ವಾಣಿಜ್ಯ

ಕಾರ್ಪೋರೇಷನ್ ಬ್ಯಾಂಕ್ ಲಾಭ ಹೆಚ್ಚಳ

Mainashree
ಮಂಗಳೂರು: ಕಾರ್ಪೋರೇಷನ್ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ರು.188.61 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಬನ್ಸಾಲ್ ಹೇಳಿದ್ದಾರೆ. 
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಬ್ಯಾಂಕ್ ರು. 160.51 ಕೋಟಿ ಲಾಭ ಗಳಿಸಿತ್ತು. ಅದಕ್ಕೆ ಹೋಲಿಸಿದರೆ ಲಾಭಾಂಶ ಗಳಿಕೆಯಲ್ಲಿ 17.51 ಶೇಕಡಾ ಏರಿಕೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಬ್ಯಾಂಕಿನ ವಹಿವಾಟು ಆರು ಪಟ್ಟು ಏರಿಕೆಯಾಗಿದೆ ಎಂದರು. 
ಕಳೆದ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಬ್ಯಾಂಕ್ ರು. 391.98 ಕೋಟಿ ನಿವ್ವಳ ಲಾಭ ಗಳಿಸಿದ್ದರೆ, ಈ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ ರು. 392.87 ಕೋಟಿ ಆಗಿದೆ. ಬ್ಯಾಂಕ್ ವಹಿವಾಟು ಸೆಪ್ಟೆಂಬರ್ ಅಂತ್ಯಕ್ಕೆ ರು. 6,801 ಕೋಟಿಗಳಿಗೆ ತಲುಪಿದೆ. ಠೇವಣಿ ಮೊತ್ತ ರು.2,04,228 ಕೋಟಿಗಳಿಗೇರಿದೆ.
ಸೆಪ್ಟೆಂಬರ್ ಅಂತ್ಯಕ್ಕೆ ಬ್ಯಾಂಕಿನ ಎಟಿಎಂಗಳ ಸಂಖ್ಯೆ 2,998ಕ್ಕೇರಿದೆ. ರುಪೇ ವೇದಿಕೆಯಲ್ಲಿ ಮುದ್ರಾ ಕಾರ್ಡ್ ಜಾರಿಗೆ ತಂದ ಮೊದಲ ಬ್ಯಾಂಕ್ ತಮ್ಮದಾಗಿದೆ ಎಂದರು. ಒಟ್ಟು ಅನುತ್ಪಾದಕ ಆಸ್ತಿ ಪ್ರಮಾಣ ಸೆಪ್ಟೆಂಬರ್ ಅಂತ್ಯಕ್ಕೆ ಶೇ 5.32ಕ್ಕೆ ಇಳಿದಿದೆ ಎಂದು ಅವರು ವಿವರಿಸಿದರು. ದಶಕದಲ್ಲಿ 6 ಪಟ್ಟು ವಹಿವಾಟು ಏರಿಕೆ- ಅನುತ್ಪಾದಕ ಆಸ್ತಿ ಇಳಿಕೆ.
SCROLL FOR NEXT