ವಿಜಯಾ ಬ್ಯಾಂಕ್ 
ವಾಣಿಜ್ಯ

ವಿಜಯಾಬ್ಯಾಂಕ್‌ಗೆ ರು. ೧೧೫ ಕೋಟಿ ಲಾಭ

ಪ್ರಸಕ್ತ ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ವಿಜಯಾಬ್ಯಾಂಕ್ ರು. ೧೧೫.೨೯ ಕೋಟಿ ನಿವ್ವಳ ಲಾಭ ಗಳಿಸಿದೆ...

ಬೆಂಗಳೂರು: ಪ್ರಸಕ್ತ ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ವಿಜಯಾಬ್ಯಾಂಕ್ ರು. ೧೧೫.೨೯ ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ ರು.೧೪೩.೭೫ ಕೋಟಿಗೆ ಹೋಲಿಸಿದರೆ ಶೇ.೧೯.೮೦ರಷ್ಟು ಇಳಿಮುಖ ಕಂಡಿದೆ. ಬ್ಯಾಂಕ್‌ನ ಒಟ್ಟಾರೆ ಆದಾಯ ಕಳೆದ ವರ್ಷ ಇದೇ ಅವಧಿಯಲ್ಲಿ ರು.೩,೨೫೩.೭೫ ಕೋಟಿ ಇದ್ದರೆ, ಈ ವರ್ಷ ರು.೩,೨೦೨.೮೯ ಕೋಟಿಗೆ ಇಳಿದಿದೆ. ಬ್ಯಾಂಕ್‌ನ ಕಾರ್ಯಾಚರಣೆ ಆದಾಯದಲ್ಲಿ ಏರಿಕೆ ಕಂಡಿದ್ದರೂ ಎನ್‌ಪಿಎ (ಅನು ತ್ಪಾದಕ  ಆಸ್ತಿ)ಗೆ ಮಾತ್ರವೇ ರು.೨೭೨ ಕೋಟಿ ಪ್ರಾವಿಷನ್ ಮಾಡಿದ್ದರಿಂದ ನಿವ್ವಳ ಲಾಭ ಇಳಿಮುಖ ಕಂಡಿದೆ ಎಂದು ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಕಿಶೋರ್ ಸಾನ್ಸಿ ಹೇಳಿದ್ದಾರೆ. ನಿವ್ವಳ ಲಾಭ ಕುಸಿತಕ್ಕೆ ಮೂಲಸೌಕರ್ಯ ಮತ್ತು ಬೃಹತ್ ಕಾರ್ಪೊರೇಟ್ ಗಳು ಕಾರಣವಾಗಿವೆ ಎಂದಿದ್ದಾರೆ.

ಬ್ಯಾಂಕ್‌ನ ನಿವ್ವಳ ಎನ್‌ಪಿಎ ಶೇ.೨.೮೫ರಷ್ಟು ಇದ್ದದು  ಶೇ.೩.೯೮ಕ್ಕೆ ಏರಿಕೆ ಕಂಡಿದೆ. ಹೀಗಾಗಿ ಪ್ರಾವಿಷನ್ ಗಾಗಿ  ಶೇ.೫೮.೨೮ರಷ್ಟು  ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT