ವಾಣಿಜ್ಯ

ಎಚ್‍ಡಿಎಫ್ ಸಿ ಬ್ಯಾಂಕ್ ಎಟಿಎಂ ವಹಿವಾಟು, ಪ್ರಿಂಟ್‍ಔಟ್ ಸಿಗಲ್ಲ

Srinivasamurthy VN

ಮುಂಬೈ: ಹಣಕಾಸು ಕ್ಷೇತ್ರದಲ್ಲಿ ಹಲವು ವಿಧದ ತಂತ್ರಜ್ಞಾನಗಳನ್ನು ಬ್ಯಾಂಕಿಂಗ್ ಕ್ಷೇತ್ರ ಅನುಸರಿಸುತ್ತಿದೆ. ಎಟಿಎಂ ವಹಿವಾಟಿನ ಬಗ್ಗೆ ಈಗಾಗಲೇ ಹಲವು ಮಾಹಿತಿಗಳನ್ನು ಎಸ್‍ಎಂಎಸ್ ಮೂಲಕ ಬ್ಯಾಂಕ್ ಗಳು ಖಾತೆದಾರರಿಗೆ ನೀಡುತ್ತಿವೆ.

ಇದೀಗ ಖಾಸಗಿ ರಂಗದ ಪ್ರಮುಖ ಬ್ಯಾಂಕ್ ಆಗಿರುವ ಎಚ್‍ಡಿಎಫ್ ಸಿ ಬ್ಯಾಂಕ್ ಮುಂದಿನ ದಿನಗಳಲ್ಲಿ ಎಟಿಎಂ ಹಣ ವಿತ್ ಡ್ರಾ ಮಾಡಿದ ಬಳಿಕ ಮುದ್ರಿತ ಚೀಟಿ ನೀಡದೆ ಇರಲು, ವಹಿವಾಟಿನ ಎಲ್ಲ ಮಾಹಿತಿಯನ್ನು ಎಸ್‍ಎಂಎಸ್ ಮೂಲಕ ಗ್ರಾಹಕರಿಗೆ ನೀಡಲು ನಿರ್ಧರಿಸಿದೆ. ಮುದ್ರಿತ ಮಾಹಿತಿ ಪಡೆಯುವುದು ಆಯ್ಕೆಯ ವಿಚಾರವಾಗಿದ್ದರೂ, ಜೂನ್ ಅಂತ್ಯದ ಒಳಗೆ ಇದೂ ಸ್ಥಗಿತಗೊಳ್ಳಲಿದೆ ಎಂದು ಎಚ್‍ಡಿಎಫ್ ಸಿ ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಿನಿ ಸ್ಟೇಟ್‍ಮೆಂಟ್
ಖಾತೆಯ ವಿವರ, ಮಿನಿ ಸ್ಟೇಟ್ ಬೇಕಿದ್ದರೆ ಅದಕ್ಕೆ ಮತ್ತೊಮ್ಮೆ ಎಟಿಎಂ ಕಾರ್ಡ್ ಹಾಕಿ ಪಡೆದುಕೊಳ್ಳುವ ಅವಕಾಶವಿದೆ. ಮುದ್ರಿತ ವ್ಯವಹಾರದ ಮಾಹಿತಿ ನೀಡಲು ಬಾಂಕ್‍ಗೆ ಪ್ರತಿ ವರ್ಷ ರು10 ಕೋಟಿ ವೆಚ್ಚವಾಗುತ್ತದೆ. ಅದು ಉಳಿತಾಯವಾಗಲಿದೆ. ಗ್ರಾಹಕರು ಅವುಗಳನ್ನು ಕೂಡಲೇ ಬಿಸಾಡುವುದರಿಂದ ಖಾತೆದಾರರ ಮಾಹಿತಿ ಮತ್ತೊಬ್ಬರಿಗೆ ಸಿಕ್ಕಿ, ದುರುಪಯೋಗವಾಗುವ ಸಾಧ್ಯತೆ. ಹೊಸ ನಿರ್ಧಾರದಿಂದ ಅದನ್ನು ತಪ್ಪಿಸಿದಂತಾಗುತ್ತದೆ.

SCROLL FOR NEXT