ್ಟು ಬಂದು ಬಿಡುತ್ತದೆ. ಆದರೆ ಆಗಸ್ಟ್ ತಿಂಗಳಿನಿಂದ ಹಾಗೆ ಆಗುವುದಿಲ್ಲ.

ನೀವು ಕರೆ ಮಾಡುವಾಗ ನೆಟ್ವರ್ಕ್ ಸಮಸ್ಯೆಯಿಂದಾಗಿ ಕಾಲ್ ಕಟ್ ಆದರೆ, ಖರ್ಚಾದ ದುಡ್ಡು ವಾಪಸ್ ನಿಮಗೆ ಬರುತ್ತದೆ. ಅಂದರೆ ಮೊಬೈಲ್ ನಲ್ಲಿ ಕರೆ ಮಾಡುವಾಗ ನಿಮ್ಮ ಕರೆ ಹೋಗದೇ ಇದ್ದರೂ, ಕರೆನ್ಸಿ ಕಟ್ ಆಗಿದ್ದರೆ ಆ ದುಡ್ಡನ್ನು ಟೆಲಿಕಾಂ ಆಪರೇಟರ್ ವಾಪಸ್ ನೀಡುತ್ತದೆ.

ಇಂಥಾ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಪ್ರಯೋಗಗಳು ನಡೆಯುತ್ತಿದ್ದು, ಮೂರು ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ದೇಶದಲ್ಲಿನ ಎಲ್ಲ ಮೊಬೈಲ್ ಸರ್ಕಲ್‌ಗಳನ್ನು ಮಾನಿಟರ್ ಮಾಡಿ ದುಡ್ಡು ವಾಪಸ್ ಬರುವಂತೆ ಮಾಡುವ ಯಂತ್ರ ಟೆಲಿಕಾಂ ವಿಭಾಗದಲ್ಲಿ ಕಾರ್ಯವೆಸಗುತ್ತಿದೆ. ಈ ಹೊಸ ತಂತ್ರಜ್ಞಾನದಿಂದಾಗಿ ಯಾವ ಮೊಬೈಲ್‌ನಿಂದ ಕಾಲ್ ಮಾಡಲಾಗಿದೆ, ಆ ಕರೆ ಯಾವಾಗ ಕಟ್ ಆಗಿ, ದುಡ್ಡು ಖರ್ಚಾಗಿದೆ ಎಂಬುದನ್ನು ಕಂಡು  ಹಿಡಿಯಬಹುದಾಗಿದೆ.

ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರದ ಪ್ರಕಾರ, ಕಾಲ್ ಡ್ರಾಪ್ ರೇಟ್  ಶೇ. 2 ಕ್ಕಿಂತ ಕಡಿಮೆ ಇರಬೇಕು. ಆದರೆ ಅದು ಏರಿಕೆಯಾಗುತ್ತಾ ಹೋಗಿ ಶೇ. 14ಕ್ಕೆ ತಲುಪಿದೆ.  ಭಾರತದಲ್ಲಿ 4-5 ಕರೆಗಳ ನಂತರವೇ ಸಾಮಾನ್ಯವಾಗಿ ಇಂಥಾ ಸಮಸ್ಯೆಗಳು ಎದುರಾಗುತ್ತಿವೆ.

SCROLL FOR NEXT